Asianet Suvarna News Asianet Suvarna News

ಟ್ರೋಲ್ ಆದರೂ ಪೋಸ್ಟ್‌ ಮಾಡುವುದ ನಿಲ್ಲಿಸಿಲ್ಲ; ರಶ್ಮಿಕಾ ಮಂದಣ್ಣ ಮನದಾಳದ ಮಾತು!

ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಟ್ರೋಲ್ ಆದ ನಟಿ ರಶ್ಮಿಕಾ ಮಂದಣ್ಣ. ಮೊದಲ ಬಾರಿಗೆ ತಮ್ಮ ಮನದಾಳದ ನೋವಿನ ಬಗ್ಗೆ ಬರೆದಿದ್ದಾರೆ. ಈ ಪೋಸ್ಟಿನಲ್ಲಿ ಏನಿದೆ? 
 

Kannada rashmika mandanna letter about trolling body shaming and cyber bullying vcs
Author
Bangalore, First Published Nov 2, 2020, 12:28 PM IST

ಬಹುಭಾಷಾ ನಟಿಯಾಗಿ ಮಿಂಚುತ್ತಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ. ನಮ್ಮ ದೈನಂದಿನ ಚಟುವಟಿಕೆಗಳ ಬಗ್ಗೆ, ಸಿನಿಮಾ ಪ್ರಮೋಷನ್‌ ಅಥವಾ ಯಾವುದಾದರೂ ಜಾಹಿರಾತಿನಲ್ಲಿ ಕಾಣಿಸಿಕೊಂಡರೆ  ಶೇರ್ ಮಾಡಿಕೊಳ್ಳುತ್ತಾರೆ. ಚಿಕ್ಕ ವಯಸ್ಸಿಗೇ ಅತಿ ಕಡಿಮೆ ಅವಧಿಯಲ್ಲಿ ನೇಮ್‌, ಫೇಮ್‌ ಹೊಂದಿರುವ ನಟಿ ಬಗ್ಗೆ ಜನರು ಮಾತನಾಡಿಕೊಳ್ಳುವುದು ತುಂಬಾನೇ ಕಾಮನ್‌. ಅವಮಾನ, ಬಾಡಿ ಶೇಮಿಂಗ್, ಕೇಳಿಬಾರದಾದ ಪದಗಳು  ಎಲ್ಲವನ್ನೂ ರಶ್ಮಿಕಾ ಸಿಹಿಸಿಕೊಂಡು ಹೇಗೆ ಜೀವನ ಮುಂದುವರೆಸುತ್ತಿದ್ದಾರೆಂದು ಇದೀಗ ಹೇಳಿ ಕೊಂಡಿದ್ದಾರೆ. ಏನಿದೆ ಪೋಸ್ಟಿನಲ್ಲಿ?

ಹುಬ್ಬೇರಿಸುವಂತೆ ಮಾಡುತ್ತಿದೆ ರಶ್ಮಿಕಾ ಪಡೆದ ಸಂಭಾವನೆ ಮೊತ್ತ! 

ರಶ್ಮಿಕಾ ಪೋಸ್ಟ್‌:
'ನಾವೆಲ್ಲರೂ ಜೀವನದಲ್ಲಿ ಎಷ್ಟು ಸುಖವಾಗಿದ್ದೀವಿ, ಅಂದರೆ ಮೊಬೈಲ್‌ ಅಥವಾ ಒಂದು ಟಚ್ ಮೂಲಕ ಯಾರು ಬೇಕಾದರೂ ಏನೂ ಬೇಕಾದರೂ ಮಾಡಬಲ್ಲರು. ಆದರೆ ಇದರಿಂದ ಒಬ್ಬರ ಜೀವ ಉಳಿಸುವ ಶಕ್ತಿಯೂ ಇದೆ, ಹಾಗೆಯೇ ಮತ್ತೊಬ್ಬರ ಜೀವವನ್ನೂ ಹಾಳು ಮಾಡಿ ಕೊಲ್ಲುವ ಶಕ್ತಿಯೂ ಇದೆ. ನಾನು ಟ್ರೋಲ್ ಆಗಿದ್ದೀನಾ? ಹೌದು ಆಗಿದ್ದೀನಿ. ನನಗೆ ಬಾಡಿ ಶೇಮಿಂಗ್ ಮಾಡಿದ್ದಾರಾ? ಹೌದು ಮಾಡಿದ್ದಾರೆ. ನನ್ನ ಕ್ಯಾರೆಕ್ಟರ್‌ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರಾ? ಹೌದು ತುಂಬಾ. ಸೋಷಿಯಲ್‌ ಮೀಡಿಯಾದಲ್ಲಿ ನನ್ನನ್ನು ಬಲ್ಲಿ (ಕೆಟ್ಟದಾಗಿ ಅಥವಾ ಅವಮಾನ ಉಂಟಾಗುವ ರೀತಿಯಲ್ಲಿ ರೇಗಿಸುವುದು) ಮಾಡಿದ್ದಾರಾ? ಹೌದು ಅದನ್ನೂ ಮಾಡಿದ್ದಾರೆ. ಇಷ್ಟೆಲ್ಲಾ ಮಾಡಿದರೂ ನಾನು ನನಗೆ ಸಂತೋಷ ಕೊಡುವಂತ ವಿಚಾರಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದನ್ನು ನಿಲ್ಲಿಸಿಲ್ಲ.  ಯಾಕಂದರೆ ನಮ್ಮ ಸುತ್ತಲಿರುವ ನೆಗೆಟಿವಿಟಿಗಿಂತ ಮೀರಿದ್ದು ಪಾಸಿಟಿವಿಟಿ ಇದೆ. ಎಷ್ಟು ನೆಗೆಟಿವ್ ಇದೆ ಅಂದ್ರೆ ಎಲ್ಲರೂ ಅದೇ ಸತ್ಯ ಎಂದುಕೊಳ್ಳುತ್ತಾರೆ. ಆದರೆ ಅವೆಲ್ಲವೂ ಕ್ಷಣಿಕ.  ಈ ಕ್ಷಣದಿಂದ ಇನ್ನು ಮುಂದೆಯಾದರೂ ನಾನು ನಮ್ಮ Digital well being ಬಗ್ಗೆ ಗಮನ ಹರಿಸಬೇಕು. ನಮ್ಮ ಫೋನುಗಳನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಬೇಕು. ಜನರ ಜೊತೆ ಸಂಪರ್ಕ ಹೊಂದಲು, ಅದ್ಭುತ ವಿಚಾರಗಳ ಬಗ್ಗೆ ಚರ್ಚಿಸಲು ಹಾಗೂ ಒಬ್ಬ ವ್ಯಕ್ತಿಯ ಬ್ಯುಸಿನೆಸ್‌ ಒಳ್ಳೆದಾಗುವುದಕ್ಕೆ ಬಳಸಬೇಕು.  ಹೀಗೆ ಮಾಡಿ ನೀವೂ ಅನೇಕರಿಗೆ ಸ್ಫೂರ್ತಿಯಾಗಿ,' ಎಂದು ರಶ್ಮಿಕಾ ಬರೆದಿದ್ದಾರೆ.

 

 
 
 
 
 
 
 
 
 
 
 
 
 

We are at a age and time where anything and everything is available /can be done from the touch of a screen.. Bluntly saying this can save a person or even kill a person. Have I been trolled- yes Have I been body shamed- yes Have I been character shamed- yes Have I been cyber bullied- yes But why do I still not hide away from the Internet or creating content is because I know there’s soooo much more good than all this negativity out there and but the thing is when you see so much negativity you start to believe that there is only negativity.. even though it’s just a small part or a phase.. we believe that this is it and so I think it’s a high time start focussing on our digital wellbeing and start using our phones for bigger and better things. This tool was meant for creating, connecting and collaborating. If you are reading this, be the reason behind a creator feeling more encouraged today and be an example of using your phone to optimise your productivity. #OnePlus8T5G #ShotonOnePlus #UltraStopsAtNothing @oneplus_india

A post shared by Rashmika Mandanna (@rashmika_mandanna) on Nov 1, 2020 at 5:10am PST

ರಶ್ಮಿಕಾ ಮಾತುಗಳಿದೆ ನಟಿ ನಮ್ರತಾ ಶಿರೋಡ್ಕರ್, ಆನಂದ್ ಶರ್ಮಾ ಹಾಗೂ ಇನಿಕರೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಸಾಥ್‌ ಕೊಟ್ಟಿದ್ದಾರೆ, ಮನದಾಳದ ಮಾತುಗಳನ್ನು ಒಪ್ಪಿಕೊಂಡಿದ್ದಾರೆ.

Follow Us:
Download App:
  • android
  • ios