ಸ್ಯಾಂಡಲ್‌ವುಡ್ 'ಮುಮ್ತಾಜ್‌' ಶರ್ಮಿಳಾ ಮಾಂಡ್ರೆ ಎಲ್ಲಿದ್ದಾರೆ ಎಂಬ ಅಭಿಮಾನಿಗಳ ಪ್ರಶ್ನೆಗೆ ಇದೀಗ ಅವರ ಇನ್‌ಸ್ಟಾಗ್ರಾಂ ಸ್ಟೋರಿ ಉತ್ತರ ಕೊಟ್ಟಿದೆ. 

ಇಡೀ  ಭಾರತವೇ ಏಪ್ರಿಲ್ 4ರಂದು ಕಠಿಣ ಲಾಕ್‌ಡೌನ್‌ ಪಾಲಿಸುತ್ತಿದ್ದಾಗ ನಟಿ ಶರ್ಮಿಳಾ ಮಾಂಡ್ರೆ ಹಾಗೂ ಸ್ನೇಹಿತ ಸಂತೋಷ ಅಗತ್ಯ ಸಾಮಾಗ್ರಿಯನ್ನು ಖರೀದಿಸಲು ನಡು ರಾತ್ರಿ ಕಾರು ಚಲಾಯಿಸಿದ್ದಾರೆ. ಕಾರು ವೇಗವಾಗಿ ಚಲಾಯಿಸುತ್ತಿದ್ದ ಗೆಳೆಯ ಸಂತೋಷ್ ಗೆ  ಕಾರಿನ ನಿಯಂತ್ರಣ ಸಿಗದೆ  ಬೆಂಗಳೂರಿನ ವಸಂತ್ ನಗರದ ಫ್ಲೈ ಓಬರ್‌ಗೆ ಡಿಕ್ಕಿ ಹೊಡೆದಿದ್ದಾರೆ ಹಾಗೂ ತಕ್ಷಣವೇ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಘಟನೆಯಿಂದ ಶರ್ಮಿಳಾ ಮಾಂಡ್ರೆಗೆ ಮಲ್ಟಿಪಲ್ ಫ್ಯಾಕ್ಚರ್‌ ಆಗಿತ್ತು ಎನ್ನಲಾಗಿದೆ.

ಘಟನೆ ನಡೆದ ಹಲವು ದಿನ ಶರ್ಮಿಳಾ ಸೋಷಿಯಲ್ ಲೈಫಿಯಿಂದ ದೂರು ಉಳಿದಿದ್ದರು. ಈ ಸಮಯದಲ್ಲಿ ಅನೇಕ ಊಹಾಪೋಹಗಳು ಅವರ ಬಗ್ಗೆ ಕೇಳಿ ಬರುತ್ತಿದ್ದವು ಆದರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಚಿಕಿತ್ಸೆ ಪಡೆಯುತ್ತಿದ್ದರು.  ಕೆಲವು ದಿನಗಳ ಹಿಂದೆ ಟ್ಟಿಟರ್‌ನಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಧನ್ಯವಾದಗಳನ್ನು ತಿಳಿಸುವ ಮೂಲಕ ಮರು ಪ್ರತ್ಯಕ್ಷರಾದರು ಹಾಗೂ ಚಿಕಿತ್ಸೆ ಫಿಜಿಯೋ ಥೆರಪಿ ಪಡೆಯುತ್ತಿರುವ ಫೋಟೋವನ್ನು ಇನ್‌ಸ್ಟಾಗ್ರಾಂ ಸ್ಟೋರಿಯಲ್ ಅಪ್ಲೋಡ್ ಮಾಡಿದ್ದರು. 

ಕಾರು ಅಪಘಾತದ ನಂತರ ಇದೀಗ ಪ್ರತ್ಯಕ್ಷರಾದ ನಟಿ ಶರ್ಮಿಳಾ ಮಾಂಡ್ರೆ! 

ಎಲ್ಲಿದ್ದಾರೆ ಶರ್ಮಿಳಾ?

ನಟಿ ಶರ್ಮಿಳಾ ಮಾಂಡ್ರೆ ಕೊಡಗಿನಲ್ಲಿ ಕಾಣಿಸಿಕೊಂಡಿದ್ದಾರೆ. ತಾವಾಗಿಯೇ ಇನ್‌ಸ್ಟಾಗ್ರಾಂನಲ್ಲಿ ಪ್ರಕೃತಿ ನಡುವಿನಲ್ಲಿ ಸಮಯ ಕಳೆಯುತ್ತಿರುವ ಬಗ್ಗೆ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಲೈಫ್ ನಲ್ಲಿ 'ಚಿಕ್ಕ ವಿಚಾರಗಳ ಬಗ್ಗೆ ತುಂಬಾನೇ ತಲೆ ಕೆಡಿಸಿಕೊಳ್ಳುತ್ತೇವೆ.  ಚಿಂತಿಸುತ್ತಾ, ಇನ್ನೊಬ್ಬರನ್ನು ದೂರುತ್ತಾ, ಗಾಸಿಪ್ ಮಾಡುತ್ತಾ ಒಬ್ಬರನ್ನೊಬ್ಬರು ಹೊಲಿಸುತ್ತಾ ಇದರಿಂದ ಏನೋ ದೊಡ್ಡ ಪರಿಣಾಮ ಆಗುತ್ತದೆ ಎಂದು ಆಲೋಚನೆ ಮಾಡುತ್ತೇವೆ. ಆದರೆ ಹಾಗಾಗುವುದಿಲ್ಲ ಅದರ ಬದಲು ನಮ್ಮ ಸುತ್ತ ಇರುವ ಸಣ್ಣ ಕ್ಷಣಗಳನ್ನು ಅನುಭವಿಸೋಣ. ಲೈಫ್‌ ತುಂಬಾನೇ ಫ್ರಜೈಲ್ ಯಾವಾಗ ಹೇಗೆ ಏನು ನಡೆಯುತ್ತದೆ ಎಂದು ಹೇಳಲಾಗುವುದಿಲ್ಲ, ಯಾವುದನ್ನು ಗ್ರ್ಯಾಂಟೆಡ್‌ ಆಗಿ ತೆಗೆದುಕೊಳ್ಳದೇ ಲೈಫ್‌ ಎಂಜಾಯ್ ಮಾಡೋಣ. ನಮಗೆ ಮುಖ್ಯವಾದ ಅಂಶಗಳ ಮೇಲೆ ಮಾತ್ರ ಗಮನ ಹರಿಸೋಣ' ಎಂದು ಬರೆದುಕೊಂಡಿದ್ದಾರೆ.

ಚಿತ್ರೀಕರಣ:

ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಕ್ರಿಯೇಟ್ ಮಾಡಿದ ಸಿನಿಮಾ ಗಾಳಿಪಟ. ಫ್ರೆಂಡ್‌ಶಿಪ್, ಲವ್ ಹಾಗೂ ಫ್ಯಾಮಿಲಿಗೆ ಹೆಚ್ಚು ಪಾಮುಖ್ಯತೆ  ನೀಡುವ ಈ ಸಿನಿಮಾ ಎಲ್ಲರ ಗಮನ ಸೆಳೆದಿತ್ತು. ಈಗ ಅದೇ ಚಿತ್ರ ಮುಂದುವರೆದ ಭಾಗವಾಗಿ ಬರುತ್ತಿದೆ ಅದುವೇ 'ಗಾಳಿಪಟ-2'.  ಯೋಗರಾಜ್‌ ಭಟ್ ನಿರ್ದೇಶನ ಈ ಚಿತ್ರದಲ್ಲಿ ನಟ ಗಣೇಶ್‌ ಹಾಗೂ ದಿಗಂತ್‌ಗೆ ಜೋಡಿಯಾಗಿ ನಟಿ ಶರ್ಮಿಳಾ ಮಾಂಡ್ರೆ ಹಾಗೂ ನಿಶ್ವಿಕಾ ಮಿಂಚಲಿದ್ದಾರೆ.

ಸ್ವಿಮ್ ಸೂಟ್‌ನಲ್ಲಿ ಹಾಟ್ ಆಗಿದ್ದಾರೆ ಶರ್ಮಿಳಾ ಮಾಂಡ್ರೆ!

ಈ ಮಧ್ಯೆ ಹೊಸದೊಂದು ಚಿತ್ರ ನಿರ್ಮಾಣಕ್ಕೆ ಶರ್ಮಿಳಾ ಮಾಂಡ್ರೆ ಅವರು ಕೈ ಹಾಕಿದ್ದಾರೆ. ಸಿನಿಮಾಕ್ಕೆ ದಸರಾ ಎಂಬ ಶೀರ್ಷಿಕೆ ಇಟ್ಟಿದ್ದು ಅರವಿಂದ್ ಶಾಸ್ತ್ರಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅಭಿನಯ ಚತುರ ಸತೀಶ್ ನೀನಾಸಂ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.