'ರಥಸಪ್ತಮಿ' ಆಶಾರಾಣಿ ಮತ್ತೆ ಕನ್ನಡದಲ್ಲಿ ಏಕೆ ನಟಿಸಲಿಲ್ಲ? ಲೇಟ್‌ ಆಗಿ ಸೀಕ್ರೆಟ್ ರಿವೀಲಾಯ್ತು!

'ಬೆಳವಡದ ಮಡಿಲಲ್ಲಿ' ಸೇರಿದಂತೆ ಬಹಳಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟ ರಾಜೇಶ್. ಅವರ ಹಿರಿಯ ಮಗಳು ಆಶಾರಾಣಿ. ಅವರ ಮೂಲ ಹೆಸರು ನಿವೇದಿತಾ. ಹೀಗೆ ಹೇಳಿದರೆ ಕೆಲವರಿಗೆ ಗೊತ್ತಾಗದೇ ಇರಬಹುದು. ಅವರಿಗೆ 'ನಟ ಅರ್ಜುನ್ ಸರ್ಜಾ ಹೆಂಡತಿ' ಎಂದರೆ ಗೊತ್ತಾಗಬಹುದು. ಹೌದು, ನಟಿ ಆಶಾರಾಣಿ..

Rathasapthami fame actress Asharani life secret revealed by father actor Rajesh

ನಟ ಶಿವರಾಜ್‌ಕುಮಾರ್ (Shivarajkumar) ನಟನೆಯ ಮೂರನೇ ಚಿತ್ರ 'ರಥಸಪ್ತಮಿ'. ಮೊದಲೆರಡು ಸಿನಿಮಾಗಳಾದ ಆನಂದ್‌ ಹಾಗೂ ಮನಮೆಚ್ಚಿದ ಹುಡುಗಿ ಚಿತ್ರಗಳಲ್ಲಿ ನಟ ಶಿವರಾಜ್‌ಕುಮಾರ್ ಅವರಿಗೆ ಜೋಡಿಯಾಗಿ ನಟಿ ಸುಧಾರಾಣಿ ಕಾಣಿಸಿಕೊಂಡಿದ್ದರು. ಆದರೆ, ರಥಸಪ್ತಮಿ ಚಿತ್ರದಲ್ಲಿ ಸುಧಾರಾಣಿ ಬದಲು ಆಶಾರಾಣಿ (Asha Rani) ಎನ್ನುವ ಹೊಸ ನಟಿ ಶಿವರಾಜ್‌ಕುಮಾರ್‌ಗೆ ಜೋಡಿಯಾದರು. ಆಶಾರಾಣಿ ಯಾರೋ ಅಲ್ಲ, ಸಿನಿಮಾರಂಗದ ಹಿನ್ನೆಲೆಯಿಂದಲೇ ಬಂದವರು. ಅವರು ಹಿರಿಯ ನಟ ರಾಜೇಶ್ ಮಗಳು. 1986ರಲ್ಲಿ ಈ ರಥಸಪ್ತಮಿ (Ratha Sapthami) ಸಿನಿಮಾ ತೆರೆಗೆ ಬಂದಿತ್ತು.

'ಬೆಳವಡದ ಮಡಿಲಲ್ಲಿ' ಸೇರಿದಂತೆ ಬಹಳಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟ ರಾಜೇಶ್. ಅವರ ಹಿರಿಯ ಮಗಳು ಆಶಾರಾಣಿ. ಅವರ ಮೂಲ ಹೆಸರು ನಿವೇದಿತಾ. ಹೀಗೆ ಹೇಳಿದರೆ ಕೆಲವರಿಗೆ ಗೊತ್ತಾಗದೇ ಇರಬಹುದು. ಅವರಿಗೆ 'ನಟ ಅರ್ಜುನ್ ಸರ್ಜಾ ಹೆಂಡತಿ' ಎಂದರೆ ಗೊತ್ತಾಗಬಹುದು. ಹೌದು, ನಟಿ ಆಶಾರಾಣಿ ಅವರು ರಥಸಪ್ತಮಿ ಸಿನಿಮಾದ ಬಳಿಕ ತೆಲುಗಿನ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಬಳಿಕ ಕನ್ನಡ ಮೂಲದ ನಟ ಅರ್ಜುನ್ ಸರ್ಜಾ ಅವರನ್ನು ಮದುವೆಯಾಗಿ ಅಪ್ಪಟ ಗೃಹಿಣಿಯಾಗಿದ್ದಾರೆ. 

ಕನ್ನಡದಲ್ಲಿ ರಥಸಪ್ತಮಿ (1986) ಸಿನಿಮಾದ ಬಳಿಕ ನಟಿ ಆಶಾರಾಣಿ ಅವರು 1987ರಲ್ಲಿ ತೆಲುಗಿನಲ್ಲಿ ಅಗ್ನಿ ಪರ್ವ (Agni Parva) ಹಾಗೂ 1988ರಲ್ಲಿ ಡಾಕ್ಟರ್ ಗಾರಿ ಅಬ್ಬಾಯಿ (Doctor Gari Abbai) ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಬಳಿಕ ಅವರು ಕನ್ನಡದ ಮೂಲದ, ಆಗ ಹೆಚ್ಚಾಗಿ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದ ನಟ ಅರ್ಜುನ್ ಸರ್ಜಾ ಅವರನ್ನು ವಿವಾಹವಾಗಿ ಗೃಹಸ್ತ ಜೀವನಕ್ಕೆ ಕಾಲಿಟ್ಟರು. ಹಾಗಿದ್ದರೆ ನಟಿ ಆಶಾರಾಣಿ ಅವರು ಕನ್ನಡದಲ್ಲಿ ಮತ್ತೆ ಯಾಕೆ ನಟಿಸಲಿಲ್ಲ? ಅದರಲ್ಲೂ ಮುಖ್ಯವಾಗಿ ರಥಸಪ್ತಮಿ ಯಂಥ ಸೂಪರ್‌ ಹಿಟ್ ಸಿನಿಮಾದಲ್ಲಿ ನಟಿಸಿದ ಬಳಿಕ!

ಹೌದು, ರಥ ಸಪ್ತಮಿ ಸಿನಿಮಾ 25 ವಾರ ಓಡಿ ಆ ವರ್ಷ (1986) ಹೊಸ ದಾಖಲೆ ನಿರ್ಮಿಸಿತ್ತು. ಆದರೆ ಆ ಚಿತ್ರದ ನಾಯಕಿ ಆಶಾರಾಣಿ ಮಾತ್ರ ಮತ್ತೊಂದು ಚಿತ್ರದಲ್ಲಿ ನಟಿಸಲೇ ಇಲ್ಲ. ಈ ಬಗ್ಗೆ ಆಶಾರಾಣಿ ಅಪ್ಪ, ಕನ್ನಡದ ಹಿರಿಯ ನಟ ರಾಜೇಶ್ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. 'ನನ್ನ ಮಗಳು ನಿವೇದಿತಾ (ಆಶಾರಾಣಿ ಮೂಲ ಹೆಸರು ನಿವೇದಿತಾ) ನಟಿಸಿದ್ದ ಮೊದಲ ಚಿತ್ರ ರಥಸಪ್ತಮಿ ಬರೋಬ್ಬರಿ 25 ವಾರ ಓಡಿದೆ. ಆದರೆ. ಅವಳಿಗೆ ಆ ಬಳಿಕ ಕನ್ನಡದಲ್ಲಿ ಒಂದೇ ಒಂದು ಸಿನಿಮಾ ಸಿಗಲಿಲ್ಲ. 

ಯಾಕೆ ಸಿಗಲಿಲ್ಲ ಎನ್ನುವುದು ದೇವರಿಗೇ ಗೊತ್ತು. ಆದರೆ, ಗೀತಪ್ರಿಯ ಅವರು 3 ತಮಿಳು ಸಿನಿಮಾ ಆಫರ್ಸ್‌ಗಳನ್ನು ನನ್ನ ಮಗಳಿಗೆ ತಂದುಕೊಟ್ಟರು. ಆದರೆ, ಅದೇ ವೇಳೆ ಶಕ್ತಿಪ್ರಸಾದ್ ಸರ್ಜಾ ಅವರು ತಮ್ಮ ಮಗ ಅರ್ಜುನ್ ಸರ್ಜಾ ಅವರಿಗೆ ಮದುವೆ ಮಾಡಲು ನನ್ನ ಮಗಳು ನಿವೇದಿತಾಳನ್ನು ಕೇಳಿದರು. ನಾನು ಮಗಳನ್ನು ಕೇಳಲು ಅವಳು ಸಂತೋಷದಿಂದಲೇ ಒಪ್ಪಿಗೆ ನೀಡಿಬಿಟ್ಟಳು. ಹೀಗಾಗಿ ಆಕೆಯ ಮದುವೆ ನೆರವೇರಿತು. ಆಕೆ ಚಿತ್ರರಂಗದಿಂದ ದೂರವಾದಳು. ಆದರೆ, ಅಷ್ಟರಲ್ಲಿ ತೆಲುಗಿನಲ್ಲಿ ಎರಡು ಸಿನಿಮಾಗಳಲ್ಲಿ ನಟಿಸಿದ್ದಳು' ಎಂದಿದ್ದಾರೆ ನಟಿ ಆಶಾರಾಣಿ ತಂದೆ, ನಟ ರಾಜೇಶ್. 

Latest Videos
Follow Us:
Download App:
  • android
  • ios