ಕಿರೀಟಿ ಸಿನಿಮಾ ಮುಹೂರ್ತದಲ್ಲಿ ಭಾಗಿಯಾಗಿದ್ದ ನಟ ರವಿಂದ್ರನ್ ತಾಯಿ ಕಳೆದುಕೊಂಡ 5ನೇ ದಿನವಾದರೂ ಕಾರ್ಯಕ್ರಮಕ್ಕೆ ಆಗಮಿಸಲು ಕಾರಣವೇನು ಎಂದು ತಿಳಿಸಿದ್ದಾರೆ.
ಕಿರೀಟಿ ಜನಾರ್ಧನ್ ರೆಡ್ಡಿ ಅದ್ಧೂರಿಯಾಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಸ್ಟಾರ್ ನಿರ್ದೇಶಕ ರಾಜಮೌಳಿ ಮತ್ತು ರವಿಚಂದ್ರನ್ ನೇತೃತ್ವದಲ್ಲಿ ಮುಹೂರ್ತ ಕಾರ್ಯಕ್ರಮ ನಡೆಯಿತು. ಈ ಅದ್ಧೂರಿ ಕಾರ್ಯಕ್ರಮದಲ್ಲಿ ರವಿಚಂದ್ರನ್ ಇಡೀ ತಂಡದ ಬಗ್ಗೆ ಮಾತನಾಡಿದ್ದಾರೆ ಹಾಗೂ ಕಿರೀಟಿ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರವಿಚಂದ್ರನ್ ಮಾತು:
'ಕಿರೀಟಿ ಅಂದ್ರೆ ಅರ್ಜುನ. ಜೀವನದಲ್ಲಿ ಎಂಥಾ co-incidence ಆಗುತ್ತೆ ನೋಡಿ ಕಿರೀಟಿಗೆ ಸಾರಥಿಯಾಗಿ ನಿಂತಿರುವುದು ರಾಧಾ ಕೃಷ್ಣ. ಹಿಂದಿನಿಂದ ಜನಾರ್ಧನ್ ಅವರ ಆಶೀರ್ವಾದ. ಸಾಯಿ ಅವರಿಗೆ ಕನ್ನಡದಲ್ಲಿ ಇದು ಮೊದಲನೇ ಸಿನಿಮಾ. ಚಿತ್ರದಲ್ಲಿ ಶ್ರೀಲೀಲಾ ಇದ್ದಾರೆ ಮತ್ತು ಜೆನಿಲಿಯಾ ಇದ್ದಾರೆ ನಾನು ಇದ್ದೀನಿ. ಇದಕ್ಕಿಂತ ಒಳ್ಳೆ ಪ್ಯಾಕೇಜ್ ಬೇಕಾ ನಮ್ಗೆ? ಸಖತ್ ಆಗಿದೆ ಪ್ಯಾಕೇಜ್. ಇನ್ನು ಒಳಗಡೆ ಬೇಕಿರುವುದು ಒಳ್ಳೆಯ ಕಂಟೆಂಟ್ ಮತ್ತು ಎಮೋಷನ್ ಬೇಕು ಅಷ್ಟೆ' ಎಂದು ರವಿಚಂದ್ರನ್ ಮಾತನಾಡಿದ್ದಾರೆ.
![]()
'ಕಿರೀಟಿ ಮೊನ್ನೆ ಏರ್‌ಪೋರ್ಟ್‌ನಲ್ಲಿ ಸಿಕ್ಕಿದ್ದರು. ಅದೇ ಮೊದಲು ನೋಡಿರುವುದು. ಒಂದು ಗಂಟೆ ಪ್ರಯಾಣ ಮಾಡಿದ್ದೀವಿ. ಆ ಒಂದು ಗಂಟೆಯಲ್ಲಿ ಸಾವಿರಾರು ಪ್ರಶ್ನೆ ಕೇಳಿದ್ದಾರೆ. ನಾನು ಸಿನಿಮಾ ಮಾಡೋಕೆ ಹೇಗಿರಬೇಕು ಏನು ತಯಾರಿ ಮಾಡಿಕೊಳ್ಳಬೇಕು ಅಂದ್ರು. ಅದಕ್ಕೆ ನಾನು ಹೇಳಿದೆ ಏನೂ ಬೇಡ ಮುಚ್ಕೊಂಡು ಬಂದು ಸಿನಿಮಾ ಮಾಡು ಅಂದೆ. ಹೀಗೆ ಆಗ್ತೀವಿ ಅಂತ ಏನೋ ಮಾಡೋಕೆ ಹೋಗಬಾರದು ಏನೋ ಮಾಡ್ಬೇಕು ಆಮೇಲೆ ಹಾಗೆ ಆಗ್ತೀವಿ ನಾವು' ಎಂದು ರವಿಚಂದ್ರನ್ ಹೇಳಿದ್ದಾರೆ.
Kireeti Reddy: ಅದ್ಧೂರಿಯಾಗಿ ನೆರವೇರಿದ ಜನಾರ್ಧನ ರೆಡ್ಡಿ ಪತ್ರನ ಸಿನಿಮಾ ಮುಹೂರ್ತ!
'ನಿರ್ದೇಶಕರ ಪರಿಚಯವಾಗಿದ್ದು, ನನಗೆ ಪುನೀತ್ ರಾಜ್‌ಕುಮಾರ್ ಅವರು ಮನೆಗೆ ಬಂದಿದ್ದಾಗ ರಾಧ ಕೃಷ್ಣ ಅಂತ ಒಬ್ಬ ಹೊಸ ನಿರ್ದೇಶಕರು ಇದ್ದಾರೆ ಅವರು ನಮ್ಮ ಮಾಯ ಬಜಾರ್ ಸಿನಿಮಾ ಮಾಡುತ್ತಿದ್ದಾರೆ. ತುಂಬಾ ಒಳ್ಳೆಯ ನಿರ್ದೇಶಕರು ನೀವು ಒಮ್ಮೆ ಭೇಟಿ ಮಾಡಬೇಕು ಅಂತ ಹೇಳಿದ್ದರು. ನೋಡಿ ಅವತ್ತು ಹಾಗೆ ಹೇಳಿ ಇವರನ್ನು ನನ್ನ ಜೊತೆ ಬಿಟ್ಟುಹೋದರು. ಅವತ್ತು ಏರ್ಪೋರ್ಟ್‌ನಲ್ಲಿ ಇವ್ರು ನನ್ನ ನೋಡಿದಾಗ ಗಡ್ಡ ಬಿಡ್ಕೊಂಡಿದ್ದೆ ಅದಕ್ಕೆ ಗಡ್ಡ ಫಿಕ್ಸ್ ಆಯ್ತು' ಎಂದು ನಿರ್ದೇಶಕರ ಪರಿಚಯದ ಬಗ್ಗೆ ಮಾತನಾಡಿದ್ದಾರೆ.
'ಇವತ್ತು ಬರಬೇಕಾ ಬೇಡವಾ ಅನ್ನೋದೆ ದೊಡ್ಡ ಪ್ರಶ್ನೆ ಆಗಿತ್ತು. ಯಾಕಂದರೆ ತಾಯಿ ತೀರಿಕೊಂಡು 5 ದಿನ ಆಗಿದೆ. ಆದರೆ ನಮ್ಮ ಸಾಯಿ ಮತ್ತು ನಿರ್ದೇಶಕರು ಬರಲೇಬೇಕು ಅಂತ ಹೇಳಿದ್ದಾರೆ ಅದಕ್ಕೆ ಬಂದಿದ್ದೀನಿ.ಕಿರೀಟಿ ಸಿನಿಮಾ ಟ್ರೈಲರ್ ನೋಡಿದಾಗ, ನಿನ್ನಲ್ಲಿ ಸಿನಿಮಾಗೆ ಬೇಕಾದ ಎಲ್ಲಾ ಗುಣಗಳು ಇದೆ ಅಂತ ಗೊತ್ತಾಗಿತ್ತು. ಮುಖದಲ್ಲಿ ಎಕ್ಸ್‌ಪ್ರೆಶನ್ ಮತ್ತು ಎಮೋಷನ್ ಬೇಕಿದೆ. ಹುಡುಗ ನಟಿಸುತ್ತಾನೆ ಅಂತ ಗೊತ್ತಾಗಿದೆ ಈಗ ನಿರ್ದೇಶಕರು ಏನು ಕೆಲಸ ಮಾಡಿಸುತ್ತಾರೆ ಎಂದು ಕಾದು ನೋಡಬೇಕಿದೆ. ನಮ್ಮನ್ನ ಹೇಗೆ ಬಳಸಿಕೊಳ್ಳುತ್ತೀರಾ ಅನ್ನೋದು ನಮಗೆ ಕುತೂಹಲ ಇದೆ. ಇಲ್ಲಿರುವ ದೊಡ್ಡ ಗುಂಪು ನೋಡಿದರೆ ಎಲ್ಲರೂ ಒಳ್ಳೆಯದನ್ನೇ ವಿಶ್ ಮಾಡಲು ಬಂದಿದ್ದಾರೆ ಅನಿಸುತ್ತದೆ' ಎಂದಿದ್ದಾರೆ ರವಿಚಂದ್ರನ್.
