ಸ್ಯಾಂಡಲ್‌ವುಡ್‌ ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ ಮುದ್ದಿನ ಮಕ್ಕಳು ಒಟ್ಟಾಗಿ ಕಾಲ ಕಳೆಯತ್ತಿರುವ ವಿಡಿಯೋವನ್ನು ರಾಧಿಕಾ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 

ತಮ್ಮ ಜೂನಿಯರ್ Yಗೆ ಲಾಲಿ ಹಾಡುತ್ತಿರುವ ಐರಾ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಅದರಲ್ಲೂ ಆಕೆಯ ತೊದಲು ಮಾತುಗಳಿಗೆ  ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ಮಿಸ್‌ ಮಾಡದೇ ದಿನಾ ಯಶ್‌ಗೆ ಊಟ ಮಾಡಿಸೋ ಐರಾ, ಅಪ್ಪ -ಅಮ್ಮ ಇಲ್ಲದೇ ಜೂನಿಯರ್ ಮಲಗೋದೇ ಇಲ್ವಂತೆ! 

ತಾತನ ಸ್ಟೈಲ್:

ರಾಧಿಕಾ ತಂದೆ ಕೃಷ್ಣಪ್ರಸಾದ್‌ ತಮ್ಮ ಇಬ್ಬರು ಮಕ್ಕಳಿಗೂ ಭೀಮ್ಸೇನ್ ಜೋಷಿ ಹಾಡುಗಳನ್ನು ಹೇಳಿತ್ತಾ ಲಾಲಿ ಹಾಡಿ ಮಲಗಿಸಿದವರು. ಈಗ ಅದನ್ನೇ ತಮ್ಮ ಇಬ್ಬರೂ ಮೊಮ್ಮಕ್ಕಳಿಗೆ ಮಾಡುತ್ತಿದ್ದಾರೆ. 

18 ತಿಂಗಳು ತುಂಬಿರುವ ಐರಾ ತಾತ ಮಾಡುವುದನ್ನು ಗಮನಿಸಿ ಹಾಗೆ ಇಮಿಟೇಟ್‌ ಮಾಡಿದ್ದಾರೆ. ತಮ್ಮನನ್ನು ಮುದ್ದಾಡುತ್ತಾ ತಾತನಂತೆ ಮಾತನಾಡಲು ಪ್ರಯತ್ನ ಪಟ್ಟಿದ್ದಾಳೆ. ಅಷ್ಟೇ ಅಲ್ಲದೆ ತನ್ನ ಕೂದಲು ಎಳೆಯಲು ಜೂನಿಯರ್ y ಪ್ರಯತ್ನಿಸಿದಾಗ 'No No' ಎಂದು ಹೇಳುವ ಮಾತುಗಳನ್ನು ಪದೇ ಪದೇ ಕೇಳಲು ಸಂತೋಷವಾಗುತ್ತದೆ.

 

ರಾಧಿಕಾ ಪೋಸ್ಟ್‌:

ಸೋಷಿಯಲ್ ಮೀಡಿಯಾದಲ್ಲಿ ಯಶ್‌ಗಿಂತ ಆಕ್ಟೀವ್‌ ಇರುವ ರಾಧಿಕಾ ತಮ್ಮ ಮಕ್ಕಳ ವಿಡಿಯೋ ಹಾಗೂ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.

ಮನೆಯಲ್ಲೇ ಲಾಕ್ ಡೌನ್ ಆದ ಕೆಜಿಎಫ್ ಕಿಂಗ್; ಸೀಕ್ರೆಟ್ ಬಿಟ್ಟುಕೊಟ್ಟ ರಾಧಿಕಾ ಪಂಡಿತ್!

'ಇವತ್ತು ಐರಾಳಿಗೆ 18 ತಿಂಗಳು ತುಂಬಿತ್ತು. ನಮ್ಮ ಮುದ್ದು ಮಗಳು ನಿಮಗೆ ನಗು ತರಿಸಿರುವುದು ಕನ್ಫರ್ಮ್‌. ಈ ವಿಡಿಯೋದಲ್ಲಿ ಸೇಮ್‌ ನನ್ನ ತಂದೆಯನ್ನು ಇಮಿಟೇಟ್‌ ಮಾಡುತ್ತಿದ್ದಾಳೆ' ಎಂದು ಬರೆದುಕೊಂಡಿದ್ದಾರೆ.