ಮೈಸೂರಿನಲ್ಲಿದ್ದು ಜೀವನದ ಮರೆಯಲಾಗದ ಕ್ಷಣದ ಬಗ್ಗೆ ನೆನಪು ಹಂಚಿಕೊಂಡ ನೀನಾಸಂ ಸತೀಶ್...

ಕನ್ನಡ ಚಿತ್ರರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಸಹಿ ಮಾಡುವ ಮೂಲಕ ಬ್ಯುಸಿಯಾಗಿರುವ ನಟ ಸತೀಶ್ ನೀನಾಸಂ, ತಮ್ಮ ಜೀವನದಲ್ಲಿ ಅಕ್ಟೋಬರ್ 21 ಮೆರಯಲಾಗದ ದಿನ ಎಂದು ಹೇಳಿದ್ದಾರೆ. 

ದಸರಾ ಸಂಭ್ರಮದ ನಡುವೆ ಪೆಟ್ರೋಮ್ಯಾಕ್ಸ್ ಚಿತ್ರೀಕರಣ ಆರಂಭ: ಇಲ್ಲಿವೆ ಫೋಟೋಸ್ 

ಸತೀಶ್ ಪೋಸ್ಟ್:
'ಇಂದು ನನ್ನ ವೃತ್ತಿ ಜೀವನದಲ್ಲಿ ಮರೆಯಲಾಗದ ದಿನ. ನನ್ನ ಮೂರು ಚಿತ್ರಗಳ, ಚಿತ್ರೀಕರಣ ಒಂದೇ ದಿನದಲ್ಲಿ ನಡೆಯುತ್ತಿವೆ. 'ಮ್ಯಾಟ್ನಿ' ಮತ್ತು 'ದಸರಾ' ನಾನಿಲ್ಲದಿರುವ ದೃಶ್ಯಗಳನ್ನು ಬೆಂಗಳೂರಿನಲ್ಲಿ ಚಿತ್ರೀಕರಿಸುತ್ತಿದ್ದರೆ, ಮೈಸೂರಿನಲ್ಲಿ 'ಪೆಟ್ರೊಮ್ಯಾಕ್ಸ್' ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈ ಸೌಭಾಗ್ಯ ದೊರಕಲು ಇಷ್ಟು ವರ್ಷದ ನಿಮ್ಮ ಪ್ರೀತಿಯೇ ಕಾರಣ. ದಸರಾ ಹಬ್ಬದ ಶುಭಾಶಯಗಳು. ಲವ್ ಯೂ ಆಲ್' ಎಂದು ಬರೆದಿದ್ದಾರೆ.

View post on Instagram

'ಅಯೋಗ್ಯ' ಚಿತ್ರದ ಮೂಲಕ ಸೂಪರ್ ಹಿಟ್ ಜೋಡಿಯಾದ ರಚಿತಾ ರಾಮ್ ಹಾಗೂ ಸತೀಶ್ ಈಗ ಮತ್ತೊಮ್ಮೆ ತೆರೆ ಮೇಲೆ ಮಿಂಚಲು 'ಮ್ಯಾಟ್ನಿ' ಶೀರ್ಷಿಕೆ ಇರುವ ಚಿತ್ರದ ಮೂಲಕ ಬರ್ತಿದ್ದಾರೆ. ಇನ್ನು ದಸರಾ ಚಿತ್ರತಂಡ ಸತೀಶ್ ಇಲ್ಲದ ಸನ್ನಿವೇಶಗಳನ್ನು ಚಿತ್ರೀಕರಣ ಮಾಡುತ್ತಿದೆ. ರಂಗು ರಂಗಾಗಿ ದೀಪಗಳಿಂದ ಅಲಂಕಾರಗೊಂಡಿರುವ ಮೈಸೂರಿನಲ್ಲಿ ನಟಿ ಹರಿಪ್ರಿಯಾ ಜೊತೆ ಸಹಿ ಮಾಡಿರುವ 'ಪೆಟ್ರೋಮ್ಯಾಕ್ಸ್' ಸಿನಿಮಾ ಚಿತ್ರೀಕರಣ ಮಾಡುತ್ತಿದ್ದಾರೆ.

ನೀನಾಸಂ ಸತೀಶ್‌ ಜೊತೆ 'ಮ್ಯಾಟ್ನಿ'ಶೋ ನೋಡಲು ಹೊರಟ ರಚಿತಾ ರಾಮ್? 

ಲಾಕ್‌ಡೌನ್‌ ನಂತರ ತಮ್ಮೆಲ್ಲಾ ಸಿನಿಮಾಗಳಿಗೂ ಸರಿಯಾದ ಶೂಟಿಂಗ್ ಶೆಡ್ಯೂಲ್ ಫಿಕ್ಸ್‌ ಮಾಡಿಕೊಂಡು, ಆದಷ್ಟು ಬೇಗ ತೆರೆ ಮೇಲೆ ಪ್ರೇಕ್ಷಕರನ್ನು ಮನೋರಂಜಿಸಲು ಸತೀಶ್ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಶುಭವಾಗಲಿ.