ಸಲಗ ಸೆಲೆಬ್ರಿಟಿಗಳ ಸಾಥ್‌

ಟಗರು ಹೌಸ್‌ಫುಲ್‌ ಆಗಿದ್ದು ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಗೋಪಾಲನ್‌ ಮಾಲ್‌ ಹಾಗೂ ಗೋಪಾಲನ್‌ ಲೆಗಸ್ಸಿ ಮಾಲ್‌ನಲ್ಲಿ. ಒಂದು ದಿನ ಈ ಚಿತ್ರದ ಫ್ಯಾನ್‌ ಶೋ ಆಯೋಜಿಸಲಾಗಿತ್ತು. ಅವತ್ತು ಸಲಗ ಚಿತ್ರತಂಡದ ದುನಿಯಾ ವಿಜಯ್‌, ಧನಂಜಯ್‌ ಮುಂತಾದ ಸೆಲೆಬ್ರಿಟಿಗಳು ಸಿನಿಮಾ ವೀಕ್ಷಿಸಿದ್ದರು. ಲಾಕ್‌ಡೌನ್‌ ನಂತರ ಒಂದು ಚಿತ್ರವನ್ನು ಸಂಭ್ರಮಿಸಲು ಬೇರೆ ಸೆಲೆಬ್ರಿಟಿಗಳು ಸಾಥ್‌ ನೀಡುವುದು ಕೂಡ ಮುಖ್ಯ. ಎಲ್ಲರೂ ಸೇರಿಕೊಂಡು ಚಿತ್ರರಂಗವನ್ನು ಮತ್ತೆ ಕಟ್ಟಬೇಕಿದೆ, ಬೆಳೆಸಬೇಕಾಗಿದೆ ಅನ್ನುವುದನ್ನು ಈ ಮೂಲಕ ಸಲಗ ಚಿತ್ರತಂಡ ತೋರಿಸಿಕೊಟ್ಟಿದೆ. ಒಗ್ಗಟ್ಟಿನಲ್ಲಿ ಬಲವಿದೆ ಅನ್ನುವುದು ಈಗ ಚಿತ್ರರಂಗ ಅರಿತುಕೊಳ್ಳಬೇಕಾಗಿದೆ.

ಮುಂದಿನ ವಾರ 50 ಸ್ಕ್ರೀನ್‌ಗಳಲ್ಲಿ

ಸಿನಿಮಾ ಹೌಸ್‌ಫುಲ್‌ ಆದ ಉತ್ಸಾಹದಲ್ಲಿ ಮುಂದಿನ ವಾರದಿಂದ 50 ಹೆಚ್ಚುವರಿ ಸ್ಕ್ರೀನ್‌ಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಚಿತ್ರದ ವಿತರಕ ಜಯಣ್ಣ ಹಾಗೂ ನಿರ್ಮಾಪಕ ಕೆ ಪಿ ಶ್ರೀಕಾಂತ್‌ ಮುಂದಾಗಿದ್ದಾರೆ.

‘ಸದ್ಯ ಈಗ ಬೆಂಗಳೂರು, ಮೈಸೂರು, ಶಿವಮೊಗ್ಗ ಸೇರಿದಂತೆ 7 ಕಡೆ ಸಿನಿಮಾ ಬಿಡುಗಡೆ ಆಗಿದೆ. ಹಬ್ಬದ ದಿನ ಹೆಚ್ಚು ಜನ ಬಂದಿದ್ದಾರೆ. ಹೀಗಾಗಿ ಮತ್ತಷ್ಟುಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರವನ್ನು ಮರು ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ಈಗ ಬಿಡುಗಡೆ ಆಗಿರುವ ಕಡೆ ಎಷ್ಟುಪ್ರೇಕ್ಷಕರು ಬಂದಿದ್ದಾರೆ, ಎಷ್ಟುಕಲೆಕ್ಷನ್‌ ಆಗಿದೆ ಎಂಬುದು ನಾಲ್ಕೈದು ದಿನಗಳಲ್ಲಿ ಗೊತ್ತಾಗಲಿದೆ’ ಎನ್ನುತ್ತಾರೆ ವಿತರಕ ಜಯಣ್ಣ.

ಸೆಂಚುರಿ ಸ್ಟಾರ್ ಟ್ಯಾಲೆಂಟ್‌ಗೆ ಯುವಕರು ಫುಲ್ ಫಿದಾ! 

‘ಕಳೆದ ಮೂರು ದಿನಗಳಿಂದ ಒಳ್ಳೆಯ ರಿಪೋರ್ಟ್‌ ಬರುತ್ತಿದೆ. ಮುಂದಿನವ ವಾರ 50 ಸ್ಕ್ರೀನ್‌ಗಳಲ್ಲಿ ‘ಟಗರು’ ಸಿನಿಮಾ ಪ್ರದರ್ಶನ ಆಗಲಿದೆ. ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರಲ್ಲ ಎಂಬುದನ್ನು ಶಿವಣ್ಣ ಅವರ ಟಗರು ಸಿನಿಮಾ ಸುಳ್ಳಾಗಿಸುತ್ತಿದೆ’ ಎನ್ನುತ್ತಾರೆ ಚಿತ್ರ ನಿರ್ಮಾಪಕ ಕೆಪಿ ಶ್ರೀಕಾಂತ್‌.