ಈ ಹಿಂದೆ ‘ಕೃಷ್ಣ ಈಸ್‌ ಲೀಲ’ ಎನ್ನುವ ಚಿತ್ರ ಮಾಡಿದ್ದ ತಂಡವೇ ಈ ಚಿತ್ರವನ್ನು ಮಾಡುತ್ತಿದ್ದು, ಆ ಮೂಲಕ ಎರಡನೇ ಬಾರಿಗೆ ಸಿದ್ದು ಜೊನ್ನಲಗಡ್ಡ ಹಾಗೂ ಶ್ರದ್ಧಾ ಶ್ರೀನಾಥ್‌ ಜೋಡಿ ಆಗುತ್ತಿದ್ದಾರೆ. ‘ಕೃಷ್ಣ ಈಸ್‌ ಲೀಲ’ ಚಿತ್ರ ಓಟಿಟಿಯಲ್ಲಿ ಬಿಡುಗಡೆಗೊಂಡು ಸಾಕಷ್ಟುಯಶಸ್ವಿ ಕಂಡ ಬೆನ್ನೆಲ್ಲಿ ಮತ್ತೊಂದು ಚಿತ್ರವನ್ನು ಆರಂಭಿಸಲಾಗಿದೆ. ಈ ಚಿತ್ರವೂ ಅದೇ ರೀತಿ ಯಶಸ್ಸು ಕಾಣುತ್ತದೆ ಎಂಬುದು ಚಿತ್ರತಂಡದ ನಂಬಿಕೆ.

ಮದ್ವೆ ಆದ್ಮೇಲೆ ನಟಿಯರಿಗೆ ಡಿಮ್ಯಾಂಡ್ ಕಮ್ಮಿ ಆಗುತ್ತಾ? ದಯವಿಟ್ಟು ಉತ್ತರಿಸಿ ಎಂದ ನಟಿ! 

ಈಗಾಗಲೇ ‘ನರುಡಿ ಬ್ರತುಕು ನಟನ’ ಚಿತ್ರದ ಟೈಟಲ್‌ ಪೋಸ್ಟರ್‌ ಬಿಡುಗಡೆ ಆಗಿದೆ. ಕಮಲ್‌ ಹಾಸನ್‌ ಅಭಿನಯದ ‘ಸಾಗರ ಸಂಗಮಂ’ ಚಿತ್ರದಲ್ಲಿ ಬರುವ ‘ಈ ನರುಡಿ ಬ್ರತುಕು ನಟನ ನೀಕೆಂದುಕಿಂತ ತಪನಾ’ ಎನ್ನುವ ಪ್ರಸಿದ್ಧ ಹಾಡಿನ ಸಾಲನ್ನೇ ಚಿತ್ರದ ಟೈಟಲ್‌ ಮಾಡಿಕೊಂಡಿದ್ದಾರೆ. ಕ್ರೈಮ್‌ ನೆರಳಿನಲ್ಲಿ ಸಾಗುವ ಪ್ರೇಮಕತೆಯ ಚಿತ್ರ ಇದಾಗಿದ್ದು, ದೀಪಾವಳಿಯಿಂದ ಚಿತ್ರೀಕರಣ ಆರಂಭಗೊಳ್ಳಲಿದೆ. ಇನ್ನೂ ತೆಲುಗಿನಲ್ಲಿ ಮತ್ತೊಂದು ಸಿನಿಮಾ ಒಪ್ಪಿಕೊಳ್ಳುವ ಜತೆಗೆ ಶ್ರದ್ಧಾ ಶ್ರೀನಾಥ್‌ ಪಕ್ಕದ ಭಾಷೆಗಳಲ್ಲಿ ಸಾಕಷ್ಟುಬ್ಯುಸಿ ಆಗಿದ್ದಾರೆ.

 

ತಮಿಳಿನ ‘ವಿಕ್ರಮ್‌ ವೇದ’ ಚಿತ್ರದ ನಂತರ ತೆಲುಗು ಹಾಗೂ ತಮಿಳಿನಲ್ಲಿ ಒಳ್ಳೆಯ ಚಿತ್ರಗಳ ಮೂಲಕ ತಮ್ಮ ಖಾತೆ ತೆರೆಯುತ್ತಿರುವ ಶ್ರದ್ಧಾ ಶ್ರೀನಾಥ್‌, ಸದ್ಯ ನಟ ಮಾದವನ್‌ ಜತೆ ನಾಯಕಿಯಾಗಿ ನಟಿಸಿರುವ ‘ಮಾರ’ ಸಿನಿಮಾ ಬಿಡುಗಡೆ ಆಗಬೇಕಿದೆ. ಇದರ ಜತೆಗೆ ನಟ ವಿಶಾಲ್‌ ಜತೆ ‘ಚಕ್ರ’ ಚಿತ್ರದಲ್ಲಿ ನಟಿಸಿದ್ದು, ಇದು ಕೂಡ ಬಿಡುಗಡೆಯ ಹಂತಕ್ಕೆ ಬಂದಿದ್ದು, ಕನ್ನಡದಲ್ಲಿ ರಿಷಬ್‌ ಶೆಟ್ಟಿಜತೆಗೆ ‘ರುದ್ರಪ್ರಯಾಗ’ ಹಾಗೂ ನೀನಾಸಂ ಸತೀಶ್‌ ಜತೆಗೆ ‘ಗೋದ್ರಾ’ ಚಿತ್ರಗಳಲ್ಲಿ ಇವೆ. ‘ಗೋದ್ರಾ’ ಸಿನಿಮಾ ಶೂಟಿಂಗ್‌ ಮುಗಿಸಿಕೊಂಡು ಬಿಡುಗಡೆಯ ಬಾಗಿಲಲ್ಲಿ ನಿಂತಿದೆ.

ಹಿಂದೂ ಭಾವನೆಗೆ ಧಕ್ಕೆ,  'ಕೃಷ್ಣಾ ಎಂಡ್ ಹಿಸ್ ಲೀಲಾ'ದಲ್ಲಿ ಇರುವ  ಅಂಥ ದೃಶ್ಯ ಏನು? 

ಒಟ್ಟು ಐದು ಚಿತ್ರಗಳೂ ಶ್ರದ್ಧಾ ಅವರ ಮುಂದಿದ್ದು, ಒಂದು ಚಿತ್ರಕ್ಕೆ ಮುಹೂರ್ತ ಆಗಿದ್ದರೆ, ಮತ್ತೊಂದು ಸಿನಿಮಾ ಸೆಟ್ಟೇರಬೇಕಿದೆ. ಉಳಿದಂತೆ ಮೂರು ಚಿತ್ರಗಳು ಬಿಡುಗಡೆಯ ಹಾದಿಯಲ್ಲಿದ್ದು, ಕನ್ನಡಕ್ಕಿಂತ ಹೆಚ್ಚಾಗಿ ತೆಲುಗು ಹಾಗೂ ತಮಿಳು ಭಾಷೆಯ ಚಿತ್ರಗಳಲ್ಲಿ ‘ಯೂ ಟರ್ನ್‌’ ಬೆಡಗಿ ಬ್ಯುಸಿ ಆಗಿದ್ದಾರೆ ಎಂಬುದು ಸಿನಿಮಾ ನಗರಿಯ ಸಮಾಚಾರಗಳು.

"