Asianet Suvarna News Asianet Suvarna News

Bagalkote: ಇಳಕಲ್‌ ಸೀರೆಯ ಮೇಲೆ ಕಾಂತಾರ: ಆಸ್ಕರ್ ಅವಾರ್ಡ್‌ಗಾಗಿ ಶುಭ ಹಾರೈಸಿದ ಯುವ ನೇಕಾರ ಮೇಘರಾಜ್

ಸದ್ಯ ಕನ್ನಡ ಚಲನಚಿತ್ರರಂಗದಲ್ಲಿ ಅಷ್ಟೇ ಅಲ್ಲದೆ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲೂ ಕೂಡ ಚರ್ಚೆಯಾಗುತ್ತಿರುವ ಕನ್ನಡಿಗರ ಹೆಮ್ಮೆಯ ಸಿನಿಮಾ ಅಂದ್ರೆ ಅದುವೇ ಕಾಂತಾರಾ. ನಟ ರಿಷಬ್ ಶೆಟ್ಟಿ ಅವರ ನಿರ್ದೇಶನದಲ್ಲಿ ಮೂಡಿ ಬಂದಿರೋ ಕಾಂತಾರ ಈಗ ಅದ್ಭುತ ಯಶಸ್ಸು ಕಂಡಿದೆ.

Bagalkote Ilkal Special Saree For Kantara Kannada Movie Wish To Win Oscar Award By Weaver Megharaj gvd
Author
First Published Nov 25, 2022, 11:22 PM IST

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ

ಬಾಗಲಕೋಟೆ (ನ.25): ಸದ್ಯ ಕನ್ನಡ ಚಲನಚಿತ್ರರಂಗದಲ್ಲಿ ಅಷ್ಟೇ ಅಲ್ಲದೆ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲೂ ಕೂಡ ಚರ್ಚೆಯಾಗುತ್ತಿರುವ ಕನ್ನಡಿಗರ ಹೆಮ್ಮೆಯ ಸಿನಿಮಾ ಅಂದ್ರೆ ಅದುವೇ ಕಾಂತಾರಾ. ನಟ ರಿಷಬ್ ಶೆಟ್ಟಿ ಅವರ ನಿರ್ದೇಶನದಲ್ಲಿ ಮೂಡಿ ಬಂದಿರೋ ಕಾಂತಾರ ಈಗ ಅದ್ಭುತ ಯಶಸ್ಸು ಕಂಡಿದ್ದು, ಇದರ ಬೆನ್ನಲ್ಲೆ ನೇಕಾರ ಯುವಕನೊಬ್ಬ ಕಾಂತಾರ ಸಿನಿಮಾ ಆಸ್ಕರ್ ಅವಾರ್ಡ್ ಪಡೆಯುವಂತಾಗಲೆಂದು ಇಳಕಲ್‌ ಸೀರೆಯನ್ನು ವಿಶಿಷ್ಟ ನೇಯ್ಗೆ ನೇಯುವ ಮೂಲಕ ಗಮನ ಸೆಳೆದಿದ್ದಾನೆ. ಈ ಕುರಿತು ವರದಿ ಇಲ್ಲಿದೆ. ಹೌದು! ನಟ, ನಿರ್ದೆಶಕ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಕೋಟ್ಯಂತರ ಜನರ ಮನಗೆದ್ದು, ಉತ್ತಮ ಪ್ರದರ್ಶನದಲ್ಲಿದ್ದು, ಇವುಗಳ ಮಧ್ಯೆ ಈ ಕಾಂತಾರ ಸಿನಿಮಾಕ್ಕೆ ಆಸ್ಕರ್ ಅವಾರ್ಡ್ ಸಿಗುವಂತಾಗಲೆಂದು ಬಾಗಲಕೋಟೆ ಜಿಲ್ಲೆಯ ಇಳಕಲ್‌ ಪಟ್ಟಣದ ಯುವ ನೇಕಾರ ಮೇಘರಾಜ್ ಗುದ್ದಟ್ಟಿ ವಿಶಿಷ್ಟ ಇಳಕಲ್‌ ಸೀರೆ ಮೂಲಕ  ಹಾರೈಸಿದ್ದಾನೆ.

ಇಳಕಲ್‌ ಸೀರೆಯಲ್ಲಿ ಗಮನ ಸೆಳೆದ 'ವಿನ್ ಆಟ್ ಆಸ್ಕರ್ ಕಾಂತಾರ' ಸಾಲುಗಳು: ಸಾಮಾನ್ಯವಾಗಿ ಇಳಕಲ್‌ ಸೀರೆಗಳೆಂದರೆ ಸಾಕು ಹೆಂಗಳೆಯರು ವಿವಿಧ ಬಣ್ಣ, ಆಕಾರದ ಡಿಸೈನ್ ಗಳನ್ನ ನೋಡಿ ಬೆರಗಾಗುತ್ತಾರೆ. ಆದರೆ ಈ ಇಳಕಲ್‌ ಸೀರೆ ಮಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗುವಂತಾಗಿದೆ. ಯಾಕಂದ್ರೆ ಯುವ ನೇಕಾರನಾದ ಮೇಘರಾಜ್ ಈ ಇಳಕಲ್‌ ಸೀರೆಯನ್ನ ನೇಯುವ. ವೇಳೆ ಸೆರಗಿನ ವಿಭಾಗದಲ್ಲಿ ಕಷ್ಟಪಟ್ಟು ಕೆಂಪು ಬಣ್ಣದಲ್ಲಿ ಬಿಳಿ ಮತ್ತು ಕೇಸರಿ ಬಣ್ಣಗಳಲ್ಲಿ 'ವಿನ್ ಆಟ್ ಆಸ್ಕರ್ ಕಾಂತಾರ' ಎಂಬ ಬರವಣಿಗೆ ಇರುವಂತೆ ಕುಶಲತೆಯಿಂದ ಈ ಸೀರೆಯನ್ನ ನೇಯ್ದಿದ್ದಾರೆ. ಇದಕ್ಕಾಗಿ ವಿಶೇಷ ಸಮಯವನ್ನ ಪಡೆದು ಸಂಯಮದಿಂದ ಈ ಕರಕುಶಲತೆ ಮೆರೆದಿದ್ದು, ಏನಾದರೂ ಆಗಲಿ ಒಟ್ಟು ನಮ್ಮ ಕನ್ನಡದ ಹೆಮ್ಮೆಯ ಕಾಂತಾರ ಸಿನಿಮಾ ಆಸ್ಕರ್ ಅವಾರ್ಡ್ ಪಡೆಯುವಂತಾಗಬೇಕೆಂದು  ಹಾರೈಸಿ ಈ ಇಳಕಲ್‌ ಸೀರೆ ನೇಯ್ದಿರುವುದಾಗಿ ಯುವ ನೇಕಾರ ಮೇಘರಾಜ್ ಗುದ್ದಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಬಾಗಲಕೋಟೆ: ಸಸಾಲಟ್ಟಿ ಪಡಿತರ ಅಕ್ಕಿಯಲ್ಲಿ ಕಂಡುಬಂದ ಪ್ಲಾಸ್ಟಿಕ್‌ ಅಕ್ಕಿ?

ಸೀರೆಯನ್ನ ನಟ ರಿಷಬ್ ಶೆಟ್ಟಿಗೆ ಕೊಡಲು ನಿರ್ಧಸಿರೋ ನೇಕಾರ ಮೇಘರಾಜ್: ಇನ್ನು ಕಾಂತಾರ ಸಿನಿಮಾ ಆಸ್ಕರ್ ಪಡೆಯಲೆಂದು ಆಶಿಸಿ ನೇಯ್ದಿರೋ ಇಳಕಲ್‌ ಸೀರೆಯನ್ನ ಏನು ಮಾಡಬೇಕೆಂದು ಯೋಚನೆ ಮಾಡಲು ಹೊರಟಾಗ ನೇಕಾರ ಮೇಘರಾಜ್, ಇದೀಗ ಕಾಂತಾರ ಸಿನಿಮಾದ ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ನೀಡಲು ಮುಂದಾಗಿದ್ದಾರೆ. ಆದರೆ ಇದು ಕೇವಲ ಮೇಘರಾಜ್ ಆಸೆ ಅಷ್ಟೆ ಅಲ್ಲ ಬದಲಾಗಿ ನಮ್ಮೆಲ್ಲ ಇಳಕಲ್‌‌ನ ಸಮಸ್ತ ನೇಕಾರರ ಆಶಯವೂ ಕೂಡ ಇದೇ ಆಗಿರೋದ್ರಿಂದ ನಟರಾದ ರಿಷಬ್ ಶೆಟ್ಟಿ ಅವರು ಈ ಆಸ್ಕರ್ ಶುಭ ಹಾರೈಕೆಯ ಸೀರೆಯನ್ನ ಪಡೆಯುವಂತಾಗಬೇಕೆಂದು ನೇಕಾರ ನಾರಾಯಣ ವಗ್ಗಾ ತಿಳಿಸಿದ್ದಾರೆ.

ಸಕ್ಕರೆಯ ಉಪ ಉತ್ಪನ್ನದ ಲಾಭಾಂಶ ರೈತರಿಗೆ ಕೊಡಿ: ಸಚಿವ ಮುನೇನಕೊಪ್ಪ

ಇಳಕಲ್‌ ಸೀರೆಯಲ್ಲಿ ವಿಶೇಷ ಕಲೆ ಅರಳಿಸುತ್ತಾ ಬಂದಿರುವ ಯುವ ನೇಕಾರ: ಯುವ ನೇಕಾರ ಮೇಘರಾಜ್ ಇಳಕಲ್‌ ಸೀರೆಯಲ್ಲಿ ಈ ಹಿಂದೆ ವಿಭಿನ್ನ ಮತ್ತು ವಿಶೇಷ ಕಲಾಕೃತಿ ಅರಳಿಸುವ ಮೂಲಕ ಗಮನ ಸೆಳೆದಿದ್ದಾರೆ. ಇಳಕಲ್‌ ಸೀರೆಯಲ್ಲಿಯೇ ಅಯೋಧ್ಯೆಯ ರಾಮ ಮಂದಿರ, ಪುನೀತ ಅಭಿನಯದ ಜೇಮ್ಸ ಚಿತ್ರಕ್ಕೆ  100 ದಿನವಾಗಲೆಂದು ಶುಭ ಹಾರೈಕೆ ಮತ್ತು ಇಳಕಲ್‌‌ನ ಮಹಾಂತ ಮಠ ಸೇರಿದಂತೆ ಹೀಗೆ ವಿಭಿನ್ನ ಬಗೆಯ ವಿಶೇಷ ಕಲಾಕೃತಿಗಳನ್ನ ಜಗತ್ಪ್ರಸಿದ್ಧ ಇಳಕಲ್‌ ಸೀರೆಯಲ್ಲಿ ಅರಳಿಸಿ ನೇಕಾರ ಮೇಘರಾಜ್ ಗಮನ ಸೆಳೆದಿದ್ದಾರೆ. ಒಟ್ಟಾರೆ ಕಾಂತಾರ ಸಿನಿಮಾಕ್ಕೆ ಆಸ್ಕರ್ ಅವಾರ್ಡ್ ಸಿಗುವಂತಾಗಲೆಂದು ಹಾರೈಸಿ ನೇಕಾರ ಮೇಘರಾಜ್ ರೂಪಿಸಿರುವ ಇಳಕಲ್‌ ಸೀರೆ ಆದಷ್ಟು ಬೇಗ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ತಲುಪುವಂತಾಗಲಿ ಮತ್ತು ಮುಂದಿನ ದಿನಗಳಲ್ಲಿ ಮೇಘರಾಜ್ ಹಾಗೂ ಕನ್ನಡಿಗರ ಆಶಯದಂತೆ ಕಾಂತಾರ ಸಿನಿಮಾಕ್ಕೆ ಆಸ್ಕರ್ ಅವಾರ್ಡ್ ಸಿಗುವಂತಾಗಲೆಂಬುದುದೇ ನಮ್ಮಯ ಆಶಯ.

Follow Us:
Download App:
  • android
  • ios