ರಿಷಬ್ ಶೆಟ್ಟಿ ಮಗ ಕುಂದಾಪುರ ಶಾಲೆಗೆ ಸೇರಿದ್ದು ನಿಮಗೊತ್ತಾ?

ಸ್ಟಾರ್ ನಟರು ತಮ್ಮ ಮಕ್ಕಳನ್ನು ಬೋರ್ಡಿಂಗ್‌ ಸ್ಕೂಲ್‌, ಇಂಟರ್‌ನ್ಯಾಶನಲ್‌ ಶಾಲೆಗಳಿಗೆ ಕಳಿಸುತ್ತಿದ್ರೆ ರಿಷಬ್ ಶೆಟ್ಟಿ ತಮ್ಮೂರಾದ ಕುಂದಾಪುರದಲ್ಲಿ ಮಗನನ್ನು ಶಾಲೆಗೆ ಸೇರಿಸಿದ್ದಾರೆ.

 

Kantara fame actor and director Rishab Shetty son makes admission to Kundapura school bni

ರಿಷಬ್‌ ಶೆಟ್ಟಿ ತಮ್ಮ ಸಿನಿಮಾವನ್ನು ಬಹಳ ಭಾವನಾತ್ಮಕವಾಗಿ ನೋಡ್ತಾರೆ. ಅದಕ್ಕಾಗಿ ಯಾವ ತ್ಯಾಗಕ್ಕೂ ರೆಡಿ ಇರ್ತಾರೆ. ಅಂಥಾ ಡೆಡಿಕೇಶನ್‌ ಅವ್ರದ್ದು. ಅದಕ್ಕೆ ತಾಜಾ ಉದಾಹರಣೆ ಮೊನ್ನೆ ಇವರ ನಿರ್ಮಾಣದ 'ಶಿವಮ್ಮ' ಸಿನಿಮಾದ ಪ್ರೆಸ್‌ಮೀಟ್‌ನಲ್ಲಿ ಪತ್ರಕರ್ತರಿಗೆ ತಿಳಿಸಿದ ಒಂದು ವಿಚಾರ. ಅವರ ಈ ಮಾತು ಕೇಳಿ ಅಲ್ಲಿದ್ದ ಪತ್ರಕರ್ತರಿಗೇ ಅಚ್ಚರಿಯಾಯ್ತು. ಏಕೆಂದರೆ ಹೆಚ್ಚೆನೆಲ್ಲ ಸ್ಟಾರ್ ನಟ, ನಟಿಯರು ತಮ್ಮ ಮಕ್ಕಳನ್ನು ಬೋರ್ಡಿಂಗ್ ಸ್ಕೂಲ್‌ನಲ್ಲೋ, ಮಹಾನಗರದ ಹೈ ಫೈ ಸ್ಕೂಲಲ್ಲೋ ಓದಿಸುತ್ತಿರುತ್ತಾರೆ. ಅಷ್ಟೇ ಏಕೆ, ಹಳ್ಳಿಯಲ್ಲಿರುವ ಎಷ್ಟೋ ಮಂದಿ ಶ್ರೀಮಂತರು ತಮ್ಮ ಮಕ್ಕಳನ್ನು ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳಲ್ಲಿ ಓದಲು ಬಿಡುತ್ತಾರೆ. 

ಆದರೆ ರಿಷಬ್ ತಮ್ಮ ಸಿನಿಮಾದ ಹಾಗೇ ತಾವು ಇವರೆಲ್ಲರಿಗಿಂತ ಹೇಗೆ ಭಿನ್ನ ಅನ್ನೋದನ್ನು ಈ ಸಣ್ಣ ನಡೆಯಲ್ಲೂ ತೋರಿಸಿಕೊಟ್ಟಿದ್ದಾರೆ. ಸದ್ಯಕ್ಕೀಗ ಅವರು ಸಿನಿಮಾಕ್ಕಾಗಿ ಕುಟುಂಬ ಸಮೇತ ಕುಂದಾಪುರಕ್ಕೆ ಶಿಫ್ಟ್ ಆಗಿದ್ದಾರೆ. ಅಷ್ಟೇ ಅಲ್ಲ, ತನ್ನ ಮಗ ರಣ್ವಿತ್‌ ಶೆಟ್ಟಿಯನ್ನು ಇಲ್ಲೇ ಶಾಲೆಗೂ ಹಾಕಿದ್ದಾರೆ. ಈ ವಿಷಯವನ್ನು ಸ್ವತಃ ರಿಷಬ್‌ ಅವರೇ ಪ್ರೆಸ್‌ಮೀಟ್‌ನಲ್ಲಿ ತಿಳಿಸಿದ್ದಾರೆ. ಅದರ ಜೊತೆಗೆ ಸಿನಿಮಾ ಬಗೆಗೂ ಅಪ್‌ಡೇಟ್ ನೀಡಿದ್ದಾರೆ. 

ಕುಂದಾಪುರದಲ್ಲಿ ಕಾಂತಾರ ಶೂಟಿಂಗ್‌ಗಾಗಿ ಬೃಹತ್‌ ಸ್ಟುಡಿಯೋ ನಿರ್ಮಿಸಲಾಗಿದೆ. ಆ ಶೂಟಿಂಗ್‌ ಸೆಟ್‌ನಲ್ಲಿ ಪ್ರಮುಖ ಚಿತ್ರೀಕರಣ ನಡೆಯಲಿದೆ. ರಿಷಬ್‌ ಶೆಟ್ಟಿ ಅವರು ಇತ್ತೀಚೆಗೆ ಮಾಧ್ಯಮಗಳಿಗೆ ನೀಡಿದ ಮಾಹಿತಿ ಪ್ರಕಾರ ಕಾಂತಾರ ಸಿನಿಮಾದ ಒಂದು ಹಂತದ ಶೂಟಿಂಗ್‌ ಅಲ್ಲಿ ನಡೆದಿದೆ. ಇಲ್ಲಿ ನೂರು ದಿನಕ್ಕೂ ಹೆಚ್ಚು ಶೂಟಿಂಗ್‌ ನಡೆಯಲಿದೆ. ಈಗ ಒಂದು ಹಂತದ ಒಂದಿಷ್ಟು ಶೂಟಿಂಗ್‌ ಕೆಲಸಗಳು ಮುಗಿದಿವೆ. ಒಳಾಂಗಣ ಮತ್ತು ಹೊರಾಂಗಣದಲ್ಲಿ ಚಿತ್ರೀಕರಣ (Outdoor Shooting) ಮಾಡಲಾಗಿದೆ. ಸಿನಿಮಾದ ಕೆಲಸ ಈ ವರ್ಷ ಪೂರ್ಣಗೊಳ್ಳಲಿದೆ. ಇದು ಹಲವು ಭಾಷೆಗಳಲ್ಲಿ ಬಿಡುಗಡೆಯಾಗಬೇಕಾದ ಸಿನಿಮಾ. ಶೂಟಿಂಗ್‌ ಮುಗಿದ ಬಳಿಕ ಡಬ್ಬಿಂಗ್‌ ಕೆಲಸಗಳು ನಡೆಯಬೇಕು. ಸೋ ಹೀಗಾಗಿ ರಿಲೀಸ್ ಕೊಂಚ ತಡವಾಗಲಿದೆ. 

ಮಗಳು ಕಿರುಚಾಡಿದರೂ ನಾನು ಹೊಡೆಯಲ್ಲ, ಬೈಯಲ್ಲ; ಪೇರೆಂಟಿಂಗ್ ಪಾಠ ಮಾಡಿದ ಶ್ರುತಿ ಹರಿಹರನ್

ಈ ಹಿಂದೆ ಕಾಂತಾರ 1 ಸಿನಿಮಾ ಈ ವರ್ಷವೇ ಬಿಡುಗಡೆ ಎಂಬ ಮಾತು ಬಲವಾಗಿ ಕೇಳಿ ಬಂದಿತ್ತು. ಆದರೆ ಸದ್ಯ ರಿಷಬ್ ನೀಡಿರೋ ಮಾಹಿತಿಯಂತೆ ಈ ಸಿನಿಮಾ ಮುಂದಿನ ವರ್ಷವೇ ರಿಲೀಸ್ ಆಗಲಿದೆ. ಇನ್ನೊಂದು ವಿಶೇಷ ಅಂದರೆ ಈ ಸಿನಿಮಾವೇನೋ ವರ್ಲ್ಡ್ ಕ್ಲಾಸ್ ಲೆವೆಲ್‌ನದು. ಹಾಗೆಂದು ಸದ್ಯ ಟ್ರೆಂಡಿಂಗ್‌ನಲ್ಲಿ ಇರುವಂತೆ ಬಾಲಿವುಡ್‌ನ ಕಲಾವಿದರನ್ನೇನೋ ಈ ಸಿನಿಮಾಕ್ಕೆ ತಗೊಂಡಿಲ್ವಂತೆ ರಿಷಬ್. ನೇಟಿವ್ ಫ್ಲೇವರ್‌ನ ಸಬ್ಜೆಕ್ಟ್ ಆಗಿರೋ ಕಾರಣ ಸ್ಥಳೀಯ ಕಲಾವಿದರಿದ್ದರೇ ಚಂದ ಅಂತ ಈ ಹಿಂದಿನಂತೇ ತನ್ನೂರಿನ ಜನರನ್ನೇ ಕಲಾವಿದರನ್ನಾಗಿ ಆಯ್ಕೆ ಮಾಡಿದ್ದಾರೆ. 'ನಾನು ಕಾಂತಾರ ಸಿನಿಮಾಕ್ಕೆ ಪ್ಯಾನ್‌ ಇಂಡಿಯಾ ಕಲಾವಿದರನ್ನು ಸೇರಿಸಿಕೊಂಡಿಲ್ಲ. ಇದರ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ಪ್ಯಾನ್‌ ಇಂಡಿಯಾ ಸಿನಿಮಾಕ್ಕೆ ವಿವಿಧ ಭಾಷೆಯ ಕಲಾವಿದರನ್ನು ಸೇರಿಸಿಕೊಳ್ಳುತ್ತಾರೆ. ನನಗೆ ಇದರಲ್ಲಿ ನಂಬಿಕೆಯಲ್ಲ. ಕಾಂತಾರದಲ್ಲಿ ಇದ್ದದ್ದು ಸ್ಥಳೀಯ ಕಲಾವಿದರೇ. ಹೀಗಿದ್ದರೂ ಇದು ಪ್ಯಾನ್‌ ಇಂಡಿಯಾ (Pan India) ಮಟ್ಟದಲ್ಲಿ ಹಿಟ್‌ ಆಯಿತು. ಜನರಿಗೆ ಶಿವನ ಪಾತ್ರ ಮುಖ್ಯ. ಆ ಪಾತ್ರ ಜನರನ್ನು ಹಿಡಿದಿಟ್ಟುಕೊಳ್ಳುವುದು ಮುಖ್ಯ' ಅಂತ ರಿಷಬ್‌ ಶೆಟ್ಟಿ ಹೇಳಿದ್ದಾರೆ.

ಇಷ್ಟೆಲ್ಲ ಆದಮೇಲೂ ಕಾಂತಾರ ಚಾಪ್ಟರ್ 1ಗಿಂತಲೂ ಹೆಚ್ಚು ಜನರ ಬಾಯಲ್ಲಿ ಚರ್ಚೆ ಆಗ್ತಿರೋ ಮಾತು ರಿಷಬ್ ಶೆಟ್ಟಿ ತಮ್ಮ ಮಗನನ್ನು ಕುಂದಾಪ್ರದಲ್ಲಿ ಶಾಲೆ ಸೇರಿಸಿದ್ದಾರೆ ಅನ್ನೋ ವಿಚಾರ. ಕಾಮನ್ ಜನರಿಗೆ ಸಖತ್ ಟಚ್ ಆಗೋ ವಿಚಾರ ಇದಾಗಿರೋದೂ ಈ ಹೈಪ್‌ಗೆ ಕಾರಣ ಇರಬಹುದು.

ಎಂಜಾಯ್ ಮಾಡಿಲ್ಲ ಪಬ್‌ಗೂ ಹೋಗಿಲ್ಲ, ಮದ್ವೆಯಿಂದ ಸ್ವಾತಂತ್ರ ಇರಲಿಲ್ಲ; ಡಿವೋರ್ಸ್‌ ಹಿಂದಿನ ಕಾರಣ ಬಿಚ್ಚಿಟ್ಟ ಪ್ರೇಮಾ
 

Latest Videos
Follow Us:
Download App:
  • android
  • ios