ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮಮಂದಿರ ಉದ್ಘಾಟನೆಗೆ ರಿಷಬ್ ಶೆಟ್ಟಿ ಅವರನ್ನೂ ಆಹ್ವಾನಿಸಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈ ಕುರಿತು ಅವರು ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿರಲಿಲ್ಲ. 

ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮಮಂದಿರ ಉದ್ಘಾಟನೆಗೆ ರಿಷಬ್ ಶೆಟ್ಟಿ ಅವರನ್ನೂ ಆಹ್ವಾನಿಸಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈ ಕುರಿತು ಅವರು ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿರಲಿಲ್ಲ. ಇದೀಗ ರಿಷಬ್ ಶೆಟ್ಟಿ ಅವರೇ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ಈ ಅವಕಾಶಕ್ಕೆ ನಾನು ಸದಾ ಚಿರಋಣಿ. ಜೈ ಶ್ರೀರಾಮ್ ಎಂದು ಬರೆದುಕೊಂಡಿದ್ದಾರೆ. 

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ರಿಷಬ್, ಶ್ರೀರಾಮ ಜಯ ರಾಮ ಜಯ ಜಯ ರಾಮ ಎಂದು ತಲೆ ಬರಹ ಕೊಟ್ಟು, ಬಾಲ್ಯದಿಂದಲೂ ನಮ್ಮ ಮನೆಗಳಲ್ಲಿ ರಾಮ ನಾವಮವ ಭಜಿಸುತ್ತಾ, ರಾಮ ಪ್ರೇಮವ ಭಜಿಸುತ್ತಾ ಆತನ ಆದರ್ಶಪ್ರಾಯ ಜೀವನದ ಕಥೆಗಳನ್ನು ಗುರು ಹಿರಿಯರಿಂದ ಕೇಳುತ್ತಾ ಬೆಳೆದವರು ನಾವು. ಇಂದು ಶ್ರೀ ರಾಮ ಮಗುವಾಗಿ ಆಡಿದ, ಪ್ರಭುವಾಗಿ ಆಳಿದ ಆ ಅಯೋಧ್ಯೆಗೆ ಬರುವಂತೆ ಕರೆ ಕಳಿಸಿದ್ದಾನೆ. ಇದು ನನ್ನ ಪೂರ್ವ ಜನ್ಮದ ಪುಣ್ಯವೇ ಸರಿ. ಶ್ರೀರಾಮನಿಗೆ ಜಯವಾಗಲಿ. ಅಯೋಧ್ಯೆಗೆ ಜಯವಾಗಲಿ ಎಂದಿದ್ದಾರೆ.

View post on Instagram


ರಿಷಬ್​ ಶೆಟ್ಟಿ ಅವರು ‘ಕಾಂತಾರ’ ಸಿನಿಮಾದ ಯಶಸ್ಸಿನಿಂದ ಪ್ಯಾನ್​ ಇಂಡಿಯಾ ಸ್ಟಾರ್​ ಆದರು. ನಟನಾಗಿ, ನಿರ್ದೇಶಕನಾಗಿ ಅವರಿಗೆ ಬಹಳ ಬೇಡಿಕೆ ಇದೆ. ರಾಷ್ಟ್ರ ಮಟ್ಟದಲ್ಲಿ ಅವರು ಗುರುತಿಸಿಕೊಂಡಿದ್ದಾರೆ. ಈಗ ‘ಕಾಂತಾರ: ಚಾಪ್ಟರ್​ 1’ ಸಿನಿಮಾದ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಇದರ ನಡುವೆ ಅವರು ಅಯೋಧ್ಯೆಗೆ ತೆರಳುವ ಅವಕಾಶ ಪಡೆದಿದ್ದಾರೆ. ಈ ಅವಕಾಶಕ್ಕಾಗಿ ಅಭಿಮಾನಿಗಳು ಫುಲ್ ಖುಷ್ ಆಗಿ ಅಭಿನಂದನೆ ತಿಳಿಸುತ್ತಿದ್ದಾರೆ.

ರಿಷಬ್ ಶೆಟ್ಟಿ ಜೊತೆ ಕನ್ನಡದ ಇನ್ನೂ ಅನೇಕ ನಟರಿಗೂ ಆಹ್ವಾನ ನೀಡಲಾಗಿದೆ. ನಟ ಹಾಗೂ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರಿಗೆ ರಾಮಮಂದಿರ ಉದ್ಘಾಟನೆಗೆ ಬರುವಂತೆ ಆಹ್ವಾನ ನೀಡಲಾಗಿದೆ. ಉದ್ಘಾಟನೆಗೆ ಕುಟುಂಬ ಸಮೇತ ಬರುವಂತೆ, ರಾಮ ಜನ್ಮಭೂಮಿ ಟ್ರಸ್ಟ್ ವತಿಯಿಂದ ಆಹ್ವಾನ ನೀಡಲಾಗಿದೆ. ಯಶ್ ಅವರಿಗೂ ಬರುವಂತೆ ಆಹ್ವಾನ ನೀಡಲಾಗಿದೆಯಂತೆ. ಕನ್ನಡ ಸಿನಿಮಾ ರಂಗದ ಬೆರಳೆಣಿಕೆಯ ಕಲಾವಿದರಿಗೆ ಇಂಥದ್ದೊಂದು ಅವಕಾಶ ಸಿಕ್ಕಿದೆ. 

ದೈವ ಸನ್ನಿಧಿಯಲ್ಲಿ ರಿಷಬ್ ಶೆಟ್ಟಿ ದಂಪತಿ: ಕೋಲದ ವಿಡಿಯೋ ಹಂಚಿಕೊಂಡ ಕಾಂತಾರ ನಟ!

ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಅಮಿತಾಬ್ ಬಚ್ಚನ್, ರಜನಿಕಾಂತ್, ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ, ಆಲಿಯಾ ಭಟ್, ರಣಬೀರ್ ಕಪೂರ್, ಪ್ರಭಾಸ್, ರಾಮ್ ಚರಣ್, ಕಂಗನಾ ರನೌತ್, ಆಯುಷ್ಮಾನ್ ​ಖುರಾನಾ, ರಣದೀಪ್​ಹೂಡಾ, ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಒಂದು ಕಡೆ ಉದ್ಘಾಟನೆಗೆ ಆಹ್ವಾನ ಸಿಗುತ್ತಿದ್ದರೆ ಮತ್ತೊಂದು ಕಡೆ ಸಿನಿಮಾ ಸೆಲೆಬ್ರಿಟಿಗಳು ಕೂಡ ದೇಣಿಗೆ ನೀಡುತ್ತಿದ್ದಾರೆ. ಬಹುಭಾಷಾ ನಟಿ ಪ್ರಣೀತಾ ಸುಭಾಷ್, ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ. 1 ಲಕ್ಷ ದೇಣಿಗೆ ನೀಡುವ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ನಟಿ ಪಾತ್ರರಾಗಿದ್ದಾರೆ.