Asianet Suvarna News Asianet Suvarna News

ಹುಷಾರ್‌ ಸಿನಿಮಾ ಶುರುವಾಯ್ತು;ನಟ ಸತೀಶ್‌ ರಾಜ್‌ರಿಗೆ ನಿರ್ದೇಶಕ ಸ್ಥಾನಕ್ಕೆ ಪ್ರಮೋಷನ್‌!

ಕಳೆದ ಮೂರು ದಶಕಗಳಿಂದ ಸಿನಿಮಾ, ಕಿರುತೆರೆ ಹಾಗೂ ರಂಗಭೂಮಿಯಲ್ಲಿ ನಟರಾಗಿ ಗುರುತಿಸಿಕೊಂಡಿದ್ದ ಸತೀಶ್‌ ರಾಜ್‌ ಈಗ ನಿರ್ದೇಶಕ ಹಾಗೂ ನಿರ್ಮಾಪಕರಾಗುತ್ತಿದ್ದಾರೆ. ಇವರ ನಿರ್ದೇಶನದ ಚಿತ್ರದ ಹೆಸರು ‘ಹುಷಾರ್‌’. 

Kannada ushar film shooting begins vcs
Author
Bangalore, First Published Nov 2, 2020, 9:22 AM IST

ಇತ್ತೀಚೆಗಷ್ಟೆಚಿತ್ರಕ್ಕೆ ಮುಹೂರ್ತ ನಡೆಯಿತು. ಹಿರಿಯ ನಿರ್ದೇಶಕ ಭಗವಾನ್‌ ಹಾಗೂ ಎನ್‌ಎಂ ಸುರೇಶ್‌ ಮುಖ್ಯ ಅತಿಥಿಗಳಾಗಿ ಆಗಮಿಸಿ ಕ್ಲಾಪ್‌ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದರು.

‘ಚಿತ್ರದ ಶೀರ್ಷಿಕೆ ಹೇಳುವಂತೆ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಕತೆ ಇದಾಗಿದೆ. ಹಳ್ಳಿಗಾಡಿನ ಹಿನ್ನೆಲೆಯಲ್ಲಿ ಸಾಗುವ ಸಾಮಾಜಿಕ ಜವಾಬ್ದಾರಿಯುಳ್ಳ ಯುವಕ ಹೇಗೆ ಬದಲಾವಣೆಗೆ ನಾಂದಿ ಹಾಡುತ್ತಾನೆ ಎಂಬುದೇ ಚಿತ್ರದ ಕತೆ’ ಎಂಬುದು ಸತೀಶ್‌ ರಾಜ್‌ ಹೇಳಿಕೊಂಡ ಮಾಹಿತಿ.

ಪುಷ್ಕರ ಮಲ್ಲಿಕಾರ್ಜುನಯ್ಯ ನಿರ್ಮಾಣದಲ್ಲಿ ಅಶ್ವತ್ಥಾಮನಾದ ಸೆಂಚುರಿ ಸ್ಟಾರ್‌ ಶಿವರಾಜ್‌ ಕುಮಾರ್‌ 

ನೀವು ಏನೇ ಮಾಡಿ ಹುಷಾರಾಗಿ ಇರಿ ಎಂದು ಹೇಳುವ ಮಾತೇ ಈ ಚಿತ್ರದ ಕತೆಗೆ ಸ್ಫೂರ್ತಿಯಂತೆ. ನಮ್ಮ ಸುತ್ತಲಿನವರೇ ಮಾಡುವ ಕೆಲಸಗಳು, ಹೇಗೆ ಸಮಾಜಕ್ಕೆ ಕಂಟಕವಾಗುತ್ತವೆ ಎಚ್ಚರಿಕೆ ಸಂದೇಶಗಳನ್ನು ಈ ಚಿತ್ರದಲ್ಲಿ ನೋಡಬಹುದು. ಈಗಾಗಲೇ ಏಳೆಂಟು ಸಿನಿಮಾಗಳಲ್ಲಿ ನಟಿಸಿರುವ ವಿಜಯ… ಮಹೇಶ್‌ ಈ ಚಿತ್ರದ ನಾಯಕ. ‘ಇಲ್ಲಿಯವರೆಗೂ ಎಲ್ಲ ಬಗೆಯ ಸಿನಿಮಾಗಳಲ್ಲಿ ನಟಿಸಿದ್ದೇನೆ. ಗ್ರಾಮೀಣ ಸೊಗಡಿನ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಅದು ಈಡೇರುತ್ತಿದೆ. ಕಾಮಿಡಿ ಎಳೆಯಿಂದ ಶುರುವಾಗುವ ಕತೆ, ನಿಧಾನಕ್ಕೆ ಹಾರರ್‌ ಅವತಾರ ತಾಳುತ್ತದೆ. ಒಂದಾದ ಮೇಲೋಂದರಂತೆ ತಿರುವುಗಳು ಎದುರಾಗುತ್ತವೆ. ಕಮರ್ಷಿಯಲ… ಅಂಶಗಳೂ ಸಿನಿಮಾದಲ್ಲಿವೆ’ ಎಂಬುದು ವಿಜಯ… ಮಹೇಶ್‌ ಮಾತು.

ರಾಜ್ಯೋತ್ಸವದಂದೇ ಯುವರಾಜನ ಭರ್ಜರಿ ಎಂಟ್ರಿ; ರಾಘಣ್ಣ ಪುತ್ರನ ಜೊತೆ ಸಂದರ್ಶನ! 

ಸುಲಕ್ಷಾ ಕೈರಾ ಈ ಚಿತ್ರದ ನಾಯಕಿ. ಶಿಕ್ಷಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಚನಾ ಮಲ್ನಾಡ್‌ ಚಿತ್ರದ ಮತ್ತೊಬ್ಬ ನಾಯಕಿ. ಇವರದ್ದು ಇಲ್ಲಿ ಬೋಲ್ಡ್‌ ಪಾತ್ರ. ಸಿಕ್ಕಾಪಟ್ಟೆಗ್ಲಾಮರ್‌ ಇದೆಯಂತೆ. ಲಯ ಕೋಕಿಲ, ಗಣೇಶ್‌ ರಾವ್‌, ಪಿ. ಮೂರ್ತಿ, ಪುಷ್ಪ ಸ್ವಾಮಿ, ರತ್ನಮಾಲ, ಮೂಗು ಸುರೇಶ್‌, ಪ್ರಶಾಂತ್‌ ನಟನ ಹೀಗೆ ಹಲವು ಕಲಾವಿದರು ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಪೂರ್ಣಚಂದ್ರ ಛಾಯಾಗ್ರಹಣ, ಎಸ್‌ ನಾಗು ಸಂಗೀತ ಚಿತ್ರಕ್ಕಿದೆ.

Follow Us:
Download App:
  • android
  • ios