ನಟಿ ಸೋನುಗೌಡ ಮೊದಲ ಬಾರಿ ತಮ್ಮ ಬ್ಯೂಟಿ ಸೀಕ್ರೆಟ್‌ ರಿವೀಲ್ ಮಾಡಿದ್ದಾರೆ. ಅದು ಈ ಕ್ರೇಜಿ ಫೋಟೋಗಳ ಮೂಲಕ....

ಪಟಪಟ ಅಂತ ಮಾತನಾಡುತ್ತಾ ಚಿತ್ರರಂಗದ ಎಲ್ಲಾ ಕಲಾವಿದರ ಜೊತೆ ಉತ್ತಮ ಸಂಬಂಧ ಹೊಂದಿರುವ ನಟಿ ಸೋನು ಗೌಡ ಇಷ್ಟೊಂದು ಸುಂದರವಾಗಿರಲು ಕಾರಣವೇನು ? ಅವರ ಸೌಂದರ್ಯದ ಗುಟ್ಟೇನು ? ಎನ್ನುವುದು ಎಲ್ಲರಲ್ಲೂ ಮೂಡುವ ಸಹಜ ಕುತೂಹಲ ಸದ್ಯ ಇದಕ್ಕೀಗ ಖುದ್ದು ನಟಿಯೇ ತೆರೆ ಎಳೆದಿದ್ದಾರೆ. ಅವರೇ ಶೇರ್ ಮಾಡಿರುವ ಈ ಪೋಟೋಗಳನ್ನು ನೋಡಿದರೆ ಸಾಕು ನಿಮಗೆ ಉತ್ತರ ಸಿಗುತ್ತದೆ. 

ಎಲ್ಲಂದ್ರಲ್ಲಿ ಮಲಗುವುದು:

ನಟಿ ಸೋನುಗೌಡ ಅವರಿಗೆ ಎಲ್ಲಂದ್ರಲ್ಲಿ ಮಲಗುವ ಅಭ್ಯಾಸ ಇದ್ಯಂತೆ . ಸ್ವಲ್ಪ ಟೈಂ ಸಿಕ್ಕರೂ ಸಾಕು ಅಲ್ಲೇ ಡೀಪ್‌ ಸ್ಲೀಪ್ ಮಾಡುತ್ತಾರೆ. ಈ ವಿಚಾರದ ಬಗ್ಗೆ ಸೋನು ಪೋಸ್ಟ್‌ ಮಾಡಿದ್ದಾರೆ.

ಮುರಿದು ಬಿದ್ದ ಮದುವೆ ನೆನಪಿಸಿಕೊಂಡು ಕಣ್ಣೀರಿಟ್ಟ ಸೋನು ಗೌಡ?

'ಎಲ್ಲರೂ ನನ್ನ ಕೇಳುತ್ತಾರೆ ನಿಮ್ಮ ಬ್ಯೂಟಿ ಸೀಕ್ರೆಟ್‌ ಏನು ಎಂದು ಅದಕ್ಕೆ ನಾನು ಇವತ್ತು ಉತ್ತರ ಕೊಡುತ್ತೇನೆ. ನಾನು ನನ್ನ ಬ್ರೈನ್‌ಗೆ ತುಂಬಾನೇ ರೆಸ್ಟ್ ಕೊಡುತ್ತೇನೆ. ಎಲ್ಲೆಂದರಲ್ಲಿ ನಾನು ಬ್ರೇನ್‌ಗೆ ರೆಸ್ಟ್‌ ಕೊಡಬಲ್ಲೆ. ನನ್ನ ಸ್ನೇಹಿತರು ಮತ್ತು ಕುಟುಂಬಸ್ಥರು ಹಾಸ್ಯ ಮಾಡುತ್ತಾರೆ, ನಾನು ಮಲಗಿದ್ದಾಗ ಕಿತಾಪಕಿ ಮಾಡುತ್ತಾರೆ ಆದರೆ ಏನು ಮಾಡದೇ ಸ್ವಲ್ಪ ಸಮಯ ರೆಸ್ಟ್‌ ಕೊಟ್ಟರೆ ಸಾಕು ನಾನು ಧೀರ್ಘವಾಗಿ ನಿದ್ದೆ ಮಾಡುತ್ತೇನೆ. ಮಲಗುವುದಕ್ಕೆ ನನಗೆ ಹಾಸಿಗೆಯೇ ಬೇಕಂತೇನು ಇಲ್ಲ ಚಲಿಸುವ ಕಾರ್, ಟ್ರೈನ್, ಫ್ಲೈಟ್‌ ಏನಾದರೂ ಪರ್ವಾಗಿಲ್ಲ. ಮಗುವಂತೆ ಮಲಗುತ್ತೇನೆ.' ಎಂದು ಬರೆದುಕೊಂಡಿದ್ದಾರೆ.

View post on Instagram

ಅವರ ದೀರ್ಘ ನಿದ್ರೆಗೆ ಸಾಕ್ಷಿಯಾಗಿ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ 'ನಿನ್ನನ್ನು ನೀನೇ ಟ್ರೋಲ್ ಮಾಡಿಕೊಳ್ಳುತ್ತಿರುವೆ' ಎಂದು ಸೋನು ಅವರ ಸಹೋದರಿ ಕಿರುತೆರೆ ನಟಿಯೂ ಆಗಿರುವ ನೇಹಾಗೌಡ ಅವರು ಕಾಮೆಂಟ್ ಮಾಡಿದ್ದಾರೆ. ಅದಾದ ನಂತರ ನಟ ಜಗ್ಗೇಶ ಅವರ ಪತ್ನಿ ಪರಿಮಳ ಜಗ್ಗೇಶ್‌ ಕೂಡ ಹಾರ್ಟ್‌ ಎಮೋಜಿ ಶೇರ್ ಮಾಡಿಕೊಂಡಿದ್ದಾರೆ. ಅಷ್ಟೆ ಅಲ್ಲದೆ ಫೋಟೋಗ್ರಾಫರ್‌ ಅಭಿ 'ನನಗೆ ಇನ್ನು ಜ್ಞಾಪಕ ಇದೆ ಬೋರಿಂಗ್ ಸಿನಿಮಾ ವೀಕ್ಷಿಸುವಾಗ ನೀನು ಹೇಗೆ ಮಲಗಿರುವೆ' ಎಂದು ಕಾಮೆಂಟ್ ಮಾಡಿದ್ದಾರೆ.

ಒಟ್ಟಿನಲ್ಲಿ ಸೋನು ಗೌಡ ಬ್ಯೂಟಿ ಸೀಕ್ರೆಟ್‌ ತಿಳಿದುಕೊಂಡ ಅಭಿಮಾನಿಗಳು ಆಕೆ ಇಂತಹ ಫೋಟೋ ಶೇರ್ ಮಾಡಿರುವುದಕ್ಕೆ ಇರುವ ಬೋಲ್ಡ್‌ನೆಸ್‌ ಮೆಚ್ಚಿಕೊಂಡಿದ್ದಾರೆ.