'ಭಜರಂಗಿ 2' ಚಿತ್ರೀಕರಣದ ಬಗ್ಗೆ ನಿರ್ದೇಶಕ ಹರ್ಷ ಮಾತನಾಡಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟೀಸರ್ ವೀಕ್ಷಕರ ಮೆಚ್ಚುಗೆ ಪಾತ್ರವಾಗಿದೆ.
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಬಹುನಿರೀಕ್ಷಿತ 'ಭಜರಂಗಿ-2' ಚಿತ್ರದ ಬಗ್ಗೆ ದಿನೆ ದಿನೇ ಕುತೂಹಲ ಹೆಚ್ಚಿಸುತ್ತಿದೆ. ಅದರಲ್ಲೂ ಟೀಸರ್ ರಿಲೀಸ್ ನಂತರ ಪಾತ್ರಧಾರಿಗಳು ಕಾಣಿಸಿಕೊಂಡ ರೀತಿ ಸಿನಿ ಪ್ರೇಮಿಗಳ ಗಮನ ಸೆಳೆದಿದೆ. ಇನ್ನೂ ಬಹುತೇಕ ಚಿತ್ರೀಕರಣ ಬಾಕಿಯಿದ್ದು, ನಿರ್ದೇಶಕ ಹರ್ಷ ಶೂಟಿಂಗ್ ಡೇಟ್ ಫಿಕ್ಸ್ ಮಾಡಿದ್ದಾರೆ.
ಸೂಪರ್ ಭಜರಂಗಿ ಎದುರು ಬೆಚ್ಚಿ ಬೀಳಿಸೋ ದೈತ್ಯ ವಿಲನ್..!
ಖಾಸಗಿ ವೆಬ್‌ಸೈಟ್ ಸಂದರ್ಶನವೊಂದರಲ್ಲಿ ಶಿವರಾಜ್‌ಕುಮಾರ್ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಕೇವಲ 12 ದಿನಗಳು ಶೂಟಿಂಗ್ ಮಾಡಬೇಕಿದೆ. ಅದರಲ್ಲಿ 6 ದಿನ ಶಿವರಾಜ್‌ಕುಮಾರ್ ನಟಿಸಬೇಕಾದ ಭಾಗ ಚಿತ್ರೀಕರಣ ಮಾಡಲಾಗುತ್ತದೆ ಎಂದಿದ್ದಾರೆ. ಬೆಂಗಳೂರಿನಲ್ಲಿ ನಿರ್ಮಿಸಲಾಗಿರುವ ಸೆಟ್‌ನಲ್ಲಿ ಆಗಸ್ಟ್ 10ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.

ನಿರ್ದೇಶಕರು ಹೇಳಿದ್ದೇನು?
ಈ ಬಗ್ಗೆ ಹರ್ಷ ಕೂಡ ಸಂದರ್ಶನವೊಂದರಲ್ಲಿ ತನಾಡಿದ್ದಾರೆ. ಹರ್ಷ ಚಿತ್ರೀಕರಣ ಮಾಡುವುದಾ ಬೇಡವಾ, ಎಂದು ತಿಳಿದುಕೊಳ್ಳಲು ಶಿವರಾಜ್‌ಕುಮಾರ್‌ನನ್ನು ಸಂಪರ್ಕಿಸಿದ್ದಾರೆ. ನನ್ನಿಂದಲೇ ಚಿತ್ರೀಕರಣ ಶುರುವಾಗಲಿ. ಸುಮ್ಮನೆ ಹೀಗೆ ಕುಳಿತು ಚಿತ್ರರಂಗವದರಿಗೆ ತೊಂದರೆ ನೀಡಬಾರದು. ಶೂಟಿಂಗ್ ಮುಗಿಸುವುದು ನನ್ನ ಕರ್ತವ್ಯ ಎಂದು ಹೇಳಿದ್ದಾರಂತೆ. ಒಟ್ಟಿನಲ್ಲಿ ಸೆಂಚುರಿ ಸ್ಟಾರ್ ಚಿತ್ರೀಕರಣಕ್ಕೆ ಚಾಲನೆ ನೀಡುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಶಕ್ತಿ ಬಂದಂತೆ ಆಗಿದೆ.

ಕೊರೋನಾ ವೈರಸ್‌ನಿಂದಾಗಿ ಚಿತ್ರರಂಗದಲ್ಲಿ ಕೆಲಸಗಳು ಅರ್ಧಕ್ಕೆ ನಿಂತ ಕಾರಣ ತಂತ್ರಜ್ಞರು, ಕಾರ್ಮಿಕರು ಹಾಗೂ ಬಹುತೇಕ ಕಲಾವಿದರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಇವರಿಗೆಲ್ಲ ಸರಕಾರ ಆರ್ಥಿಕ ನೆರವು ನೀಡಬೇಕೆಂದು ಇತ್ತೀಚಿಗೆ ಶಿವರಾಜ್‌ಕುಮಾರ್ ಅವರ ಬೆಂಗಳೂರಿನ ನಿವಾಸದಲ್ಲಿ ನಿರ್ಮಾಪಕರು- ನಿರ್ದೇಶಕರು ಹಾಗೂ ಸ್ಟಾರ್ ನಟರು ಸೇರಿಕೊಂಡು ಚರ್ಚೆ ನಡೆಸಿದ್ದರು. ಇಂದು (ಆ.8 ಮಂಗಳವಾರ) ಈ ವಿಚಾರವನ್ನು ಮುಖ್ಯ ಮಂತ್ರಿಗಳ ಜೊತೆ ಚರ್ಚಿಸಿ, ಸಹಾಯ ಯಾಚಿಸಲು ಕನ್ನಡ ಚಿತ್ರರಂಗ ನಿರ್ಧರಿಸಿತ್ತು. ಆದರೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಭೇಟಿಯನ್ನು ಮುಂದೂಡಲಾಗಿದೆ.
ಅಳುಮುಂಜಿ ಪಾತ್ರ ಬಿಟ್ಟು, ಸಿಗಾರ್ ಹಿಡಿದ ನಟಿ ಶ್ರುತಿ ಲುಕ್ ನೋಡಿ!
ಅನೂಪ್ ಭಂಡಾರಿ ನಿರ್ದೇಶನದ ಫ್ಯಾಂಟಮ್ ಚಿತ್ರಕ್ಕೆ ಸುದೀಪ್ ಸಹ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದು, ಹೈದ್ರಾಬಾದ್‌ನಲ್ಲಿ ಚಿತ್ರ ತಂಡ ಕಾರ್ಯ ಪ್ರವೃತ್ತವಾಗಿದೆ.ಹೀಗೆ ಕೆಲವೇ ಕೆಲವು ಚಿತ್ರಗಳ ಶೂಟಿಂಗ್ ಆರಂಭವಾದರೂ, ಕಷ್ಟದಲ್ಲಿರುವ ಅನೇಕ ಕಾರ್ಮಿಕರ ಜೀವನಕ್ಕೆ ಆಧಾರವಾಗುವುದರಲ್ಲಿ ಅನುಮಾನವೇ ಇಲ್ಲ.
