ಅಪ್ಪು ಸರ್ ಹೋದ್ಮೇಲೆ ಗೊಂಬೆ ಹೇಳುತೈತೆ ಹಾಡುವುದಕ್ಕೆ ಭಯ ಆಗ್ತಿದೆ: Vijay Prakash
ಮಾಧ್ಯಮ ಸ್ನೇಹಿತರ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡ ಗಾಯಕ ವಿಜಯ್ ಪ್ರಕಾಶ್. ಗೊಂಬೆ ಹೇಳುತೈತೆ ಹಾಡೋಕೆ ಭಯ...
ಕನ್ನಡ ಚಿತ್ರರಂಗದ ಹೆಸರಾಂತ ಗಾಯಕ ವಿಜಯ್ ಪ್ರಕಾಶ್ (Vijay Prakash) ಈ ವರ್ಷ ತಮ್ಮ ಹುಟ್ಟು ಹಬ್ಬವನ್ನು (Birthday) ಮಾಧ್ಯಮ ಸ್ನೇಹಿತರ ಜೊತೆ ಆಚರಿಸಿಕೊಂಡರು. ಇದೇ ವೇಳೆ ತಾವು ಟೀ ಬ್ರ್ಯಾಂಡ್ (Tea Brand) ಒಂದಕ್ಕೆ ರಾಯಭಾರಿ ಆಗಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಡಬಲ್ ಧಮಾಕ ಆಚರಿಸುತ್ತಿರುವ ವಿಜಯ್, ಡಾ.ರಾಜ್‌ಕುಮಾರ್ (Dr Rajkumar), ಪುನೀತ್ ರಾಜ್‌ಕುಮಾರ್ (Puneeth Rajkumar) ಹಾಡುಗಳನ್ನು ಹಾಡಿ ಮನೋರಂಜಿಸಿದ್ದಾರೆ. ಅದರಲ್ಲೂ ಗೊಂಬೆ ಹೇಳುತೈತೆ ಹಾಡು ಹಾಡುವುದಕ್ಕೆ ಭಯ ಆಗುತ್ತದೆ ಎಂದು ಹೇಳಿಕೊಂಡಿದ್ದಾರೆ.
ವಿಜಯ್ ಪ್ರಕಾಶ್ ಮಾತು:
'ಅಪ್ಪು ಸರ್ ಹೋದ್ಮೇಲೆ ನನಗೆ ಗೊಂಬೆ ಹೇಳುತೈತೆ ಹಾಡನ್ನು ಹಾಡುವುದಕ್ಕೆ ಭಯವಾಗುತ್ತಿತ್ತು. ಈ ಹಾಡನ್ನು ಹಾಡೋಕೆ ಸಾಧ್ಯವಾ ಅಂದುಕೊಂಡಿದ್ದೆ. ಇದನ್ನು ಹಾಡುವುದು ನನ್ನ ಕರ್ತವ್ಯ, ಫೆಬ್ರವರಿ 19ರಂದು ದುಬೈನಲ್ಲಿ (Dubai) ನಾನು ಕಾರ್ಯಕ್ರಮ ನೀಡುವಾಗ ಅಲ್ಲಿದ್ದ ಸಮಸ್ತ ಕನ್ನಡಿಗರೂ ಮೂರು ಬಾರಿ ನನ್ನ ಹತ್ತಿರ ಈ ಹಾಡು ಹಾಡಿಸಿದ್ದರು. ಮೂರು ಸಲವೂ ಮೂರು ರೀತಿಯಲ್ಲಿ ಅಪ್ಪು ಸರ್ ಅವರನ್ನು ನೋಡಿದ್ದರು, ಅವರೆಲ್ಲರ ಕಣ್ಣುಗಳಲ್ಲಿ ನಾನು ಅಪ್ಪು ಸರ್‌ನ ಪ್ರೆಸೆನ್ಸ್ ಫೀಲ್ ಮಾಡಿಕೊಂಡೆ. ಇದು ಕೇವಲ ಒಂದು ಹಾಡಲ್ಲ ಒಬ್ಬ ಮಾಹನ್ ವ್ಯಕ್ತಿಯ ದೊಡ್ಡ ಪ್ರಯಾಣ ಇದು. ಕಡಿಮೆ ವಯಸ್ಸಿನಲ್ಲಿ ಅವರು ಮಾಡಿರುವ ದೊಡ್ಡ ಸಾಧನೆಗೆ ಈ ಹಾಡು. ಅವತ್ತು ನಾನು ಅವರು ನಾನೇ ಈ ಹಾಡನ್ನು ಹಾಡಬೇಕೆಂದು ನೆನಪಿಸಿಕೊಂಡಿದ್ದಕ್ಕೆ ಧನ್ಯವಾದಗಳು,' ಎಂದು ವಿಜಯ್ ಪ್ರಕಾಶ್ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
'ನಾನು ಹುಟ್ಟಿ ಬೆಳೆದಿದ್ದು ಮೈಸೂರಿನಲ್ಲಿ (Mysore). ಯೋಚನೆ, ಆಲೋಚನೆ ಯಾವ ಭಾಷೆಯಲ್ಲಿ ಮಾಡಿದ್ದರೂ ಅದನ್ನ ಹುಟ್ಟಿ ಹಾಕುವುದು ಕನ್ನಡವೇ (Kannada). ಕನ್ನಡ ನನ್ನ ಶರೀರದಲ್ಲಿ ಬೆರೆತು ಹೋಗಿದೆ. ಮಾತಿರಲಿ, ಹಾಡಿರಲಿ, ಕನ್ನಡದಲ್ಲಿ ಆತ್ಮೀಯತೆ ತಾನಾಗಿಯೇ ಬರುತ್ತದೆ. ನನ್ನನ್ನು ಹುಟ್ಟಿಸಿ, ಸಮಾದಲ್ಲಿ ನಾನು ಒಬ್ಬ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದೀನಿ, ಅಂದ್ರೆ ಅದು ಕನ್ನಡ ಭಾಷೆಯಿಂದ,' ಎಂದು ವಿಜಯ್ ಹೇಳಿದ್ದಾರೆ.
Making of James Movie 2022: ಚಿತ್ರದ ಎಲ್ಲಾ ಫೈಟ್ ಸೀನ್‌ಗಳು ಅಪ್ಪು ಸರ್ ಮೊಬೈಲ್ನಲ್ಲಿತ್ತು: ಚೇತನ್‌ಕುಮಾರ್'ಬೇರೆ ಭಾಷೆಯಲ್ಲಿ ಗುರುತಿಸಿಕೊಳ್ಳುವುದಕ್ಕೆ.....ಏನ್ ಅಂದ್ರೆ ಕಲೆ ಒಂದಾದರೆ ಕಲಾವಿದ ಬದಲಾಗಬಾರದು. ಕಲೆ ಬೆಳೆಯುತ್ತಾ ಹೋಗುತ್ತೆ. ಆದರೆ ಕಲಾವಿದ ಅಲ್ಲಿಯೇ ಇರಬೇಕು. ನನಗೆ ಮೈಸೂರಿನವರು (Mysore) ನನ್ನ ತಂದೆ ತಾಯಿ ಇಟ್ಟಿರುವ ಸಂಸ್ಕಾರ ಅಂತ ನಾನು ಭಾವಿಸುತ್ತೀನಿ. ನನ್ನ ಪ್ರಯಾಣ ಎಷ್ಟೇ ಮೇಲೆ ಹೋದರೂ, ನಾನು ಎಲ್ಲಿ ಪ್ರಾರಂಭ ಮಾಡಿದೆನೋ, ಅಲ್ಲಿಯೇ ಇದ್ದೀನಿ, ಅಲ್ಲೇ ಇರ್ತೀನಿ.' ಎಂದಿದ್ದಾರೆ ವಿಜಯ್.
ಗಾಯಕ ವಿಜಯ್ ಪ್ರಕಾಶ್ ಪುತ್ರಿ ಅಡುಗೆ: ಪರ್ಫೆಕ್ಟ್ ಎಂದ ಅಪ್ಪ!'ಎಲ್ಲರ ಜೊತೆ ಹುಟ್ಟುಹಬ್ಬ ಅಚರಿಸಿಕೊಳ್ಳುವುದು ನನ್ನ ಯೋಗ. ಏಕೆಂದರೆ ಜನ್ಮ ಕೊಟ್ಟ ತಾಯಿಯ ಗರ್ಭದಲ್ಲಿಯೇ ಆ ಮಗುವನ್ನ ಸಾಕಿ ಪೋಷಿಸಿ ಹೇಗಿಡುತ್ತಾನೋ, ಏನೋ ..ಅನ್ನೋ ಕಾಳಜಿ ಗ್ರೇಟ್. ಸಂಗೀತ ನನಗೆ ಸಂತೋಷ ಕೊಟ್ಟಿದೆ. ನನ್ನ ತಾಯಿ ಮತ್ತು ಹೆಂಡ್ತಿ ಜೊತೆ ಹುಟ್ಟು ಹಬ್ಬ ಆಚರಿಸುವುದು ಸಾಮಾನ್ಯ. ಅದರಲ್ಲಿಯೂ ಮಾಧ್ಯಮ ಸ್ನೇಹಿತರು ತುಂಬಾನೇ ಬ್ಯುಸಿಯಾಗಿರುತ್ತಾರೆ. ನೀವೆಲ್ಲರೂ ಒಂದಾಗಿ ಬಂದು ಆಚರಿಸುತ್ತಿರುವುದಕ್ಕೆ ಖುಷಿಯಾಗಿದೆ. ನನಗೆ ಪ್ರತಿಯೊಂದು ದಿನವೂ ಗಿಫ್ಟ್ (Gift), ದೇವರು (God) ಕೊಟ್ಟಿರುವ ಒಂದು ದಿನವನ್ನು ನಾವು ಜೀವಿಸಬೇಕು ನಮ್ಮ ಕೆಲಸವನ್ನು ಶದ್ಧೆಯಿಂದ ಮಾಡಬೇಕು. ಈ ವರ್ಷಕ್ಕೆ ಈ ಪ್ಲ್ಯಾನ್ ಮಾಡಬೇಕು ಅನ್ನೋದು ನನಗಿಲ್ಲ ಎಲ್ಲಾದಕ್ಕೂ ನಾನು ಸಿದ್ಧವಾಗಿದ್ದೀನಿ,' ಎಂದು ವಿಪಿ ಮಾತು ಮುಗಿಸಿದ್ದಾರೆ.