- Home
- Entertainment
- Sandalwood
- Bedroom ಫೋಟೋ ಹಂಚಿಕೊಂಡ ಲವ್ ಮಾಕ್ಟೇಲ್ 2 ನಟಿ: ಅರೆರೆ ರಚೆಲ್‌ಗೆ ಏನಾಯ್ತು ಅನ್ನೋದಾ ನೆಟ್ಟಿಗರು!
Bedroom ಫೋಟೋ ಹಂಚಿಕೊಂಡ ಲವ್ ಮಾಕ್ಟೇಲ್ 2 ನಟಿ: ಅರೆರೆ ರಚೆಲ್‌ಗೆ ಏನಾಯ್ತು ಅನ್ನೋದಾ ನೆಟ್ಟಿಗರು!
‘ಲವ್ ಮಾಕ್ಟೇಲ್ 2’ ಮೂಲಕ ’ಸಿಹಿ’ಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ರಚೆಲ್ ಡೇವಿಡ್. ಸದ್ಯ ಕನ್ನಡದ ಮೂರು ಚಿತ್ರಗಳು ಸೇರಿದಂತೆ ತಮಿಳು ಚಿತ್ರರಂಗದಲ್ಲೂ ಬ್ಯುಸಿಯಾಗಿದ್ದಾರೆ.

ರಚೆಲ್ ಡೇವಿಡ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಬೋಲ್ಡ್ ಫೋಟೋಗಳನ್ನು ರಚೆಲ್ ಶೇರ್ ಮಾಡಿಕೊಳ್ಳುತ್ತಾರೆ.
ಇದೀಗ ನಟಿ ರಚೆಲ್ ಡೇವಿಡ್ ವೈಟ್ ಡ್ರೆಸ್‌ನಲ್ಲಿ ವಿವಿಧ ಭಂಗಿಗಳಲ್ಲಿ ಬೆಡ್ ಮೇಲೆ ಮಲಗಿರುವ ಪೋಟೋಗಳನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಚೆಲ್ ಹಂಚಿಕೊಂಡಿರುವ ಪೋಟೋಗಳಿಗೆ ನೆಟ್ಟಿಗರು, ಸೋ ಬ್ಯೂಟಿಫುಲ್, ನೈಸ್, ಹಾಟ್, ಸೆಕ್ಸಿ, ಅರೆರೆ ನಿಮಗೆ ಏನಾಯ್ತು, ಸೇರಿದಂತೆ ತರೇಹವಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.
ನಟಿ ರಚೆಲ್ ಡೇವಿಡ್ ಅವರು ಕನ್ನಡದ ‘ಲವ್ ಮಾಕ್ಟೇಲ್ 2’ ಚಿತ್ರದಲ್ಲಿ ನಟಿಸಿ ಫೇಮಸ್ ಆದರು. ಅವರು ಕನ್ನಡದಲ್ಲಿ ನಟಿಸಿದ ಮೊದಲ ಸಿನಿಮಾ ಇದು. ರೇಚಲ್ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ.
ಪರಭಾಷೆಯಲ್ಲಿ ರಚೆಲ್‌ಗೆ ಸಾಕಷ್ಟು ಬೇಡಿಕೆ ಇದೆ. ಮಲಯಾಳಂ ಚಿತ್ರದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ರೇಚಲ್ ಸದ್ಯ ತಮಿಳು ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ‘ವಾಕಿಂಗ್ ಟಾಕಿಂಗ್ ಸ್ಟ್ರಾಬೆರಿ ಐಸ್ಕ್ರೀಮ್’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ.
ಈಗಿನ ಕಾಲದಲ್ಲಿ, ತೆರೆಯ ಮೇಲೆ ಕಾಣಿಸಿಕೊಳ್ಳಲು ವಯಸ್ಸು ಅಡ್ಡಿಯಾಗಬಾರದು ಎಂದು ನಾನು ನಂಬುತ್ತೇನೆ. ನನಗೆ ಹೆಚ್ಚು ಮುಖ್ಯವಾದುದು ಕಂಟೆಂಟ್. ನನ್ನ ಹಿಂದಿನ ಚಿತ್ರಗಳಿಗಿಂತ ಸಂಪೂರ್ಣವಾಗಿ ವಿಭಿನ್ನವಾದುದನ್ನು ಮಾಡುವ ಗುರಿಯನ್ನು ಹೊಂದಿದ್ದೇನೆ.
ನಾನು ಯಾವುದೇ ಹೊಸ ಅಥವಾ ಅನುಭವಿ ನಟರೊಂದಿಗೆ ಜೋಡಿಯಾಗಿದ್ದರೂ, ನನ್ನ ಪಾತ್ರಕ್ಕೆ ಎಷ್ಟು ಮೌಲ್ಯವಿದೆ ಎಂಬುದು ನನಗೆ ಮುಖ್ಯ ವಿಚಾರ. ಈ ಸಂದರ್ಭದಲ್ಲಿ, ನಾನು ಸಂಪೂರ್ಣವಾಗಿ ನಿರ್ದೇಶಕರ ಇಚ್ಛೆಯಂತೆ ಹೋಗಿದ್ದೇನೆ ಎಂದು ರಚೆಲ್ ಈ ಹಿಂದೆ ತಿಳಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.