'ಏನಮ್ಮಿ ಏನಮ್ಮಿ ಯಾರಮ್ಮಿ ನೀನಮ್ಮಿ..' ಅಂದರೆ ಸಾಕು ಜನರು ಇದು 2018ರ ಬ್ಲಾಕ್‌ ಬಸ್ಟರ್ 'ಅಯೋಗ್ಯ' ಸಿನಿಮಾ ಅಲ್ವಾ? ಅನ್ನುತ್ತಾರೆ ಅಷ್ಟರ ಮಟ್ಟಿಗೆ ಕ್ರೇಜ್‌ ಕ್ರಿಯೇಟ್ ಮಾಡಿದ ರಚಿತಾ ರಾಮ್‌ ಮತ್ತು ನೀನಾಸಂ ಸತೀಶ್‌ ಈಗ ಮತ್ತೊಮ್ಮೆ ಒಂದಾಗಿ ಬರುತ್ತಿದ್ದಾರೆ. ಅದುವೇ 'ಮ್ಯಾಟ್ನಿ' ಚಿತ್ರದ ಮೂಲಕ.

ಹಳೆಯ ಪೆಟ್ರೋಮ್ಯಾಕ್ಸ್‌ಗೆ ಮರುಜೀವ;ಸತೀಶ್‌ ನೀನಾಸಂ, ವಿಜಯ್‌‌ ಚಿತ್ರದ ಹೊಸ ಕತೆ!

ಮನೋಹರ್‌ ಕಾಂಪಲ್ಲಿಯವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಫಸ್ಟ್ ಲುಕ್‌ ಬಿಡುಗಡೆ ಮಾಡಲಾಗಿದೆ.  ಜೊತೆಗೆ ರಚ್ಚು- ಸತೀಶ್ ಫೋಟೋನೂ ವೈರಲ್ ಆಗುತ್ತಿದೆ. 'ಫಸ್ಟ್ ಲುಕ್‌ ಮ್ಯಾಟ್ನಿ. ನಿಮ್ಮಲ್ಲರ ಹಾರೈಕೆ ಎಂದಿನಂತಿರಲಿ' ಎಂದು ಸತೀಶ್‌ ಪೋಸ್ಟರ್ ಶೇರ್ ಮಾಡಿದ್ದಾರೆ. 'ಅಯೋಗ್ಯ ನಂತರ ನಮ್ಮಿಬ್ಬರ ಜೋಡಿ ನೋಡಿ, ತೆರೆಯ ಮೇಲೆ ಮತ್ತೊಂದು ಚಿತ್ರ' ಎಂದು ಡಿಂಪಲ್ ಹುಡುಗಿ ಜೊತೆ ಸೆಲ್ಫಿ ಶೇರ್ ಮಾಡಿಕೊಂಡಿದ್ದಾರೆ.

 

ಕೆಲವು ದಿನಗಳ ಹಿಂದೆ ಸತೀಶ್‌ ನಿರ್ದೇಶಕ ಮನೋಹರ್‌ ಕಾಂಪಲ್ಲಿ ಮತ್ತು ನಿರ್ಮಾಪಕಿ ಪಾರ್ವತಿ ಅವರ ಜೊತೆ ಫೋಟೋ ಶೇರ್ ಮಾಡಿಕೊಂಡು ಅದ್ಭುತವಾಗ ಚಿತ್ರಕಥೆ ಕೇಳಿರುವುದಾಗಿ ಹೇಳಿಕೊಂಡಿದ್ದರು. 

ಶೀಘ್ರದಲ್ಲಿ ನೀನಾಸಂ ಸತೀಶ್‌ ಹೊಸ ಸಿನಿಮಾ ಶೀರ್ಷಿಕೆ ಬಿಡುಗಡೆ!

'ಇಂದು ನಾನು ನನ್ನ ಮಾರ್ನಿಂಗ್ ಶೋ ಮ್ಯಾಟ್ನಿ ಬಗ್ಗೆ ಹೇಳುತ್ತಿರುವೆ. ಮುಂದಿನ ಚಿತ್ರ ನೀನಾಸಂ ಸತೀಶ್‌ ಜೊತೆ. ಸಿಕ್ಕಾಪಟ್ಟೆ ಥ್ರಿಲ್ ಅಗಿದ್ದೀನಿ,' ಎಂದು ರಚಿತಾ ರಾಮ್ ತಮ್ಮ ಮುಂದಿನ ಚಿತ್ರದ ಬಗ್ಗೆ ಬರೆದುಕೊಂಡಿದ್ದಾರೆ.

 

ಅಯೋಗ್ಯ ಚಿತ್ರಕ್ಕೆ ಸತೀಶ್‌ ಫಿಲ್ಮಂ ಫೇರ್‌ ಕ್ರಿಟಿಕ್ಸ್‌ ಅತ್ಯುತ್ತಮ ನಟ ಪ್ರಶಸ್ತಿ ಪಡೆದರೆ, ರಚಿತಾ ರಾಮ್ ಸೈಮಾ ಆತ್ಯುತ್ತಮ ನಟಿ, ಜೀ ಕನ್ನಡ ಹೆಮ್ಮೆಯ ಕನ್ನಡತಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಮತ್ತೆ ಒಂದಾಗುತ್ತಿರುವ ಈ ಜೋಡಿ ಇನ್ನಷ್ಟು ಪ್ರಶಸ್ತಿಗಳನ್ನು ಪಡೆದುಕೊಳ್ಳಲಿ.