Udupi: ಕುಂದಾಪುರದ ಗದ್ದೆಗಳಲ್ಲಿ ಟೆಂಟ್ ಹಾಕಿ ಕಾಂತಾರ ವೀಕ್ಷಣೆ, ಇದು ನ್ಯೂ ಇಯರ್ ಸ್ಪೆಷಲ್

ಕುಂದಾಪುರ, ಬ್ರಹ್ಮಾವರ ತಾಲೂಕಿನ ಕೆಲವು ಭಾಗಗಳಲ್ಲಿ ಬಯಲು ಟಾಕೀಸ್ ಮತ್ತೆ ಚಾಲ್ತಿಗೆ ಬರುತ್ತಿದೆ. ತಾತಾ ಮುತ್ತಾತನ ಕಾಲದಲ್ಲಿ ಕರ್ಮಷಿಯಲ್ ಉದ್ದೇಶಕ್ಕೆ ಬಯಲು ಟಾಕೀಸ್ ಹಾಕಿ ಟಿಕೆಟ್ ಕೊಟ್ಟು ಸಿನೆಮಾ ತೋರಿಸಲಾಗುತ್ತಿತ್ತು, ಆದರೆ ಮಾರ್ಡನ್ ಬಯಲ ಟಾಕೀಸ್ ನಲ್ಲಿ ಊರಿನ ಉತ್ಸಾಹಿ ಯುವಕರೇ ಎಲ್ ಇಡಿ ಹಾಕಿ ಸಿನೇಮಾ ತೋರಿಸುತ್ತಿದ್ದಾರೆ. 

kantara screening in kundapura paddy field its new year special gow

ಉಡುಪಿ (ಜ.2): ಕಾಂತಾರ ಚಿತ್ರದ ಸಿಂಗಾರ ಸಿರಿಯೇ ಎನ್ನುವ ಗೀತೆಯಲ್ಲಿ ಊರಿನ ಮಧ್ಯೆ ಚಲನಚಿತ್ರ ಪ್ರದರ್ಶನವಾಗುವ ದೃಶ್ಯ ನೀವು ನೋಡಿಯೇ ಇರುತ್ತಿರಿ. ಇತ್ತೀಚೆಗೆ ಕೆಲವು ವರ್ಷಗಳಲ್ಲಿ ಅಂತಹ ಬಯಲು ಟಾಕೀಸ್ ನ ದೃಶ್ಯ ಮರೆಯಾಗಿದೆ. ಆದರೆ ಇದೇ ಕಾಂತಾರ ಚಲನಚಿತ್ರ ಬಂದ ಬಳಿಕ ಬಯಲು ಟಾಕೀಸ್ ಗಳು ಮತ್ತೆ ಜನರಿಂದಲೇ ಆಯೋಜನೆಯಾಗುತ್ತಿದೆ. ಹಿಂದೆಲ್ಲಾ ಸಿನೆಮಾ ನೋಡಬೇಕು ಎಂದರೆ ದೂರದ ಊರಿಗೆ ಹೋಗಿ ಟೆಂಟ್ ಟಾಕೀಸ್ ನಲ್ಲಿ ಸಿನೆಮಾ ನೋಡಬೇಕಿತ್ತು. ಅದು ಕೂಡು ಸಿನೆಮಾ ನೋಡುವುದು ಶ್ರೀಮಂತಿಕೆ ಸಂಕೇತ ಎನ್ನುವಂತಿತ್ತು. ಆದರೆ ಕಾಲ ಬದಲಾದ ಹಾಗೇ ಸಿನೆಮಾ ವೀಕ್ಷಣೆ ಗೆ ಸಾಕಷ್ಟು ವ್ಯವಸ್ಥೆಗಳಾಗಿ ಸಿನೆಮಾ ಜನಜನಿತವಾಗುತ್ತಾ ಬಂತು. 

ನಂತರದ ದಿನಗಳನ್ನು ಊರಿನ ಮಧ್ಯೆದಲ್ಲಿ ಟೆಂಟ್ ಹಾಕಿ ಸಿನೆಮಾ ತೋರಿಸುವ ವ್ಯವಸ್ಥೆ ಬಂತು, ಬಳಿಕ ಊರಿಗೊಂದು ಥಿಯೇಟರ್ ಗಳಾದರೂ ಈ ಬಯಲು ಸಿನೆಮಾ ಪ್ರದರ್ಶನ ನಿಂತಿರಲಿಲ್ಲಾ. ಟಿವಿ ಬಂದ ಮೇಲಂತು ಸಿನೆಮಾ ಪ್ರತಿ ಮನೆಗೆ ಎನ್ನುವಂತಾಗಿದೆ, ಸದ್ಯ ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈ ಜಮಾನ ಕಿರು ಬೆರಳಿನಲ್ಲಿ ಸಿನೆಮಾ ಮನೋರಂಜನೆ ಬಂದು ನಿಂತಿದೆ. ಇದರ ಜೊತೆಗೆ ಮೊಬೈಲ್ ನಲ್ಲಿ ಸಿನೆಮಾ ನೋಡುವ ವ್ಯವಸ್ಥೆ ಈ ಕಾಲದಲ್ಲಿ ಬಯಲು ಸಿನೆಮಾ ಮತ್ತೆ ಜಾಲ್ತಿಗೆ ಬಂದಿದೆ ಎಂದರೆ ನೀವು ನಂಬಲೆಬೇಕು.
ಈ ಬದಲಾವಣೆಗೆ ಕಾರಣ ಕಾಂತಾರ.

ಕಾಂತಾರ ಸಿನೆಮಾದ ಕುರಿತ ಬಾಯಿಯಿಂದ ಬಾಯಿಗೆ ಆದ ಪ್ರಚಾರ ಯಾವ ಮಟ್ಟಿಗೆ ಸಿನೆಮಾ ಕ್ರೇಜ್ ಸೃಷ್ಟಿಸಿದೆ ಎಂದರೆ ದಶಕಗಳ ಕಾಲ ಸಿನೆಮಾ ನೋಡಲು ಟಾಕೀಸ್ ಗೆ ಬಾರದವರು ಬಂದು ನೋಡುವಂತಾಗಿದೆ. ಸದ್ಯ ಕಾಂತಾರ ಸಿನೆಮಾ ವೀಕ್ಷಣೆ ವ್ಯಾಕ್ಸಿನ್ ಹಾಕಿಸಿಕೊಳ್ಳುವಷ್ಟೇ ಕಡ್ಡಾಯ ಎನ್ನುವ ಹಾಗೆ ಆಗಿರುವ ಹಿನ್ನಲೆಯಲ್ಲಿ ಹಿರಿಯ ಜೀವಗಳು ಕೂಡ ಚಿತ್ರ ವೀಕ್ಷಣೆಗೆ ಮನಸ್ಸು ಮಾಡುತ್ತಿವೆ. 

ಹೀಗಾಗಿ ಕುಂದಾಪುರ, ಬ್ರಹ್ಮಾವರ ತಾಲೂಕಿನ ಕೆಲವು ಭಾಗಗಳಲ್ಲಿ ಬಯಲು ಟಾಕೀಸ್ ಮತ್ತೆ ಚಾಲ್ತಿಗೆ ಬರುತ್ತಿದೆ. ತಾತಾ ಮುತ್ತಾತನ ಕಾಲದಲ್ಲಿ ಕರ್ಮಷಿಯಲ್ ಉದ್ದೇಶಕ್ಕೆ ಬಯಲು ಟಾಕೀಸ್ ಹಾಕಿ ಟಿಕೆಟ್ ಕೊಟ್ಟು ಸಿನೆಮಾ ತೋರಿಸಲಾಗುತ್ತಿತ್ತು, ಆದರೆ ಮಾರ್ಡನ್ ಬಯಲ ಟಾಕೀಸ್ ನಲ್ಲಿ ಊರಿನ ಉತ್ಸಾಹಿ ಯುವಕರೇ ಎಲ್ ಇಡಿ ಹಾಕಿ ಸಿನೇಮಾ ತೋರಿಸುತ್ತಿದ್ದಾರೆ. 

ಸುವರ್ಣ ಪಾರ್ಟಿ ವಿತ್ ರಿಷಬ್ ಶೆಟ್ಟಿ; ಅನುರಾಗ್‌ ಕಶ್ಯಪ್‌ ವಾರ್ನಿಂಗ್‌ ಉತ್ತರ ಕೊಟ್ಟ ಕಾಂತಾರ ನಟ

ಊರಿನ ಹಿರಿಯ ಕಿರಿಯ ಜೀವಗಳಿಗೆ ಕುಳಿತುಕೊಳ್ಳಲು ಕುರ್ಚಿ ವ್ಯವಸ್ಥೆಯ ಜೊತೆಗೆ ತೆರೆ ಮೈದಾನದಲ್ಲಿ ಸಿನೆಮಾ ವೀಕ್ಷಣೆ ಯಾವ ಮಲ್ಟಿಫ್ಲೆಕ್ಸ್ ನಲ್ಲಿದೆ ಹೇಳಿ. ಓಟಿಟಿ ಪ್ಲಾಟ್ ಫಾರಂ ನಲ್ಲಿರುವ ಕಾಂತಾರ ಸಿನೆಮಾವನ್ನು ತೆರೆದ ಮೈದಾನದಲ್ಲಿ ಕಣ್ಣು ತುಂಬಿಕೊಳ್ಳುತ್ತಿದ್ದಾರೆ ಕುಂದಾಪುರ ಭಾಗದ ಪ್ರೇಕ್ಷಕರು.

ಮುಂದೆ ಏನು ಮಾಡುತ್ತೀಯಾ ಅದು ಮುಖ್ಯ: ರಿಷಬ್'ಗೆ ಕಿವಿ ಮಾತು ಹೇಳಿದ್ರಂತೆ ಕಮಲ್‌ ಹಾಸನ್‌

ಒಟ್ಟಾರೆಯಾಗಿ, ಕಾಂತಾರ ಸಿನೆಮಾ ದ ಮೂಲಕ ಸಮಾಜದಲ್ಲಿ ಇಂತಹ ಬದಲಾವಣೆಗಳು ಆಗುತ್ತಿದೆ. ಯುವ ಪೀಳಿಗೆ ಕೂಡ ಹಿರಿಯ ಜೀವಗಳಿಗೆ ಸಿನೆಮಾ ತೋರಿಸುವ ಉತ್ಸಾಹ ಮೆರೆಯುತ್ತಿದ್ದಾರೆ. ಇಂತಹ ಸದಭಿರುಚಿಯ ಚಿತ್ರಗಳು ಇನ್ನಷ್ಟು ಬರಲಿ ಊರಿನವರು ಒಂದಾಗಿ ಚಿತ್ರ ನೋಡುವ ಮೂಲಕ ಸಮಾಜದಲ್ಲಿ ಪಾಸಿಟಿವ್ ಪರಿವರ್ತನೆಗಳಾಗಲಿ, ಸಾಮರಸ್ಯ ಸದಾ ಕಾಲ ಉಳಿಯುವಂತಾಗಲಿ ಎನ್ನುವದು ನಮ್ಮ ಆಶಯ.

Latest Videos
Follow Us:
Download App:
  • android
  • ios