Asianet Suvarna News

'ರಂಗಸಮುದ್ರ' ಚಿತ್ರದಲ್ಲಿ ಸಂಪತ್ ರಾಜ್‌ ವಿಲನ್!

'ರಂಗಸಮುದ್ರ' ಚಿತ್ರಕ್ಕೆ ಎಂಟ್ರಿ ಕೊಟ್ಟ ಖಡಕ್ ವಿಲನ್ ಸಂಪತ್ ರಾಜ್. 20 ವರ್ಷಗಳ ಹಿಂದೆ ನಡೆದ ನೈಜ ಘಟನೆಯಾಧಾರಿತ ಚಿತ್ರವಿದು.
 

Kannada Sampath raj to play the villain role in Rangasamudra vcs
Author
Bangalore, First Published Jul 17, 2021, 2:06 PM IST
  • Facebook
  • Twitter
  • Whatsapp

ರಾಜ್‌ಕುಮಾರ್ ಅಸ್ಕಿ ನಿರ್ದೇಶನದ ‘ರಂಗ ಸಮುದ್ರ’ ಚಿತ್ರದಲ್ಲಿ ನಟ ಸಂಪತ್ ರಾಜ್ ಖಡಕ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನೇಕ ಸಿನಿಮಾಗಳಲ್ಲಿ ಸಂಪತ್ ರಾಜ್‌ ವಿಲನ್ ಆಗಿ ಕಾಣಿಸಿಕೊಂಡಿದ್ದು, ರಂಗಸಮುದ್ರ ವಿಭಿನ್ನವಾದ ಕತೆ ಆಗಿರುವ ಕಾರಣ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ರಂಗಾಯಣ ರಘು ಕೂಡ ಮುಖ್ಯ ಪಾತ್ರದಲ್ಲಿದ್ದಾರೆ. 

ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಭಾಗದಲ್ಲಿರುವ ‘ರಂಗ ಸಮುದ್ರ’ ಎಂಬ ಊರಿನಲ್ಲಿ 20 ವರ್ಷಗಳ ಹಿಂದೆ ನಡೆದ ಘಟನೆಯೇ ಈ ಚಿತ್ರದ ಮುಖ್ಯ ಕಥೆ. ಈಗಾಗಲೇ ಮೈಸೂರು, ಬಿಜಾಪುರ ಮೊದಲಾದೆಡೆ ಚಿತ್ರೀಕರಣ ನಡೆಸಲಾಗಿದ್ದು, ಬಹುತೇಕ ಪೂರ್ಣಗೊಂಡಿದೆ. 

ಮತ್ತೆ ಗರಿಗೆದರಿದ ಚಿತ್ರರಂಗ, ಸ್ಟಾರ್ ಸಿನಿಮಾ ಶೂಟಿಂಗ್ ಶುರು!

ಹೊಯ್ಸಳ ಕೊಣನೂರು ಚಿತ್ರದ ನಿರ್ಮಾಪಕರು ಹಾಗೂ ಕಾರ್ತಿಕ್, ದಿವ್ಯಾಗೌಡ, ಗುರುರಾಜ ಹೊಸಕೋಟೆ, ಮೋಹನ್ ಜುನೇಜ, ಸ್ಕಂದ ತೇಜಸ್ ಮತ್ತಿತರರು ಚಿತ್ರದಲ್ಲಿ ನಟಿಸಿದ್ದಾರೆ. ರಾಜ್‌ಕುಮಾರ್ ಅಸ್ಕಿ ನಿರ್ದೇಶನದ ಜೊತೆಗೆ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ದೇಸಿ ಮೋಹನ್ ಸಂಗೀತ ನಿರ್ದೇಶನ, ಆರ್‌. ಗಿರಿ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ ಈ ಚಿತ್ರಕ್ಕಿದೆ. ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ. ಆದರೆ ಎರಡು ದಿನಗಳ ಚಿತ್ರೀಕರಣ ನಡೆದರೆ, ಸಂಪೂರ್ಣವಗಿ ಮುಗಿಯುತ್ತದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭವಾಗುತ್ತಿವೆ.

Follow Us:
Download App:
  • android
  • ios