ನಟ ನೀನಾಸಂ ಸತೀಶ್‌ ಹೊಸ ಸಿನಿಮಾವೊಂದಕ್ಕೆ ಸಹಿ ಮಾಡಿದ್ದಾರೆ. ಕಥೆ ಕೇಳಿದ ತಕ್ಷಣ ಓಕೆ ಎಂದು ಶೀಘ್ರದಲ್ಲಿ ಚಿತ್ರೀಕರಣ ಪ್ರಾರಂಭ ಮಾಡಲು ಸಿದ್ದತೆ ನಡೆಸಿದ್ದಾರೆ. 

ಸ್ಯಾಂಡಲ್‌ವುಡ್‌ 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರದ ನಟ ನೀನಾಸಂ ಸತೀಶ್ ಹೊಸ ಚಿತ್ರವೊಂದಕ್ಕೆ ಸಹಿ ಮಾಡಿದ್ದಾರೆ. ನಿರ್ಮಾಪಕರು ಮತ್ತು ನಿರ್ದೇಶಕರ ಜೊತೆ ಸೆರೆ ಹಿಡಿದ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ನೀನಾಸಂ ಸತೀಶ್‌ ಸ್ಯಾಂಡಲ್‌ವುಡ್‌ಗೆ ಬಂದು 12 ವರ್ಷ!

' ನನಗಾಗಿ ಕಥೆ ಬರೆಯುವ ನಿರ್ದೇಶಕರು, ವರ್ಷದಿಂದ ವರ್ಷಕ್ಕೆ ,ಹೆಚ್ಚಾಗಿದ್ದಾರೆ.ಈ ವರ್ಷ 'ಮನೋಹರ್ ಕಾಂಪಲ್ಲಿ' ಅವರ ಕಥೆ ಕೇಳಿದ ತಕ್ಷಣ ಓಕೆ ಎಂದಿದ್ದೇನೆ.ಅವರ 15 ವರ್ಷಗಳ ಅನುಭವಕ್ಕೆ ಜೊತೆಯಾಗಿ ಬಂಡವಾಳ ಹೂಡುತ್ತಿರುವ 'ಪಾರ್ವತಿ' ,ಜೊತೆಗೆ ನಾನು ಸಹ ನಿಂತಿದ್ದೇನೆ.ಸದ್ಯದಲ್ಲೇ ಶೀರ್ಷಿಕೆ ಬಿಡುಗಡೆ ಮಾಡಲಿದ್ದು ನಿಮ್ಮೆಲ್ಲರ ಪ್ರೀತಿ ಹಾರೈಕೆ ಎಂದಿನಂತೆ ಇರಲಿ ಎಂದು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಇರುವ ನೀನಾಸಂ ಸತೀಶ್‌ ಲಾಕ್‌ಡೌನ್‌ ಸಡಿಲಿಕೆಯಾಗುತ್ತಿದ್ದಂತೆ 'ಬ್ಯಾಕ್‌ ಟು ಜಿಮ್' ಎಂದು ವರ್ಕೌಟ್ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಅದ್ಭುತ ಚಿತ್ರಕಥೆಗಳನ್ನು ಕೇಳುತ್ತಿರುವ ಸತೀಶ್‌ ವೀಕ್ಷಕರನ್ನು ಮನೋರಂಜಿಸಲು ಸಿದ್ಧವಾಗುತ್ತಿದ್ದಾರೆ.

'ಬ್ರಹ್ಮಚಾರಿ' ಆಯ್ತು ಈಗಾ 'ಗೋದ್ರಾ' ಇದು 6 ಪ್ಯಾಕ್ಸ್‌ 'ಅಯೋಗ್ಯ'ನ ಜರ್ನಿ!

View post on Instagram

'ಡ್ರಾಮಾ' ಹಾಗೂ 'ಲೂಸಿಯಾ' ಚಿತ್ರದ ಮೂಲಕ ವೃತ್ತಿ ಜೀವನದಲ್ಲಿ ಟರ್ನಿಂಗ್ ಪಾಯಿಂಟ್ ಪಡೆದ ಸತೀಶ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ 12 ವರ್ಷಗಳನ್ನು ಪೂರೈಸಿದ್ದಾರೆ. ವೀಕ್ಷಕರನ್ನು ಹೀಗೆ ಮನೋರಂಜಿಸುತ್ತಾ ಅದ್ಭುತ ಪಾತ್ರಗಳಲ್ಲಿ ಅಭಿನಯಿಸುತ್ತಾ ಎಲ್ಲರ ಪ್ರೀತಿಗೆ ಪಾತ್ರರಾಗಲಿ ಎಂದು ನಾವು ಕೂಡ ಹಾರೈಸೋಣ.