ಟೈಟಲ್‌ ಜತೆಗೆ ಚಿತ್ರದ ಫಸ್ಟ್‌ ಲುಕ್‌ ಕೂಡ ಬಿಡುಗಡೆ ಆಯ್ತು. ಪವನ್‌ ಮೊದಲ ನಿರ್ದೇಶನದ ಸಿನಿಮಾ ಇದು. ಆಯುಧ ಪೂಜೆಯ ಅಂಗವಾಗಿ ನಿರ್ದೇಶಕರಾದ ಎಸ್‌ ನಾರಾಯಣ್‌, ಶಶಾಂಕ್‌, ರವಿ ಶ್ರೀವತ್ಸ, ಸಿಂಪಲ ಸುನಿ, ಪವನ್‌ ಒಡೆಯರ್‌, ಎ ಪಿ ಅರ್ಜುನ್‌, ಚಂದ್ರಶೇಖರ್‌ ಬಂಡಿಯಪ್ಪ, ಕದರ್‌ ಕುಮಾರ್‌ ಹಾಗೂ ಅಭಿರಾಮ ಸೇರಿದಂತೆ ಒಂಭತ್ತು ಮಂದಿಯಿಂದ ಟೈಟಲ್‌ ಹಾಗೂ ಪೋಸ್ಟರ್‌ ಬಿಡುಗಡೆ ಮಾಡಿಸಿದ್ದಾರೆ.

ಎಸ್‌ ನಾರಾಯಣ್‌ ಪುತ್ರ ಪಂಕಜ್‌ ಆಯ್ತು, ಈಗ ಇನ್ನೊಬ್ಬ ಮಗ ನಟನಾಗಿ ಲಾಂಚ್! 

‘ಚಿರಾ ಮುತ್ತು ಚಿಸೌ ರತ್ನ’ ಎನ್ನುವ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಪವನ್‌, ತಮ್ಮ ನಟನೆಯ ಮೊದಲ ಸಿನಿಮಾ ತೆರೆ ಕಾಣುವ ಮೊದಲೇ ನಿರ್ದೇಶಕನ ಕ್ಯಾಪು ತೊಟ್ಟಿದ್ದಾರೆ. ನಟ ಯಶಸ್‌ ಅಭಿ ಚಿತ್ರದ ನಾಯಕ.

 

ನಂದಿನಿ ಗೌಡ ಚಿತ್ರದ ನಾಯಕಿ. ಯಶಸ್‌ ಅಭಿ ಹಾಗೂ ಕೃಷ್ಣ ಗುಡೆಮಾರನಹಳ್ಳಿ ಚಿತ್ರಕಥೆ, ಕತೆ ಬರೆದಿದ್ದಾರೆ. ಎಸ್‌ ನಾರಾಯಣ್‌, ಶಂಕರ್‌ ಅಶ್ವಥ್‌, ಓಂ ಪ್ರಕಾಶ್‌ ರಾವ್‌, ಹುಚ್ಚ ವೆಂಕಟ್‌, ಸಂದೀಪ್‌, ಅನುಶ್ರೀ, ಪವಿತ್ರ, ಕುರಿಬಾಂಡ್‌ ಸುನೀಲ…, ಅರುಣ ಬಾಲರಾಜ್‌ ತಾರಾಗಣವಿದೆ. ಪಿಕೆಎಚ್‌ ದಾಸ್‌ ಕ್ಯಾಮೆರಾ, ಧರ್ಮ ಸಂಗೀತ ಚಿತ್ರಕ್ಕಿದೆ.