ಗುಡಿಗೇರಿ ಬಸವರಾಜ್ ಜೊತೆ ಮದುವೆಯಾಗಿದ್ದ ಕಲ್ಪನಾಗೆ ಸಾವು ಬಂದಿದ್ದು ಹೀಗೆ!

ನಾಟಕ ಕಂಪನಿ ಮಾಲೀಕರಾಗಿದ್ದ ಗುಡಿಗೇರಿ ಬಸವರಾಜು ಅವರು ನಟಿ ಕಲ್ಪನಾ ಬಳಿ ಬಂದರು. 'ನೀವು ನಮ್ಮ ನಾಟಕ ಕಂಪನಿಗೆ ಬನ್ನಿ. ಜನರು ನಿಮ್ಮನ್ನು ನೋಡಲು ಇಷ್ಟಪಡುತ್ತಾರೆ ಎಂದರು. ಅದೇ ವೇಳೆ ಕಲ್ಪನಾ ಅವರು ಬೆಳವಲದ ಮಡಿಲಲ್ಲಿ ಸಿನಿಮಾದಲ್ಲಿ ನಟಿಸುತ್ತಿದ್ದರು. ಆದರೆ, ಅವರಿಗೆ ಸೂಕ್ತವಾದ ಬೇರೆ..

Kannada senior actor Rajesh talked about actress minugutare kalpana death

ಕನ್ನಡದ ಮೇರು ನಟಿ, ಮಿನುಗುತಾರೆ ಖ್ಯಾತಿಯ ನಟ ಕಲ್ಪನಾ (Monugutare kalpana) ಅವರು ನೆನಪುಗಳ ಮೂಲಕ ಇಂದಿಗೂ ಜೀವಂತ. ಅವರು ನಮ್ಮನ್ನಗಲಿ ಬಹಳಷ್ಟು ವರ್ಷಗಳು ಕಳೆದಿದ್ದರೂ ಕನ್ನಡ ಸಿನಿಪ್ರೇಕ್ಷಕರು ಅವರನ್ನು ಮರೆತಿಲ್ಲ, ಮರೆಯುವುದಕ್ಕೆ ಸಾಧ್ಯವೂ ಇಲ್ಲ. ಅವರ ವೃತ್ತಿಜೀವನದಷ್ಟೇ ಅವರ ವೈಯಕ್ತಿಕ ಜೀವನ ಕೂಡ ಸದ್ದು-ಸುದ್ದಿ ಮಾಡುತ್ತಿತ್ತು. ಅಚ್ಚ್ಗನ್ನಡದ ಮಿನುಗುತಾರೆ ಕಲ್ಪನಾ ಅವರು ನಮ್ಮನ್ನಗಲಿ ಬಹಳ ವರ್ಷಗಳೇ ಆಗಿಹೋಗಿವೆ. 

ಆದರೆ ಆ ಅದ್ಭುತ ನಟಿಯ ನೆನಪು ಮಾತ್ರ ಕನ್ನಡ ಸಿನಿರಸಿಕರನ್ನು ಇವತ್ತಿಗೂ ಕಾಡುತ್ತಿದೆ, ಕಾರಣ, ಬದುಕಿದ್ದಾಗ ನಮ್ಮನ್ನು ತಮ್ಮ ನಟನೆಯ ಮೂಲಕ ಬಹಳಷ್ಟು ರಂಜಿಸಿದ್ದ ನಟಿ ಕಲ್ಪನಾ, ದುರಂತ ಸಾವು ಕಂಡು ನಮ್ಮಿಂದ ದೂರವಾದರು. ಅವರು ಬದುಕಿದ್ದಾಗ ಅವರು ಜೊತೆ ಸಹನಟರಾಗಿ ಕೆಲಸ ಮಾಡಿದ್ದ ನಟ ಹಿರಿಯ ನಟ ರಾಜೇಶ್ ಅವರು ಕಲ್ಪನಾ ಜೀವನದ ಕೆಲವು ಘಟನೆಗಳು ಹಾಗೂ ಸಾವು ಬಂದ ರೀತಿಯ ಬಗ್ಗೆ    ಸಂದರ್ಶನದಲ್ಲಿ ಹೇಳಿದ್ದಾರೆ.  

ನಟಿ ಕಲ್ಪನಾ ಮೇಲಿದ್ದ ಎರಡು ಆರೋಪಗಳಲ್ಲಿ ಒಂದು ಸತ್ಯ; ಆ ನಟ ಹೇಳ್ಬಿಟ್ರು!

ನಟ ರಾಜೇಶ್ (Actor Rajesh) ಅವರು 'ಕಲ್ಪನಾ ಅವರು ಒಂದು ಅದ್ಭುತವಾದ ಮನೆ ಕಟ್ಟಿಸಿದ್ದರು. ಬ್ಯಾಂಕ್ ಲೋನ್ ಮಾಡಿ ಮನೆ ಕಟ್ಟಿಸಿದ್ದರು ನಟಿ ಕಲ್ಪನಾ. ಒಂದು ಕಡೆ ಬ್ಯಾಂಕ್ ಸಾಲದ ಬಡ್ಡಿ ಏರುತ್ತಿದ್ದರೆ ಇತ್ತ ನಟಿ ಕಲ್ಪನಾ ವೃತ್ತಿಜೀವನದಲ್ಲಿ ಡೌನ್‌ಫಾಲ್ ಶುರುವಾಗಿತ್ತು. ನಟಿ ಕಲ್ಪನಾ ಅವರಿಗೆ ಸಿಗುತ್ತಿದ್ದ ಸಿನಿಮಾಗಳು ಮಂಜುಳಾ, ಆರತಿ, ಜಯಂತಿ ಹೀಗೆ ಬೇರೆಯವರ ಪಾಲಾಗಲು ಶುರುವಾಗಿತ್ತು. ಅದರೆ ಕಲ್ಪನಾ ಅವರಿಗೆ ಬ್ಯಾಂಕ್‌ನಲ್ಲಿದ್ದ ಮನೆ ಸಾಲವನ್ನು ತೀರಿಸಲೇಬೇಕಿತ್ತು. ಕಲ್ಪನಾ ತಲೆ ಮೇಲೆ ದೊಡ್ಡ ಸಾಲದ ಹೊರೆ ಇತ್ತು. 

ಅದೇ ವೇಳೆ ನಾಟಕ ಕಂಪನಿ ಮಾಲೀಕರಾಗಿದ್ದ ಗುಡಿಗೇರಿ ಬಸವರಾಜು (Gudigeri Basavaraju) ಅವರು ನಟಿ ಕಲ್ಪನಾ ಬಳಿ ಬಂದರು. 'ನೀವು ನಮ್ಮ ನಾಟಕ ಕಂಪನಿಗೆ ಬನ್ನಿ. ಜನರು ನಿಮ್ಮನ್ನು ನೋಡಲು ಇಷ್ಟಪಡುತ್ತಾರೆ ಎಂದರು. ಅದೇ ವೇಳೆ ಕಲ್ಪನಾ ಅವರು ಬೆಳವಲದ ಮಡಿಲಲ್ಲಿ ಸಿನಿಮಾದಲ್ಲಿ ನಟಿಸುತ್ತಿದ್ದರು. ಆದರೆ, ಅವರಿಗೆ ಸೂಕ್ತವಾದ ಬೇರೆ ಸಿನಿಮಾ ಸಿಕ್ಕಿರಲಿಲ್ಲ. ಹೀಗಾಗಿ ಗುಡಿಗೇರಿ ಬಸವರಾಜು ಅವರ ಆಫರ್‌ಅನ್ನು ಕಲ್ಪನಾ ಅವರು ಒಪ್ಪಿ ನಾಟಕಗಳಲ್ಲಿ ಅಭಿನಯಿಸಿದರು. 

'ರಥಸಪ್ತಮಿ' ಆಶಾರಾಣಿ ಮತ್ತೆ ಕನ್ನಡದಲ್ಲಿ ಏಕೆ ನಟಿಸಲಿಲ್ಲ? ಲೇಟ್‌ ಆಗಿ ಸೀಕ್ರೆಟ್ ರಿವೀಲಾಯ್ತು!

ಕಲ್ಪನಾ ಅವರು ನಾಟಕಕ್ಕೆ ಬಂದಿದ್ದೇ ತಡ, ಅಲ್ಲಿ ಕಲೆಕ್ಷನ್ ತುಂಬಾ ಜಾಸ್ತಿ ಆಗತೊಡಗಿತು. ದಿನಕ್ಕೆ 3-4 ಸಾವಿರ ಆಗುತ್ತಿದ್ದ ನಾಟಕದ ಗಳಿಕೆ ನಟಿ ಕಲ್ಪನಾ ಕಾರಣಕ್ಕೆ 14-15 ಸಾವಿರಕ್ಕೆ ಏರಿತ್ತು. ಆಗ ಗುಡಿಗೇರಿ ಬಸವರಾಜ್ ಅವರಿಗೆ ಒಂದು ದುರಾಸೆ ಬಂತು, ನಟಿ ಕಲ್ಪನಾ ಅವರನ್ನು ಯಾವುದೇ ಕಾರಣಕ್ಕೂ ಬಿಡಬಾರದು, ಅವರು ನಾಟಕದಲ್ಲಿ ನಟನೆ ಮಾಡುವುದನ್ನು ನಿಲ್ಲಿಸಲು ಬಿಡಬಾರದು. ಅದಕ್ಕಿದ್ದ ಒಂದೇ ದಾರಿ ಎಂದರೆ ಅವರನ್ನೇ ಮದುವೆ ಆಗಿಬಿಡುವುದು ಎಂದು ನಿರ್ಧರಿಸಿದ ಗುಡಗೇರಿ ಬಸವರಾಜ್ ಅವರು ಕಲ್ಪನಾಗೆ ತಾಳಿ ಕಟ್ಟಿ ಹೆಂಡತಿ ಮಾಡಿಕೊಂಡರು. 

ಕಲ್ಪನಾ ಹಾಗೂ ಗುಡಿಗೇರಿ ಬಸವರಾಜ್ ಅವರು ಪರಸ್ಪರ ಒಪ್ಪಿ ಮದುವೆಯನ್ನೇನೋ ಮಾಡಿಕೊಂಡರು. ಆದರೆ, ಅವರಿಬ್ಬರ ಮಧ್ಯೆ ಸಾಮರಸ್ಯ ಮೂಡಲೇ ಇಲ್ಲ. ಇಬ್ಬರೂ ಕಚ್ಚಾಡುತ್ತ, ಹಾದಿಬೀದಿ ರಂಪಾಟ ಮಾಡಿಕೊಂಡರು. ಗುಡಿಗೇರಿ ಬಸವಾರಜ್ ಹುಂಬ ಹಾಗೂ ಒರಟ. ಕಲ್ಪನಾಗೆ ಎಲ್ಲಂದರಲ್ಲಿ ಹೊಡೆಯುತ್ತಿದ್ದ, ದನಕ್ಕೆ ಬಡಿದ ಹಾಗೆ ಬಡಿಯುತ್ತಿದ್ದ. ಕಲ್ಪನಾ ಕೂಡ ಅದನ್ನು ಸಹಿಸಿಕೊಳ್ಳುತ್ತಿರಲಿಲ್ಲ, ಮಾತಿಗೆ ಮಾತು ಬೆಳೆಯುತ್ತಿತ್ತು, ನಟಿ ಚಪ್ಪಲಿ ತೆಗೆದುಕೊಂಡು ಹೊಡೆಯುತ್ತಿದ್ದರು.  

ಗುಟ್ಟಾಗಿಟ್ಟಿದ್ದ ಶ್ರೇಯಸ್ ಮಂಜು 'ದಿಲ್‌ ದಾರ್' ನಾಯಕಿ ಸೀಕ್ರೆಟ್ ಹೊರಬಿತ್ತು!

ಬಸವರಾಜು ಕಾಟ ತಾಳಲಾಗದ ನಟಿ ಕಲ್ಪನಾ ಗಂಡ ಹಾಗೂ ನಾಟಕ ಕಂಪನಿ ಬಿಟ್ಟು ಓಡಿಹೋದರು. ಆದರೆ, ಅವರೇ ಹೋಗಿ ಕಲ್ಪನಾ ಕಾಲಿಗೆ ಬಿದ್ದು, ತಪ್ಪಾಯ್ತು ಮತ್ತೆ ಹಾಗೆ ಮಾಡೋದಿಲ್ಲ ಎಂದು ಹೇಳಿ ಕರೆದುಕೊಂಡು ಬಂದರು. ಆದರೆ, ಬೆಳಗಾವಿಯಲ್ಲಿ ಯಾವುದೋ ನಾಟಕ ಮಾಡುತ್ತ, ಡೈಲಾಗ್ ತಪ್ಪು ಹೇಳಿದರು ಕಲ್ಪನಾ. ಅದಕ್ಕೇ ಗಲಾಟೆ ಆಗಿ, ಸ್ಟೇಜಿನಲ್ಲೇ ಹೊಡೆದಾಟ ಆಗಿ, ಕಲ್ಪನಾ ನಾಟಕ ಬಿಟ್ಟು ಹೊರಟೇಹೋದರು. ಆದರೆ, ಗೆಸ್ಟ್ ಹೌಸ್‌ಗೆ ಹೋದವರೇ ಸಾವಿಗೆ ಶರಣಾಗಿಬಿಟ್ಟರು' ಎಂದಿದ್ದಾರೆ ಹಿರಿಯ ನಟ ರಾಜೇಶ್. 

Latest Videos
Follow Us:
Download App:
  • android
  • ios