ಕನ್ನಡ ಚಿತ್ರರಂಗದ ಮೋಸ್ಟ್‌ ಪಾಪ್ಯುಲರ್‌ ಮಾಸ್ಟರ್ ಡೈರೆಕ್ಟರ್ ಎಸ್‌ ನಾರಾಯಣ್‌ ಕಲಾ ಸಾಮ್ರಾಟ್‌ ಅಂತಾನೇ ಖ್ಯಾತಿ ಪಡೆದುಕೊಂಡಿದ್ದಾರೆ. ತಂದೆಯ ಹಾದಿಯಲ್ಲಿ ಸಾಗಬೇಕು ಎಂದು ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಹಿರಿಯ ಪುತ್ರ ಪಂಕಜ್ 'ಚೈತ್ರದ ಚಂದ್ರಮ' ಚಿತ್ರದ ಮೂಲಕ ಹೆಸರು ಮಾಡಿದರು.  ಅಣ್ಣನ ಹಾದಿಯಲ್ಲಿ ನಾನು ಸಾಗುವೆ ಎಂದು ಪವನ್‌ ಕೂಡಾ ಸಿನಿಮಾಗೆ ಕಾಲಿಟ್ಟಿದ್ದಾರೆ.

ನಟನೆ,ನಿರ್ದೇಶನದಲ್ಲಿ ಆಸಕ್ತಿ ಇದ್ಯಾ? ಎಸ್ ನಾರಾಯಣ್ ಅಕಾಡೆಮಿ ನಿಮಗಾಗಿ ತೆರೆದಿದೆ!

ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ  'ಮುತ್ತು ರತ್ನ'ಶೀರ್ಷಿಕೆ  ಮೂಲಕ ಡಿಸೆಂಬರ್‌ 2ರಂದು ಲಾಂಚ್ ಆದರು. ಈ ಕಾರ್ಯಕ್ರಮದಲ್ಲಿ ಮಂಡ್ಯ ಸಂಸದೆ ಸುಮಲತಾ ಮತ್ತು ಶ್ರೀಮುರಳಿ ಭಾಗಿಯಾಗಿ ಪವನ್‌ಗೆ ಶುಭ ಹಾರೈಸಿ  ಮೊದಲ ದೃಶ್ಯ ಕ್ಲಾಪ್ ಮಾಡಿದರು.

ಬಿಗ್‌ ಬಾಸ್‌ ಮನೆಯಿಂದ ಪಂಕಜ್‌ ಮಿಸ್; ಆಕ್ರೋಶದಲ್ಲಿ ಅಭಿಮಾನಿಗಳು!

ಶ್ರೀಕಾಂತ್ ಹುಣಸೂರು ಆ್ಯಕ್ಷನ್‌ ಕಟ್‌ ಹೇಳುತ್ತಿರುವ 'ಮುತ್ತುರತ್ನ' ಚಿತ್ರಕ್ಕೆ ಅಂಜನಾ ಗೌಡ ನಾಯಕಿಯಾಗಿ ಮಿಂಚಲಿದ್ದಾರೆ.