ಪ್ರತಿ ಕನಸಿಗೂ ಜೊತೆ ನಿಲ್ಲುವ ಗೆಳೆಯ: ರಕ್ಷಿತ್ ಹುಟ್ಟುಹಬ್ಬಕ್ಕೆ ರಿಷಬ್ ಶೆಟ್ಟಿ ಹೃದಯಸ್ಪರ್ಶಿ ವಿಶ್
ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ಗೆಳೆಯ ರಿಷಬ್ ಶೆಟ್ಟಿ ಹೃದಯಸ್ಪರ್ಶಿ ವಿಶ್ ಮಾಡಿದ್ದಾರೆ.

ಸ್ಯಾಂಡಲ್‌ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರಿಗೆ ಇಂದು (ಜೂನ್ 6) ಹುಟ್ಟುಹಬ್ಬದ ಸಂಭ್ರಮ. ವಿಭಿನ್ನ ಶೈಲಿಯ ಸಿನಿಮಾಗಳ ಮೂಲಕವೇ ಅಭಿಮಾನಿಗಳ ಹೃದಯ ಗೆದ್ದಿರುವ ರಕ್ಷಿತ್ ಶೆಟ್ಟಿ ಅವರಿಗೆ ಅಭಿಮಾನಿಗಳು, ಸಿನಿಮಾರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೆ ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಸಿಂಪಲ್ ಸ್ಟಾರ್ ಫೋಟೋ, ವಿಡಿಯೋ ಶೇರ್ ಮಾಡಿ ಪ್ರೀತಿಯ ಶುಭಾಶಯ ತಿಳಿಸುತ್ತಿದ್ದಾರೆ. ವಿಶೇಷ ಎಂದರೆ ರಕ್ಷಿತ್ ಶೆಟ್ಟಿ ಗೆಳೆಯ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಸ್ನೇಹಿತನಿಗೆ ಹೃದಯಸ್ಪರ್ಶಿ ವಿಶ್ ಮಾಡಿದ್ದಾರೆ.
ರಕ್ಷಿತ್ ಜೊತೆಗಿರುವ ಸುಂದರ ನೆನಪುಗಳ ವಿಡಿಯೋವನ್ನು ಶೇರ್ ಮಾಡಿ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ಈ ವಿಡಿಯೋದಲ್ಲಿ ಕಾಂತಾರ ಸಿನಿಮಾ ನೋಡಿದ ಬಳಿಕ ರಕ್ಷಿತ್ ಓಡಿ ಬಂದು ರಿಷಬ್ ಶೆಟ್ಟಿಯನ್ನು ತಬ್ಬಿಕೊಂಡು ಭಾವುಕರಾಗಿದ್ದ ದೃಶ್ಯ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಇದನ್ನು ಶೇರ್ ಮಾಡಿ ತನ್ನ ಸಿನಿಪಯಣದ ಪ್ರತಿ ಕನಸಿಗೂ ಜೊತೆ ನಿಲ್ಲುವ ಗೆಳೆಯ ಎಂದು ರಕ್ಷಿತ್ ಶೆಟ್ಟಿಯನ್ನು ಹೊಗಳಿದ್ದಾರೆ ರಿಷಬ್.
'ನನ್ನ ಸಿನಿಪಯಣದ ಪ್ರತಿ ಕನಸಿಗೂ ಜೊತೆ ನಿಲ್ಲುವ ಗೆಳೆಯ, ಕ್ಯಾಮೆರಾ ಹಿಂದಿರಲಿ, ಮುಂದಿರಲಿ ಏನನ್ನೋ ಸದಾ ಹೊಸತೇನನ್ನೋ ಹುಡುಕುತ್ತಲೇ ಇರುವ ಸಿನಿಮಾರಾಧಕ. ಈ ಹುಟ್ಟುಹಬ್ಬದೊಂದಿಗೆ, ಮತ್ತಷ್ಟು ಹೊಸ ಹೊಸ ಕನಸುಗಳು ಹುಟ್ಟಿ, ತೆರೆ ಮೇಲೆ ಬರಲಿ. ಹ್ಯಾಪಿ ಬರ್ತಡೇ ಮಗಾ' ಎಂದು ಹೇಳಿದ್ದಾರೆ.
Rakshit Shetty Birthday: ಜನ್ಮದಿನಕ್ಕೆ 'ಸಪ್ತ ಸಾಗರದಾಚೆ ಎಲ್ಲೋ ' ಚಿತ್ರದಿಂದ ಸಿಕ್ತು ಬಿಗ್ ಸರ್ಪ್ರೈಸ್
ರಕ್ಷಿತ್ ಮತ್ತು ರಿಷಬ್ ಸ್ನೇಹಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇಬ್ಬರ ಸ್ನೇಹ ಹೀಗೆ ಇರಲಿ ಎಂದು ಹೇಳುತ್ತಿದ್ದಾರೆ. ಚಿರಕಾಲ ಇರಲಿ ಈ ಸ್ನೇಹ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ರಕ್ಷಿತ್ ಹಗ್ ಮಾಡಿ ಕಾಂತಾರ ಸಿನಿಮಾಗೆ ಫಿದಾ ಆಗಿರುವ ದೃಶ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಅಭಿಮಾನಿಗಳು ಹಾರ್ಟ್ ಇಮೋಜಿ ಇರಿಸಿ ವಿಶ್ ಮಾಡುತ್ತಿದ್ದಾರೆ.
ರಕ್ಷಿತ್ ಶೆಟ್ಟಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟನೆ ಜೊತೆಗೆ ನಿರ್ದೇಶನದಲ್ಲೂ ತೊಡಗಿಕೊಂಡಿದ್ದಾರೆ. ಸದ್ಯ 'ರಿಚರ್ಡ್ ಆಂಟನಿ ಸ್ಟ್ರಿಪ್ಟ್ ಕೆಲಸದಲ್ಲಿ ರಕ್ಷಿತ್ ಬ್ಯುಸಿಯಾಗಿದ್ದಾರೆ. ಸದ್ಯ'ಸಪ್ತಾ ಸಾಗರದಾಚೆ ಎಲ್ಲೋ 'ಸಿನಿಮಾದ ಶೂಟಿಂಗ್ ಮುಗಿಸಿದ್ದು ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾ ಎರಡು ಪಾರ್ಟ್‌ಗಳಲ್ಲಿ ರಿಲೀಸ್ ಆಗುತ್ತಿದೆ ಎಂದು ಬಹಿರಂಗ ಪಡಿಸಿದ್ದಾರೆ. ರಕ್ಷಿತ್ ಶೆಟ್ಟಿ ಸಿನಿಮಾ ಅಂದರೆ ಅಭಿಮಾನಿಗಳಲ್ಲಿ ಎಲ್ಲಿಲ್ಲದ ಕುತೂಹಲ ಹಾಗೂ ನಿರೀಕ್ಷೆ. ಪ್ರತಿ ಸಿನಿಮಾ ಮೂಲಕ ಏನಾದರೊಂದು ವಿಶೇಷತೆಯೊಂದಿಗೆ ತೆರೆಮೇಲೆ ಬರುವ ರಕ್ಷಿತ್ 'ಸಪ್ತಾ ಸಾಗರದಾಚೆ ಎಲ್ಲೋ' ಚಿತ್ರದ ಮೇಲೆ ಭಾರಿ ನಿರೀಕ್ಷೆ ಮೂಡಿಸಿದ್ದಾರೆ. ಜೂನ್ 15ಕ್ಕೆ ರಿಲೀಸ್ ಡೇಟ್ ಬಹಿರಂಗವಾಗಲಿದೆ.
Rishab Shetty: ಸರ್ಕಾರದ ಮುಂದೆ ಹೊಸ ಬೇಡಿಕೆ ಇಟ್ಟ 'ಕಾಂತಾರ' ಸ್ಟಾರ್, ಏನದು?
ಈ ಎರಡು ಸಿನಿಮಾಗಳ ಜೊತೆಗೆ ರಕ್ಷಿತ್, ಪುಣ್ಯಕೋಟಿ ಪಾರ್ಟ್ 1 ಮತ್ತು ಪಾರ್ಟ್ 2, ಮಿಡ್ ವೇ ಟು ಮೋಕ್ಷ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಬಗ್ಗೆ ರಕ್ಷಿತ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು. ಈ ಸಿನಿಮಾಗಳು ನಿದ್ದೆ ಇಲ್ಲದಂತೆ ಮಾಡಿವೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದರು. ಸದ್ಯ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಕ್ಷಿತ್ ಶೆಟ್ಟಿಗೆ ಅಭಿಮಾನಿಗಳು ವಿಶ್ ಮಾಡುವ ಜೊತೆಗೆ ಬೇಗ ತೆರೆಮೇಲೆ ಬನ್ನಿ ಎಂದು ಹೇಳುತ್ತಿದ್ದಾರೆ.