ಕರ್ನಾಟಕ ಶಾಸ್ತ್ರೀಯ ಸಂಗೀತ ಪರಿಣತ, ಕನ್ನಡ ಚಿತ್ರರಂಗದ ಅದ್ಭುತ ಗಾಯಕ ವಿಜಯ್ ಪ್ರಕಾಶ್‌ ಇತ್ತೀಚಿಗೆ ಇನ್‌ಸ್ಟಾಗ್ರಾಂನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅದರಲ್ಲೂ ತಮ್ಮ ಬ್ಯುಸಿ ಶೆಡ್ಯೂಲ್‌ನಲ್ಲಿಯೂ ಸಮಯ ಮಾಡಿಕೊಂಡು, ಮಗಳೊಂದಿಗೆ ಕಾಲ ಕಳೆಯುವ ಸುಮಧುರ ಕ್ಷಣಗಳ ಬಗ್ಗೆ ಅಪ್ಡೇಟ್‌ ನೀಡುತ್ತಲೇ ಇರುತ್ತಾರೆ.

ಗಾಯಕ ವಿಜಯ್ ಪ್ರಕಾಶ್ ಪುತ್ರಿ ಕಾವ್ಯ ಹೀಗಿದ್ದಾರೆ ನೋಡಿದ್ದೀರಾ?

ಈ ಸಮಯದಲ್ಲಿ ಮಗಳ ಜೊತೆ ಮನೆಯಲ್ಲಿ ಕುಕ್ಕಿಂಗ್  ಮಾಡಿರುವ ವಿಜಯ್ ಸ್ಪೆಷಲ್‌ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. 'ಅಡುಗೆ ಮಾಡಲು ಹೊಸ ವ್ಯಕ್ತಿ ಸಿಕ್ಕಿದ್ದಾರೆ. ನನ್ನ ಮಗಳು ಅದ್ಭುತವಾಗಿ ಬೀಟ್‌ರೂಟ್‌ ಚಪಾತಿ ಮಾಡುತ್ತಾಳೆ. ತುಂಬಾ ರುಚಿಯಾಗಿತ್ತು. ಕಡಿಮೆ ಸಮಯದಲ್ಲಿ ಮಾಡಿದರೂ ಚಪಾತಿ ಪರ್ಫೆಕ್ಟ್ ಶೇಪ್‌ ಇರುತ್ತದೆ,' ಎಂದು ಬರೆದು ಕೊಂಡಿದ್ದಾರೆ. 

 

ಬೆಂಗಳೂರಿನಲ್ಲಿ ಸೂಪರ್ ವಾತಾವರಣ ಇರುವ ಕಾರಣ ವಿಜಯ್ ಪ್ರಕಾಶ್‌ ಜುಲೈ 13ರಂದು ನೋಡಲು ನೈಸ್ ರೋಡ್‌ನಂತಿರುವ ರಸ್ತೆಯಲ್ಲಿ ಬೈಕ್ ರೈಡ್ ಹೋಗಿದ್ದಾರೆ. ಈ ವಿಡಿಯೋವನ್ನು ಮೆಮೋರೇಬಲ್ ದಿನ ಎಂದು ಶೇರ್ ಮಾಡಿಕೊಂಡಿದ್ದಾರೆ.

 

 
 
 
 
 
 
 
 
 
 
 
 
 

🏍 13-07-2020

A post shared by Vijay Prakash (@vijayprakashvp) on Jul 12, 2020 at 11:51pm PDT

ಗಾಯನ ಮಾಡುತ್ತಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿರುವ ವಿಜಯ್ ಪ್ರಕಾಶ್‌ ಅವರು ಅನೇಕ ಸ್ಪರ್ಧಿಗಳ ಫೇವರೆಟ್‌ ಜಡ್ಜ್‌ ಆಗಿದ್ದಾರೆ. ಅದರಲ್ಲೂ ಲಾಕ್‌ಡೌನ್‌ ಇದ್ದ ಕಾರಣ ಶೂಟಿಂಗ್ ಮಾಡುವುದನ್ನು ನಿಲ್ಲಿಸಿದ್ದರು. ಆದರೀಗ ಮಹಾ ಸಂಗಮದ ಮೂಲಕ ಮತ್ತೆ ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿಪಿ ಅವರು ಸ್ಪರ್ಧಿಗಳ ಜೊತೆ ಹಾಡುವುದನ್ನು ಕೇಳಲು ವೀಕ್ಷಕರು ಕಾತುರದಿಂದ ಕಾಯುತ್ತಿರುತ್ತಾರೆ.

3 ತಿಂಗಳುಗಳ ನಂತರ ಶುರುವಾಯ್ತು 'ಸರಿಗಮಪ' ರಿಯಾಲಿಟಿ ಶೋ! 

ಲಾಕ್‌ಡೌನ್‌ಗೆ ಸ್ವಲ್ಪ ಬಿಡುವು ಸಿಕ್ಕಿ, ದೇವಸ್ಥಾನಗಳು ತೆರೆದಾಗ ಕ್ರಿಕೆಟಿಗ ಅನಿಲ್ ಕುಂಬ್ಳೆ ಜೊತೆ ವಿಜಯ್ ಪ್ರಕಾಶ್ ಶೃಂಗೇರಿಗೆ ಭೇಟಿ ನೀಡಿದ್ದಾರೆ. ಇಬ್ಬರೂ ಪಂಚೆಯಲ್ಲಿ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ ಕ್ಷಣಗಳ ಫೋಟೋಗಳು ವೈರಲ್ ಆಗಿದ್ದವು.