Asianet Suvarna News Asianet Suvarna News

'ಗಾಳಿಪಟ 2' ಶೂಟಿಂಗ್ ಮುಕ್ತಾಯ: ಯೋಗರಾಜ್ ಭಟ್

ವಿಕಟಕವಿ ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬಂದಿರುವ ಗಾಳಿಪಟ 2 ಚಿತ್ರದ ಶೂಟಿಂಗ್ ಮುಕ್ತಾಯವಾಗಿದ್ದು, ಅತೀ ಶೀಘ್ರದಲ್ಲೇ ಬಾಕಿ ಸುದ್ದಿ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಭಟ್ಟರು ಪೋಸ್ಟ್ ಮಾಡಿದ್ದಾರೆ. 

Kannada Yogaraj Bhat team wraps up Galipata 2 film shooting
Author
Bangalore, First Published Oct 22, 2021, 6:15 PM IST
  • Facebook
  • Twitter
  • Whatsapp

ಸ್ಯಾಂಡಲ್‌ವುಡ್‌ ಡೈರೆಕ್ಟರ್ ಯೋಗ​ರಾಜ್‌ ಭಟ್‌ (Yogaraj Bhat) ನಿರ್ದೇ​ಶಿಸಿ, ಸೂರಜ್‌ ಪ್ರೊಡ​ಕ್ಷ​ನ್‌​ನಲ್ಲಿ ರಮೇಶ್‌ ರೆಡ್ಡಿ ನಂಗ್ಲಿ ನಿರ್ಮಾಣ ಮಾಡು​ತ್ತಿ​ರುವ 'ಗಾಳಿ​ಪಟ 2' (Galipata 2) ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಇದರ ಫೋಟೋಗಳನ್ನು ಚಿತ್ರತಂಡ ಹಂಚಿಕೊಂಡಿದೆ. ಹೌದು! 'ಗಾಳಿಪಟ 2' ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ ಎಂದು ನಿರ್ದೇಶಕ ಯೋಗರಾಜ್ ಭಟ್ ತಿಳಿಸಿದ್ದಾರೆ.

ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಫೋಸ್ಟ್‌ ಮಾಡಿರುವ ಅವರು, 'ನಮಸ್ತೆ, 'ಗಾಳಿಪಟ 2' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಅತೀ ಶೀಘ್ರದಲ್ಲೇ ಬಾಕಿ ಸುದ್ದಿ' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಅವರು ಚಾಲನೆ ನೀಡಲಿದ್ದಾರೆ.
 


2008ರಲ್ಲಿ ಬಿಡುಗಡೆಯಾಗಿದ್ದ ಗಾಳಿಪಟ (Galipata) ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ಚಿತ್ರದಲ್ಲಿ ಗಣೇಶ್, ದಿಗಂತ್ ಮತ್ತು ರಾಜೇಶ್ ಕೃಷ್ಣನ್ ಅಭಿನಯ ಪ್ರೇಕ್ಷಕರ ಮನಸೂರೆಗೊಂಡಿತ್ತು. ಹಾಗೂ ಅನಂತ್‌​ನಾಗ್‌ (Ananth Nag), ಪದ್ಮಜಾ ರಾವ್‌, ಸುಧಾ​ ಬೆ​ಳ​ವಾಡಿ, ರಂಗಾ​ಯಣ ರಘು (Rangayana Raghu) ಅವರ ತಾರಾಗಣ ಇದ್ದ ಈ ಚಿತ್ರ ಪ್ರೇಕ್ಷಕರನ್ನು ಮೋಡಿ ಮಾಡಿತ್ತು.ಹಾಗಾಗಿ 'ಗಾಳಿಪಟ 2' ಚಿತ್ರದಲ್ಲೂ ಅವರೇ ನಟಿಸುತ್ತಿದ್ದಾರೆ. ಅನಂತ್‌ನಾಗ್ ಈ ಸಿನಿಮಾದಲ್ಲಿ ಕನ್ನಡ ಮೇಷ್ಟ್ರಾಗಿ ನಟಿಸಿದ್ದಾರೆ ಎನ್ನುವುದನ್ನು ಭಟ್ಟರು ಈ ಹಿಂದೆಯೇ ಬಹಿರಂಗಪಡಿಸಿದ್ದರು. 

ತಮಾಷೆ, ಭಾವುಕತೆ ನನ್ನ ಟ್ರಂಪ್‌ಕಾರ್ಡ್: ಗಣೇಶ್

ಚಿತ್ರದಲ್ಲಿ ಗೋಲ್ಡನ್‌ ಸ್ಟಾರ್ ಗಣೇಶ್, ದೂದ್ ಪೇಡ ದಿಗಂತ್ ಹಾಗೂ ನಿರ್ದೇಶಕ ಪವನ್ ಕುಮಾರ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು 'ಗಾಳಿಪಟ' ಚಿತ್ರದಲ್ಲಿ ನಟಿಸಿದ್ದ ರಾಜೇಶ್ ಕೃಷ್ಣನ್ ಬದಲು 'ಲೂಸಿಯ' ನಿರ್ದೇಶಕ ಪವನ್ ಕುಮಾರ್ ಅಭಿನಯಿಸುತ್ತಿದ್ದಾರೆ. ನಿರ್ದೇಶಕ ಪವನ್ ಕುಮಾರ್ ಈ ಹಿಂದೆ ಯೋಗರಾಜ್ ಭಟ್ಟರ 'ಮನಸಾರೆ' ಮತ್ತು 'ಪಂಚರಂಗಿ' ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿತ್ರದ ನಾಯಕಿಯರಾಗಿ ವೈಭವಿ, ಸಂಯುಕ್ತ ಮೆನನ್, ಶರ್ಮಿಳಾ ಮಾಂಡ್ರೆ ಕಾಣಿಸಿಕೊಂಡಿದ್ದಾರೆ. ಸಂತೋಷ್‌ ರೈ ಪಾತಾಜೆ ಸಿನಿಮಾಟೋಗ್ರಫಿ, ಮ್ಯಾಜಿಕಲ್ ಕಂಪೋಸರ್ ಅರ್ಜುನ್‌ ಜನ್ಯ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

ವಿದೇಶದಲ್ಲಿ ಪುತ್ರನ ಭಾವ ಚಿತ್ರವಿರುವ ಗಾಳಿಪಟ ಹಾರಿಸಿದ ಗಣೇಶ್!

ಇನ್ನು 'ಗಾಳಿಪಟ' ದಶಕದ ಹಿಂದಿನ ಯಂಗ್‌ಸ್ಟರ್ಸ್‌ಗೆ ಇಷ್ಟವಾಗೋ ಹಾಗಿತ್ತು. ಈ ಸಲದ 'ಗಾಳಿಪಟ 2' ಯೋಗರಾಜ ಭಟ್ಟರ ಬೆಸ್ಟ್ ಸಿನಿಮಾಗಳಲ್ಲೇ ಬೆಸ್ಟ್. ಕತೆ, ಸಂಭಾಷಣೆಗಳೆಲ್ಲ ಅದ್ಭುತ ಅನ್ನುವ ಹಾಗಿವೆ. ನನ್ನ ಪಾತ್ರವೂ ಈ ಕಾಲದವರಿಗೆ ಇಷ್ಟವಾಗುವ ಹಾಗಿದೆ. ಅದಕ್ಕೂ ಮೊದಲು ನನ್ನ 'ಸಖತ್' ಸಿನಿಮಾ ರಿಲೀಸ್ ಆಗುತ್ತೆ ಎಂದು ಚಿತ್ರದ ನಾಯಕ ಗೋಲ್ಡನ್‌ ಸ್ಟಾರ್ ಗಣೇಶ್ ಈ ಹಿಂದೆ ತಿಳಿಸಿದ್ದರು.

Follow Us:
Download App:
  • android
  • ios