Asianet Suvarna News Asianet Suvarna News

'ವರಾಹ ರೂಪಂ' ಹಾಡು ಬಳಕೆಗೆ ಇನ್ನೂ ಅನುಮತಿ ಸಿಕ್ಕಿಲ್ಲ; ನ್ಯಾಯವ್ಯಾಪ್ತಿ ಅಡ್ಡಿ ಎಂದ ಕೋಯಿಕ್ಕೋಡ್‌ ಕೋರ್ಟ್‌

ವರಾಹಂ ರೂಪಂ ಹಾಡಿನ ವಿವಾದ ಇನ್ನೂ ಬಗೆಹರಿದಿಲ್ಲ. ತೈಕ್ಕುಡಂ ಬ್ರಿಡ್ಜ್ ಸಲ್ಲಿಸಿದ ಅರ್ಜಿ ವಿಚಾರಣೆ ಮಾಡಿದ ಕೋಯಿಕ್ಕೋಡ್‌ ಕೋರ್ಟ್ ವಿಚಾರಣೆಗೆ ನ್ಯಾಯವ್ಯಾಪ್ತಿ ಅಡ್ಡಿ ಎಂದು ಹೇಳಿದೆ.

Kozhikode District Court returns the plaint filed by Thaikkudam Bridge against Hombale citing lack of jurisdiction sgk
Author
First Published Nov 25, 2022, 4:37 PM IST

ವರಾಹಂ ರೂಪಂ ಹಾಡಿನ ವಿವಾದ ಇನ್ನೂ ಬಗೆಹರಿದಿಲ್ಲ. ಹಾಡಿಗೆ ನೀಡಿದ್ದ ತಡೆಯಾಜ್ಞೆಯನ್ನು ಕೇರಳ ಸ್ಥಳಿಯ ಕೋರ್ಟ್ ತೆರುವು ಮಾಡಿದ್ದು ಹಾಡು ಬಳಕೆಗೆ ಅನುಮತಿ ನೀಡಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ಆದರೆ ಅಸಲಿ ವಿಚಾರನೇ ಬೇರೆ.  ತೈಕ್ಕುಡಂ ಬ್ರಿಡ್ಜ್ ಸಲ್ಲಿಸಿದ ಅರ್ಜಿ ವಿಚಾರಣೆ ಮಾಡಿದ ಕೋಯಿಕ್ಕೋಡ್‌ ಕೋರ್ಟ್ ವಿಚಾರಣೆಗೆ ನ್ಯಾಯವ್ಯಾಪ್ತಿ ಅಡ್ಡಿ ಎಂದು ಹೇಳಿದೆ. ಪಾಲಕ್ಕಾಡ್ ಜಿಲ್ಲಾ ಕೋರ್ಟ್‌ನಲ್ಲಿ ವಿಚಾರಣೆ ಮುಂದುವರೆಯಲಿದೆ ಎಂದು ಹೇಳಿ ಕೋಯಿಕ್ಕೋಡ್‌ ಕೋರ್ಟ್ ತೈಕ್ಕುಡಂ ಬ್ರಿಡ್ಜ್ ಸಲ್ಲಸಿದ್ದ ಅರ್ಜಿಯನ್ನು ವಜಾ ಗೊಳಿಸಿದೆ.  ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯದಲ್ಲಿ ಮಧ್ಯಂತರ ತಡೆಯಾಜ್ಞೆ ಇನ್ನೂ ಜಾರಿಯಲ್ಲಿದೆ. ವರಾಹಂ ರೂಪಂ ಹಾಡಿನ ವಿಚಾರಣೆ ಪಾಲಕ್ಕಾಡ್ ಜಿಲ್ಲಾ ಕೋರ್ಟ್‌ನಲ್ಲಿ  ಮುಂದುವರೆಯಲಿದೆ. ಹಾಗಾಗಿ ಕಾಂತಾರ ಸಿನಿಮಾತಂಡಕ್ಕೆ ಇನ್ನೂ ಹಾಡನ್ನು ಬಳಸಿಕೊಳ್ಳುವ ಅನುಮತಿ ಸಿಕ್ಕಿಲ್ಲ. 

ಕೇರಳ ಮೂಲದ ತೈಕ್ಕುಡಂ ಬ್ರಿಡ್ಜ್ ಬ್ಯಾಂಡ್ ಕಾಂತಾರ ನಿರ್ಮಾಪಕರ ವಿರುದ್ಧ 'ನವರಸಂ' ಹಾಡನ್ನು ಕದ್ದಿದ್ದಾರೆ ಎಂದು ಕೃತಿಚೌರ್ಯದ ಆರೋಪ ಮಾಡಿ ಕೋಯಿಕ್ಕೋಡ್‌ ಮತ್ತು ಪಾಲಕ್ಕಾಡ್ ಜಿಲ್ಲಾ ಕೋರ್ಟ್‌ ಮೆಟ್ಟಿಲೇರಿದ್ದರು. ಇದೀಗ ಕೋಯಿಕ್ಕೋಡ್‌ ಕೋರ್ಟ್ ತನ್ನ ವ್ಯಾಪ್ತಿಗೆ ಬರಲ್ಲ ಎಂದು ಅರ್ಜಿ ವಜಾ ಮಾಡಿ ಪಲಕ್ಕಾಡ್ ಕೋರ್ಟ್ ನಲ್ಲಿ ಮುಂದುವರೆಯಲಿದೆ ಎಂದು ಹೇಳಿದೆ.  

ತೈಕ್ಕುಡಂ ಬ್ರಿಡ್ಜ್ ಪ್ರತಿಕ್ರಿಯೆ 

ಕಾಂತಾರ ತಂಡಕ್ಕೆ ಗೆಲುವು, ಹಾಡನ್ನು ಬಳಸಿಕೊಳ್ಳಲು ಅನುಮತಿ ಸಿಕ್ಕಿದೆ ಎನ್ನುವ ಸುದ್ದಿ ವೈರಲ್ ಆದ ಬೆನ್ನಲ್ಲೇ ತೈಕ್ಕುಡಂ ಬ್ರಿಡ್ಜ್ ಪ್ರತಿಕ್ರಿಯೆ ನೀಡಿದ್ದು ತಡೆಯಾಜ್ಞೆ ತೆರುವು ಸುದ್ದಿಯನ್ನು ತಳ್ಳಿ ಹಾಕಿದೆ. ಈ ಬಗ್ಗೆ ತೈಕ್ಕುಡಂ ಬ್ರಿಡ್ಜ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ, 'ಕೋರ್ಟ್ ಇನ್ನೂ ಅನುಮತಿ ನೀಡಿಲ್ಲ. ನ್ಯಾಯವ್ಯಾಪ್ತಿ ಬದಲಾಗಿದೆ ಅಷ್ಟೆ. ಪಲಕ್ಕಾಡ್ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ. ಅಧಿಕೃತ ಆದೇಶದ ಪ್ರತಿ ಎಲ್ಲಿದೆ' ಎಂದು ಪ್ರಶ್ನೆ ಮಾಡಿದರು.

ಎಲ್ಲಾ ಮ್ಯೂಸಿಕ್ ಆಪ್‌ಗಳಿಂದ ಹಾಡು ಡಿಲೀಟ್

ತೈಕ್ಕುಡಂ ಬ್ರಿಡ್ಜ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೇರಳದ ಸ್ಥಳಿಯ ಕೋರ್ಟ್ ಈ ಹಾಡನ್ನು ಪ್ರಸಾರ ಮಾಡದಂತೆ ಆದೇಶ ಹೊರಡಿಸಿತ್ತು. ಬಳಿಕ ವರಾಹ ರೂಪಮ್ ಹಾಡನ್ನು ಎಲ್ಲಾ ಮ್ಯೂಸಿಕ್ ಆಪ್ ಮತ್ತು ಯೂಟ್ಯೂಬ್‌ನಿಂದ ಡಿಲೀಟ್ ಮಾಡಲಾಗಿದೆ. ಬಳಿಕ ಹೊಂಬಾಳೆ ಫಿಲ್ಮ್ಸ್ ಕೇರಳ ಹೈಕೋರ್ಟ್ ಮೊರೆ ಹೋಗಿತ್ತು. ಸ್ಥಳಿಯ ನ್ಯಾಯಾಲದ ತೀರ್ಪಿನ ವಿರುದ್ಧ ಹೊಂಬಾಳೆ ಸಲ್ಲಿಸಿದ್ದ ಅರ್ಜಿಗಳನ್ನು ಸಿಎಸ್ ಡಯಾಸ್ ನೇತೃತ್ವದ ಏಕ ಪೀಠವು ವಜಾಗೊಳಿಸಿತ್ತು. 'ಅಧೀನ ನ್ಯಾಯಾಲಯಗಳು ಹೊರಡಿಸಿದ ಎಲ್ಲಾ ಆದೇಶಗಳಲ್ಲಿ ನಾವು ಮಧ್ಯ ಪ್ರವೇಶಿಸ ಬಾರದು. ಹಾಗೆ ಮಾಡಿದರೆ ಅಧೀನ ನ್ಯಾಯಾಲಯಗಳು ಬಲಗುಂದಿದಂತೆ ಆಗುತ್ತವೆ' ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. 

ಒಟಿಟಿಯಲ್ಲಿ ಹಾಡು ಬದಲಾವಣೆ 

ವರಾಹ ರೂಪಂ.. ಹಾಡಿಗೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಾಡು ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಪ್ರಸಾರವಾಗುತ್ತದೆ. ಆದರೆ ಇತ್ತೀಚಿಗಷ್ಟೆ ಒಟಿಟಿಯಲ್ಲಿ ರಿಲೀಸ್ ಆದ ಕಾಂತಾರ ಸಿನಿಮಾದಲ್ಲಿ ವರಾಹ ರೂಪಂ ಹಾಡನ್ನು ಬದಲಾಯಿಸಲಾಗಿದೆ. ಹೊಸ ವರ್ಷನ್‌ನಲ್ಲಿ ರಿಲೀಸ್ ಮಾಡಲಾದೆ. 


 
 

Follow Us:
Download App:
  • android
  • ios