Asianet Suvarna News Asianet Suvarna News

ರಿಷಬ್​ ಶೆಟ್ಟಿ@ 41: ಸಿನಿಮಾ ನೋಡಲು ಹೋಗಿ ಹಸೆಮಣೆ ಏರುವವರೆಗೆ... ಹುಟ್ಟುಹಬ್ಬಕ್ಕೆ ಪತ್ನಿಯಿಂದ ಲವ್ಲಿ ವಿಷ್​

ಇಂದು ನಟ, ನಿರ್ದೇಶಕ ರಿಷಬ್​ ಶೆಟ್ಟಿಯವರ ಜನುಮದಿನ. ಈ ಸಂದರ್ಭದಲ್ಲಿ ಪತ್ನಿ ಪ್ರಗತಿ ಲವ್ಲಿ ವಿಡಿಯೋ ಶೇರ್​ ಮಾಡಿದ್ದಾರೆ. ಅಷ್ಟಕ್ಕೂ ಇವರ ಲವ್​ ಸ್ಟೋರಿಯೇ ಕುತೂಹಲವಾದದ್ದು.
 

Kantara actor  Rishabh Shettys birthday celebration wife Pragati shared a lovely video suc
Author
First Published Jul 7, 2024, 5:57 PM IST

ಇಂದು ಅಂದರೆ ಜುಲೈ 7 ನಟ, ನಿರ್ದೇಶಕ,  ಡಿವೈನ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ರಿಷಬ್​ ಶೆಟ್ಟಿ ಅವರಿಗೆ 41ನೇ ಹುಟ್ಟುಹಬ್ಬದ ಸಂಭ್ರಮ. 1983ರ ಜುಲೈ 7ರಂದು ದಕ್ಷಿಣ ಕನ್ನಡ ಜಿಲ್ಲೆಯ ಕದ್ರಿಯಲ್ಲಿ ಜನಿಸಿರುವ ರಿಷಬ್​ ಅವರು ಬೆಳೆದು ಬಂದ ಹಾದಿಯ ಕಿರು ವಿಡಿಯೋ ಅನ್ನು ಹುಟ್ಟುಹಬ್ಬದ ನಿಮಿತ್ತ ಪತ್ನಿ ಪ್ರಗತಿ ಅವರು ಶೇರ್​ ಮಾಡಿಕೊಂಡಿದ್ದು ಪತಿಗೆ ಡೆಡಿಕೇಟ್​ ಮಾಡಿದ್ದಾರೆ.    ನನ್ನ ಜೀವನ ಆಧಾರಸ್ತಂಭ, ನೀವು ಅದ್ಭುತ ವ್ಯಕ್ತಿ ಎಂದು ಶೀರ್ಷಿಕೆ ಕೊಟ್ಟಿರುವ  ಪ್ರಗತಿ ಶೆಟ್ಟಿಯವರು ನಟನ ಸಂಪೂರ್ಣ ಜೀವನದ ಚಿತ್ರಣವನ್ನು ಇದರಲ್ಲಿ ಸೆರೆ ಹಿಡಿದಿದ್ದಾರೆ. “ನನ್ನ ಜೀವನದ ಆಧಾರಸ್ತಂಭಕ್ಕೆ ಜನ್ಮದಿನದ ಶುಭಾಶಯಗಳು. ನೀವು ಎಂತಹ ಅದ್ಭುತ ವ್ಯಕ್ತಿ ಎಂದು ನಾನು ಜಗತ್ತಿಗೆ ಹೇಳಲು ಬಯಸುತ್ತೇನೆ. ನಿಮ್ಮನ್ನು ನಿಜವಾಗಿಯೂ ತಿಳಿದಿರುವವರು ಅದೃಷ್ಟವಂತರು. ನಿಮ್ಮ ಶಕ್ತಿ, ಬುದ್ಧಿವಂತಿಕೆ ಮತ್ತು ಪ್ರೀತಿ ಪ್ರತಿದಿನ ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತದೆ ಎಂದು ಪ್ರಗತಿ ಶೆಟ್ಟಿ ಬಣ್ಣಿಸಿದ್ದಾರೆ. ನಾವು ಒಟ್ಟಿಗೆ ಇರುವುದಕ್ಕಾಗಿ ನಾನು ಪ್ರತಿದಿನ ದೇವರಿಗೆ ಕೃತಜ್ಞನಾಗಿದ್ದೇನೆ. ನಿಮಗೆ ಸಂತೋಷ, ಯಶಸ್ಸು ಮತ್ತು ಪ್ರಪಂಚದ ಎಲ್ಲಾ ಸಂತೋಷದಿಂದ ತುಂಬಿದ ವರ್ಷವಾಗಲಿ” ಎಂದು ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ. 

ಸದ್ಯ ರಿಷಬ್ ಶೆಟ್ಟಿ   'ಕಾಂತಾರ' ಪ್ರೀಕ್ವೆಲ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಕುಂದಾಪುರದಲ್ಲಿ ದೊಡ್ಡ ಸೆಟ್ ನಿರ್ಮಿಸಿ ಚಿತ್ರೀಕರಣ ನಡೆಸಲಾಗುತ್ತಿದೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ. 'ಕಾಂತಾರ' ಚಿತ್ರಕ್ಕೆ ಕೆಲಸ ಮಾಡಿದ ಬಹುತೇಕ ತಂಡ ಈ ಚಿತ್ರಕ್ಕೂ ಜೊತೆಯಾಗಿದೆ.  ಹುಟ್ಟುಹಬ್ಬದ ದಿನ ಈ ಚಿತ್ರದ ಬಗ್ಗೆ ಇನ್ನಷ್ಟು ಅಪ್​ಡೇಟ್​ ಬರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಸದ್ಯ ಯಾವುದೇ ಅಪ್​ಡೇಟ್​ ಬಂದಿಲ್ಲ. ಆದರೆ, ಪತ್ನಿ ಮಾತ್ರ ಕ್ಯೂಟ್​ ವಿಡಿಯೋ ಶೇರ್​ ಮಾಡಿಕೊಂಟಿದ್ದಾರೆ. ಅಂದಹಾಗೆ,  ಪ್ರಗತಿ ಶೆಟ್ಟಿ ಮತ್ತು ರಿಷಬ್ ಪ್ರೀತಿಸಿ  2017ರ ಫೆ.9ರಂದು ಕುಂದಾಪುರದಲ್ಲಿ ಮದುವೆಯಾದರು. ಇವರಿಗೆ ಈಗ ಇಬ್ಬರು ಮಕ್ಕಳು.

'ಕನ್ನಡತಿ' ರಂಜನಿ ರಾಘವನ್​ಗೆ ಯುವ ಸಾಹಿತ್ಯ ರತ್ನ ಬಿರುದು: ನಟಿ ಹೇಳಿದ್ದೇನು?

ಇನ್ನು ರಿಷಬ್​ ಅವರ ಬಗ್ಗೆ ಹೇಳುವಂತೆಯೇ ಇಲ್ಲ.  ರಿಕ್ಕಿ, ಕಿರಿಕ್ ಪಾರ್ಟಿ, ಸೇರಿದಂತೆ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ‘ಬೆಲ್ ಬಾಟಂ’ ಚಿತ್ರದ ನಾಯಕ ನಟನಾಗಿ ನಟಿಸಿದ್ದಾರೆ. ಇವೆಲ್ಲಾ ಸಾಕಷ್ಟು ಹೆಸರು ತಂದುಕೊಟ್ಟರೂ, ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಇವರು ಸ್ಟಾರ್​ ಆಗಿ ಗುರುತಿಸಿದ್ದು ಕಾಂತಾರಾ. ನೂರಾರು ಕೋಟಿ ರೂಪಾಯಿಗಳ ಬಿಗ್​ ಬಜೆಟ್​ ಚಿತ್ರ ನಿರ್ಮಿಸಿ, ವಾಸ್ತವಕ್ಕೆ ದೂರವಾಗಿರುವ ಅಂಶಗಳನ್ನು, ಕಲ್ಪನೆಗಳ ಪಾತ್ರಗಳನ್ನು ಸೃಷ್ಟಿಸಿ  ಬಾಲಿವುಡ್​​ ಸಿನಿಮಾಗಳು ವಿಜೃಂಭಿಸುತ್ತಿರುವ ನಡುವೆಯೇ, ಅತ್ಯಂತ ಕಡಿಮೆ ಬಜೆಟ್​ನಲ್ಲಿ ಒಂದು ಚಿತ್ರ ಹೇಗೆ ಸಪ್ತದಾಗರದಾಚೆಯೂ ಸದ್ದು ಮಾಡಬಹುದು ಎಂಬುದನ್ನು ತೋರಿಸಿಕೊಟ್ಟವರು ರಿಷಬ್​ ಶೆಟ್ಟಿ. ಇವರ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. 

ಅಷ್ಟಕ್ಕೂ ರಿಷಬ್​ ಮತ್ತು ಪ್ರಗತಿ ಅವರ ಲವ್​ಸ್ಟೋರಿಯೂ ಚೆನ್ನಾಗಿದೆ. 'ರಿಕ್ಕಿ' ಸಿನಿಮಾ ನೋಡಲು ಪ್ರಗತಿಯವರು ಫ್ರೆಂಡ್ಸ್​ ಜೊತೆ ಹೋದಾಗ,   ಚಿತ್ರತಂಡ ಕೂಡ ಅಲ್ಲಿತ್ತು.  ಅಲ್ಲಿಯವರೆಗೆ ಪ್ರಗತಿ ಅವರಿಗೆ ರಿಷಬ್​ ಯಾರು ಎಂದೇ ಗೊತ್ತಿರಲಿಲ್ಲ. ಸಿನಿಮಾ ಮುಗಿದ ಬಳಿಕ ಅಲ್ಲೇ ಇದ್ದ ರಿಷಬ್ ಶೆಟ್ಟಿಯವರ ಪರಿಚಯವನ್ನು ಸ್ನೇಹಿತೆಯರು ಮಾಡಿಸಿದಾಗ  ಫೋಟೋ ಹೊಡೆಸಿಕೊಂಡು ಬಂದಿದ್ದರು.  ಇಬ್ಬರೂ ಕರಾವಳಿಯವರು ಎಂದು ಗೊತ್ತಾದದ್ದೇ ತಡ, ಬಳಿಕ ಫೇಸ್‌ಬುಕ್‌ನಲ್ಲಿ ಪ್ರಗತಿಯವರನ್ನು ಹುಡುಕಿ ರಿಷಬ್ ಶೆಟ್ಟಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರಂತೆ. ಅಲ್ಲಿಂದಲೇ ಲವ್​ ಶುರುವಾದದ್ದು. ಒಂದು ವರ್ಷದಲ್ಲಿಯೇ ಪ್ರೀತಿ, ಪ್ರಪೋಸ್​, ಮನೆಯಲ್ಲಿ ಎಲ್ಲರನ್ನೂ ಒಪ್ಪಿಸಿ ಮದುವೆಯೂ ಆಗಿದೆ.  ಇದೀಗ ಮಗ ರಣ್ವಿತ್ ಶೆಟ್ಟಿ ಹಾಗೂ ಮಗಳು ರಾಧ್ಯ ಶೆಟ್ಟಿ ಮಕ್ಕಳಿದ್ದಾರೆ. ಪತ್ನಿಯ ಸಹಕಾರವನ್ನು ರಿಷಬ್​ ಸದಾ ಬಣ್ಣಿಸುತ್ತಲೇ ಇರುತ್ತಾರೆ.  
 
ಆ ಘಟನೆ ಬಳಿಕ ಎಂದಿಗೂ ಬಿಕಿನಿ, ತುಂಡುಡುಗೆ ತೊಡದಿರಲು ನಿರ್ಧರಿಸಿದೆ.... ಸಾಯಿಪಲ್ಲವಿ ಮಾತಿಗೆ ಶ್ಲಾಘನೆಗಳ ಮಹಾಪೂರ

Latest Videos
Follow Us:
Download App:
  • android
  • ios