'ಕಾಶ್ಮೀರ್ ಫೈಲ್ಸ್' ನಟ ಅನುಪಮ್ ಖೇರ್ ಜೊತೆ ರಿಷಬ್ ಶೆಟ್ಟಿ; 'ಕಾಂತಾರ' ಶಿವನ ನಗುವಿಗೆ ಅಭಿಮಾನಿಗಳು ಫಿದಾ

ಕಾಂತಾರ ಹೀರೋ ರಿಷಬ್ ಶೆಟ್ಟಿ ಬಾಲಿವುಡ್ ಖ್ಯಾತ ನಟ ಅನುಪಮ್ ಖೇರ್ ಮತ್ತು ನಿರ್ದೇಶಕ ಮಧುರ್ ಭಂಡಾರ್ಕರ್ ಅವರನ್ನು ಭೇಟಿಯಾಗಿದ್ದಾರೆ. 

Kantara hero Rishab Shetty meets Anupam Kher and madhur bhandarkar sgk

ಸ್ಯಾಂಡಲ್ ವುಡ್ ಸ್ಟಾರ್, ಕಾಂತಾರ ಹೀರೋ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವ ನಟ ರಿಷಬ್ ಶೆಟ್ಟಿ ದೆಹಲಿ ಪ್ರವಾಸದಲ್ಲಿದ್ದಾರೆ. ಕಾಂತಾರ ಸೂಪರ್ ಸಕ್ಸಸ್ ಬಳಿಕ ರಿಷಬ್ ಶೆಟ್ಟಿ ಬೇಡಿಕೆ ಹೆಚ್ಚಾಗಿದೆ. ಅಭಿಮಾನಿ ಬಳಗ ದೊಡ್ಡದಾಗುವ ಜೊತೆಗೆ ಮಾರುಕಟ್ಟೆ ಕೂಡ ವಿಸ್ತಾರವಾಗಿದೆ. ಹಿಂದಿಯ ಅನೇಕ ಕಾರ್ಯಕ್ರಮಗಳಿಗೆ ರಿಷಬ್ ಶೆಟ್ಟಿಗೆ ಆಹ್ವಾನ ಬರುತ್ತಿದೆ. ಇತ್ತೀಚಿಗಷ್ಟೆ ರಿಷಬ್ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಅಲ್ಲಿ ಬಾಲಿವುಡ್ ಖ್ಯಾತ ನಟ ಮತ್ತು ನಿರ್ದೇಶಕರನ್ನು ಭೇಟಿಯಾಗಿದ್ದಾರೆ. ರಿಷಬ್ ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಿಷಬ್ ಶೆಟ್ಟಿ ಅವರೇ ಫೋಟೋ ಶೇರ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. 

ರಿಷಬ್ ಶೆಟ್ಟಿ ಒಂದು ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡೆವು. ಕೆಲವು ನಿಮಿಷ ಅವರ ಜೊತೆ ಸಮಯ ಕಳೆದೆ ಎಂದು ಬಾಲಿವುಡ್ ಖ್ಯಾತ ನಟ ಅನುಪಮ್ ಖೇರ್ ಬರೆದುಕೊಂಡು ರಿಷಬ್ ಜೊತೆ ಫೋಟೋ ಶೇರ್ ಮಾಡಿದ್ದಾರೆ. ಅನುಪಮ್ ಶೇರ್ ಟ್ವೀಟ್ ಅನ್ನು ರಿಟ್ವೀಟ್ ಮಾಡಿರುವ ರಿಷಬ್ ಶೆಟ್ಟಿ ಕೂಡ ಅನುಪಮ್ ಖೇರ್ ಅವರನ್ನು ಹಾಡಿ ಹೊಗಳಿದ್ದಾರೆ. ಎಲ್ಲರನ್ನೂ ನಗಿಸುವ ಅದ್ಭುತ ಮನುಷ್ಯ. ನಿಮ್ಮೊಂದಿಗೆ ಕಳೆದ ಸಂಜೆ ಅದ್ಭುತವಾಗಿತ್ತು' ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. 

ಅಂದಹಾಗೆ ರಿಷಬ್ ಶೆಟ್ಟಿ ಅವರ ಡ್ರೆಸ್ ಎಲ್ಲರಿಗೂ ಇಷ್ಟವಾಗುತ್ತಿದೆ. ದೆಹಲಿಯ ದೊಡ್ಡ ಕಾರ್ಯಕ್ರಮದಲ್ಲೂ ರಿಷಬ್ ಪಂಚೆ ಮತ್ತು ಶರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಸರಳತೆ ಮತ್ತು ಡ್ರೆಸ್ ವಿಚಾರಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 'ಪಂಚೆ ದೊಡ್ಡ ಸ್ಟೇಜ್ ತನಕ ಹೋಗಿದ್ದು ತುಂಬಾ ಇಷ್ಟವಾಯಿತು' ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಇನ್ನು ಕೆಲವರು ಕಾಮೆಂಟ್ 'ಇಬ್ಬರೂ ಒಟ್ಟಿಗೆ ಕೆಲಸ ಮಾಡುವ ಸಾಧ್ಯತೆ ಇದಿಯಾ' ಎಂದು ಪ್ರಶ್ನೆ ಮಾಡುತ್ತಿದ್ದಾರೆ.

Bagalkote: ಇಳಕಲ್‌ ಸೀರೆಯ ಮೇಲೆ ಕಾಂತಾರ: ಆಸ್ಕರ್ ಅವಾರ್ಡ್‌ಗಾಗಿ ಶುಭ ಹಾರೈಸಿದ ಯುವ ನೇಕಾರ ಮೇಘರಾಜ್

ನಟ, ನಿರ್ದೇಶಕ ರಿಷಬ್ ಶೆಟ್ಟಿ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅವರನ್ನು ಭೇಟಿಯಾಗಿದ್ದು ಮಾತ್ರವಲ್ಲ, ಮತ್ತೋರ್ವ ಖ್ಯಾತ ನಿರ್ದೇಶಕ ಮಧುರ್ ಭಂಡಾರ್ಕರ್ ಅವರನ್ನು ಭೇಟಿಯಾಗಿ ಸಂತಸ ಪಟ್ಟಿದ್ದಾರೆ. ರಿಷಬ್ ಶೆಟ್ಟಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಗ್ಗೆ ಮಧುರ್ ಭಂಡಾರ್ಕರ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ರಿಷಬ್ ಶೆಟ್ಟಿ ಜೊತೆ ಇರುವ ಫೋಟೋ ಶೇರ್ ಮಾಡಿ, 'ಅತ್ಯಂತ ಸರಳ ಮತ್ತು ವಿನಮ್ರ ವ್ಯಕ್ತಿ ರಿಷಬ್ ಶೆಟ್ಟಿ ಜೊತೆ ಇಂದು ದೆಹಲಿಯಲ್ಲಿ ಸಂವಾದ. ಡಿವೈನ್ ಬ್ಲಾಕ್ ಬಸ್ಟರ್ ಕಾಂತಾರ ಸಿನಿಮಾದ ನಿರ್ದೇಶನ ಮತ್ತು ಅವರ ನಟನೆ ಅದ್ಭುತ' ಎಂದು ಬರೆದುಕೊಂಡಿದ್ದಾರೆ. 

ಬಾಲಿವುಡ್ ಖ್ಯಾತ ನಿರ್ದೇಶಕರ ಮಾತುಗಳು ರಿಷಬ್ ಶೆಟ್ಟಿಗೆ ಸಂತಸ ತಂದಿದೆ. ಮಧುರ್  ಭಂಡಾರ್ಕರ್ ಟ್ವೀಟ್ ಅನ್ನು ರಿಷಬ್ ಶೆಟ್ಟಿ ರಿಟ್ವೀಟ್ ಮಾಡಿದ್ದಾರೆ. ರಿಷಬ್ ಶೆಟ್ಟಿ ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸಿ ಅನೇಕರು ವರಾಹ ರೂಪಮ್ ಹಾಡನ್ನು ಪಾವಾಸ್ ತಂದು ಕೊಡಿ ಎಂದು ಕೇಳುತ್ತಿದ್ದಾರೆ.

'ವರಾಹ ರೂಪಂ' ಹಾಡು ಬಳಕೆಗೆ ಇನ್ನೂ ಅನುಮತಿ ಸಿಕ್ಕಿಲ್ಲ; ನ್ಯಾಯವ್ಯಾಪ್ತಿ ಅಡ್ಡಿ ಎಂದ ಕೋಯಿಕ್ಕೋಡ್‌ ಕೋರ್ಟ್‌

ಕಾಂತಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿದ್ದು ಕೋಟಿ ಕೋಟಿ ಬಾಚಿಕೊಂಡಿದೆ. ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಕಲಾವಿದರು ಸಿನಿಮಾ ನೋಡಿ ಇಷ್ಟಪಟ್ಟಿದ್ದಾರೆ. ಅಂದಹಾಗೆ ಈಗಾಗಲೇ ಕಾಂತಾರ ಸಿನಿಮಾ 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಚಿತ್ರಮಂದಿರದಲ್ಲಿ ಅಬ್ಬರಿಸಿರುವ ಕಾಂತಾರ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಕಾಂತಾರ ಸಿನಿಮಾ ಬಿಡುಗಡೆಯಾಗಿದೆ. ಒಟಿಟಿಯಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.   

Latest Videos
Follow Us:
Download App:
  • android
  • ios