ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ನಟಿ ರಶ್ಮಿಕಾ ಮಂದಣ್ಣ ಈಗ ತೆಲುಗು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಬ್ಯಾಕ್‌ ಟು ಬ್ಯಾಕ್‌ ಹಿಟ್‌ ನೀಡುತ್ತಿರುವ ರಶ್ಮಿಕಾ ಈಗ ಮನೆ ವಿಳಾಸ ಬದಲಾಯಿಸಿದ್ದಾರೆ. ಇದಕ್ಕೆ ಕಾರಣವೇನು ಗೊತ್ತಾ?

'ಮಂದಣ್ಣ ಮನೆ ಕೋತಿ ದತ್ತು ಪಡೆಯಲು ಯಾರಿದ್ದೀರಾ?'; ರಶ್ಮಿಕಾ ಫೋಟೋ ವೈರಲ್!

ಕನ್ನಡದಲ್ಲಿ 4 ಸಿನಿಮಾ ಹಾಗೂ ತೆಲುಗುನಲ್ಲಿ 6 ಸಿನಿಮಾ ಕಥೆ ಹಿಡಿದು ಬ್ಯುಸಿಯಾಗಿರವ ರಶ್ಮಿಕಾ ಈಗ ಅಲ್ಲೆ ನೆಲಸುವ ಪ್ಲಾನ್ ಮಾಡಿದ್ದಾರೆ. ಈ ಕಾರಣಕ್ಕೆ ಹೈದಾರಾಬಾದ್‌ನಲ್ಲಿ ದುಬಾರಿ ಬೆಲೆಯ ಮನೆಯನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ಶಂಶಾಬಾದ್‌ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ಗೊಚ್ಚಿಬೋಲಿ ಏರಿಯಾದಲ್ಲಿ ನಾಲ್ಕು ಬೆಡ್‌ರೂಮಿನ್ ವಿಶಾಲವಾದ ಮನೆಯನ್ನು ಖರೀದಿ ಮಾಡಿದ್ದಾರೆ. ತಮ್ಮ ಸಿನಿಮಾ ಮಾತುಕಥೆ ಹಾಗೂ ಸಣ್ಣ ಪುಟ್ಟ ಫೋಟೋ ಶೂಟ್‌ಗಳನ್ನು ಅಲ್ಲಿಯೇ ಮಾಡುತ್ತಿದ್ದಾರೆ ಎನ್ನಲಾಗಿದೆ.

ಮೂಲತಃ ಕೊಡಗಿನ ಕುವರಿಯಾಗಿರುವ ರಶ್ಮಿಕಾ ಮಂದಣ್ಣ ಮನೆ ಇರುವುದು ವಿರಾಜ್‌ಪೇಟೆಯಲ್ಲಿ. ತಂದೆ, ತಾಯಿ ಹಾಗೂ ಸಹೋದರಿ ಅಲ್ಲಿಯೇ ವಾಸವಿದ್ದಾರೆ. ತೆಲುಗು ಸಿನಿಮಾದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾದ ಕಾರಣ ಪ್ರಾಯಣ ಕಡಿಮೆ ಮಾಡಿಕೊಳ್ಳಲು ಹೈದರಾಬಾದ್‌ನಲ್ಲಿ ಮನೆ ಖರೀದಿಸಿದ್ದಾರೆ.

ಅನುಷ್ಕಾ - ಸಮಂತಾ: ಮೇಕಪ್ ಇಲ್ಲದೇ ಹೇಗೆ ಕಾಣ್ತಾರೆ ನೋಡಿ...!

ನೆಟ್ಟಿಗರು ಆಕ್ರೋಶ:

ರಶ್ಮಿಕಾ ಹೈದರಾಬಾದ್‌ನಲ್ಲಿ ಮನೆ ಖರೀದಿ ಮಾಡಿರುವ ವಿಚಾರ ಕೇಳಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವಕಾಶ ಕೊಟ್ಟಿದ್ದು ಕನ್ನಡ ಚಿತ್ರರಂಗ, ಕರ್ನಾಟಕ ಆದರೆ ಹುಡುಕಿಕೊಂಡು ಹೋಗಿದ್ದು ತೆಲುಗು ಚಿತ್ರರಂಗಕ್ಕೆ ಅದಿಕ್ಕೆ ಅಲ್ಲಿಯೇ ಒಂದು ಮನೆ ಬೇರೆ ಎಂದು ಗರಂ ಆಗಿದ್ದಾರೆ.

ಒಟ್ಟಿನಲ್ಲಿ ನಮ್ಮ ಕರ್ನಾಟಕದ ಅದರಲ್ಲೂ ಕನ್ನಡ ಚಿತ್ರರಂಗದ ಮೂಲಕ ಅಭಿನಯ ಕಲಿತ ಹೆಣ್ಣು ಮಕ್ಕಳು ಬೇರೆ ಭಾಷೆಯ ಚಿತ್ರರಂಗವನ್ನು ಆಳುತ್ತಿರುವ ನಮ್ಮ ಹೆಮ್ಮೆ.

"