ಯುವ ರಾಜ್ ಕುಮಾರ್ ನಟನೆಯ ಚೊಚ್ಚಲ ಯುವ ಸಿನಿಮಾಗೆ ನಾಯಕಿಯಾಗಿ ಸಪ್ತಮಿ ಗೌಡ ನಟಿಸುತ್ತಿದ್ದಾರೆ. 

ದೊಡ್ಮನೆಯ ಮತ್ತೊಂದು ಕುಡಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು, ರಾಘವೇಂದ್ರ ರಾಜ್​ಕುಮಾರ್ ಅವರ ಎರಡನೇ ಪುತ್ರ ಯುವ ರಾಜ್​ಕುಮಾರ್ ಚಿತ್ರರಂಗಕ್ಕೆ ಅಧಿಕೃತವಾಗಿ ಕಾಲಿಟ್ಟಿದ್ದಾರೆ. ಯುವ ರಾಜ್​ಕುಮಾರ್ ನಟನೆಯ ಮೊದಲ ಸಿನಿಮಾದ ಟೈಟಲ್ ಬಿಡುಗಡೆ ಆಗಿದ್ದು ಚಿತ್ರಕ್ಕೆ 'ಯುವ' ಎಂದು ಹೆಸರಿಡಲಾಗಿದೆ. ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್‌ನಲ್ಲಿ ಯುವ ಸಿನಿಮಾ ಮೂಡಿಬರುತ್ತಿದೆ. ಹೊಂಬಾಳೆ ಫಿಲ್ಮ್ಸ್ ಸಿನಿಮಾ ಅನೌನ್ಸ್ ಮಾಡಿ ತಿಂಗಳುಗಳೇ ಕಳೆದಿತ್ತು. ಆದರೆ ಟೈಟಲ್ ಬಹಿರಂಗವಾಗಿರಲಿಲ್ಲ. ಇದೀಗ ಅದ್ದೂರಿಯಾಗಿ ಪೂಜೆ ಮಾಡುವ ಮೂಲಕ ಸಿನಿಮಾದ ಟೈಟಲ್ ಟೀಸರ್ ರಿಲೀಸ್ ಮಾಡಲಾಗಿದೆ. 

ಸಿನಿಮಾ ಟೈಟಲ್ ರಿವೀಲ್ ಆಗುತ್ತಿದ್ದಂತೆ ಸಿನಿಮಾಗೆ ನಾಯಕಿ ಯಾರು ಎನ್ನುವ ಕುತೂಹಲ ಹೆಚ್ಚಾಗಿತ್ತು. ಅಲ್ಲದೇ ಸಾಕಷ್ಟು ನಟಿಯರ ಹೆಸರು ಕೇಳಿ ಬರುತ್ತಿತ್ತು. ಮಲಯಾಳಂ, ತೆಲುಗು ನಟಿಯರ ಹೆಸರು ಕೇಳಿ ಬರುತ್ತಿತ್ತು. ಆದರೀಗ ಕನ್ನಡದ ನಟಿ ಆಯ್ಕೆಯಾಗಿದ್ದಾರೆ. ಬ್ಲಾಕ್ ಬಸ್ಟರ್ ಕಾಂತಾರ ಸಿನಿಮಾದ ಲೀಲಾ ಸಪ್ತಮಿ ಗೌಡ ಆಯ್ಕೆಯಾಗಿದ್ದಾರೆ. ಸಪ್ತಮಿ ಆಯ್ಕೆ ಅಭಿಮಾನಿಗಳಿಗೆ ಖುಷಿ ತಂದಿದೆ. ಕನ್ನಡ ನಾಯಕಿಯನ್ನೇ ಆಯ್ಕೆ ಮಾಡಿದ ಸಿನಿಮಾತಂಡಕ್ಕೆ ಧನ್ಯವಾದ ತಿಳಿಸುತ್ತಿದ್ದಾರೆ. 

ಅಂದಹಾಗೆ ಸಪ್ತಮಿ ಗೌಡ ಎರಡನೇ ಬಾರಿಗೆ ಹೊಂಬಾಳೆ ಫಿಲ್ಮ್ಸ್ ಜೊತೆ ಕೆಲಸ ಮಾಡುತ್ತಿದ್ದಾರೆ. ಕಾಂತಾರ ಸಿನಿಮಾ ಕೂಡ ಹೊಂಬಾಳೆ ಫಿಲ್ಮ್ಸ್ ನಲ್ಲಿ ಮೂಡಿಬಂದಿತ್ತು. ಇದೀಗ ಯುವ ಸಿನಿಮಾಗೂ ಹೊಂಬಾಳೆ ಬಂಡವಾಳ ಹೂಡುತ್ತಿದ್ದು ಸಪ್ತಮಿ ಮತ್ತೆ ಅದೇ ಬ್ಯಾನರ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಪ್ತಮಿ ಮತ್ತು ಯುವ ಜೋಡಿಯನ್ನು ತೆರೆಮೇಸೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಈಗಾಗಲೇ ಯವ ಸಿನಿಮಾ ಪೋಸ್ಟರ್ ಮತ್ತು ಟೀಸರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದೆ.

Yuva Rajkumar:'ಯುವ' ಚಿತ್ರಕ್ಕೂ ಅಪ್ಪುಗೂ ಇದೆ ಲಿಂಕ್; ಪೋಸ್ಟರ್‌ನಲ್ಲಿ ಅಡಗಿದೆ ರಹಸ್ಯ

ಟೀಸರ್ ನೋಡಿದ್ರೆ ಇದು ಪಕ್ಕಾ ಮಾಸ್ ಸಿನಿಮಾ ಎನ್ನುವುದು ಗೊತ್ತಾಗುತ್ತಿದೆ. ಭರ್ಜರಿ ಆಕ್ಷನ್ ದೃಶ್ಯಗಳು ಇರಲಿದೆ ಎನ್ನಲಾಗಿದೆ. ಪುಟ್ಟ ಟೀಸರ್ ನಲ್ಲಿಯೇ ಬ್ಯಾಟ್, ಕತ್ತಿ ರಾರಜಿಸಿವೆ. ಟೀಸರ್ ಕೊನೆಯಲ್ಲಿ 'ನೀನು ದಾಟಿರುವುದು ಬ್ಲಡ್​ಲೈನ್, ರಕ್ತ ಹರಿದೇ ಹರಿಯುತ್ತೆ' ಎಂದು ಯುವ ಖಡಕ್ ಡೈಲಾಗ್ ಹೊಡಿದ್ದಾರೆ. ಈ ಸಿನಿಮಾ ಗ್ಯಾಂಗ್​ವಾರ್​ಗೆ ಸಂಬಂಧಿಸಿದ ಕಥೆ ಹೊಂದಿದೆ ಎನ್ನುವ ಸುಳಿವೂ ಟೈಟಲ್ ಟೀಸರ್​ನಲ್ಲಿದೆ.

Scroll to load tweet…

ನೀನು ದಾಟಿರುವುದು ಬ್ಲಡ್​ಲೈನ್, ರಕ್ತ ಹರಿದೇ ಹರಿಯುತ್ತೆ: ಸ್ಯಾಂಡಲ್‌ವುಡ್‌ನಲ್ಲಿ 'ಯುವ' ಪರ್ವ ಆರಂಭ

ಅಂದಹಾಗೆ ಯುವ ಸಿನಿಮಾದ ಪೋಸ್ಟರ್, ಟೀಸರ್ ಬಹಿರಂಗ ಪಡಿಸುವ ಜೊತೆಗೆ ಚಿತ್ರದ ರಿಲೀಸ್ ಡೇಟ್ ಕೂಡ ಬಹಿರಂಗವಾಗಿದೆ. ಯುವ ರಾಜ್​ಕುಮಾರ್ ಮೊದಲ ಸಿನಿಮಾ ಯುವ, ಇದೇ ವರ್ಷಾಂತ್ಯ ಡಿಸೆಂಬರ್ 22ರಂದ ಬಿಡುಗಡೆ ಆಗುತ್ತಿದೆ. ಭಾರಿ ಕುತೂಹಲ ಮತ್ತು ನಿರೀಕ್ಷೆ ಮೂಡಿಸಿರುವ ಯುವ ಮೊದಲ ಸಿನಿಮಾ ಹೇಗಿರಲಿದೆ ಎಂದು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.