ಹೊಸ ಪ್ರಯೋಗಕ್ಕೆ ಮುಂದಾದ ಸ್ಯಾಂಡಲ್‌ವುಡ್. ಅರ್ಧ ಸಿನಿಮಾ ನೋಡಲು ಫುಲ್ ಫ್ರೀ.......
ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚಾಗಿ ಕೇಳಿ ಬರುತ್ತಿರುವ ಮಾತು ಏನೆಂದರೆ ಕನ್ನಡ ಸಿನಿಮಾಗಳು ಕಡಿಮೆ ರಿಲೀಸ್ ಆಗುತ್ತಿದೆ, ಕನ್ನಡ ಸಿನಿಮಾ ನೋಡುವವರೇ ಇಲ್ಲ, ಸ್ಟಾರ್ ನಟರ ಸಿನಿಮಾ ರಿಲೀಸ್ ಆಗುತ್ತಿದೆ...ಒಟ್ಟಾರೆ ವೀಕ್ಷಕರಿಗೆ ಸ್ಯಾಂಡಲ್‌ವುಡ್ ಮೇಲೆ ಹೋಮ್ ಕಡಿಮೆ ಆಗುತ್ತಿದೆ. ಹೀಗಾಗಿ ಹೊಸ ಮಾಸ್ಟರ್ ಪ್ಲ್ಯಾನ್ ಮಾಡುವ ಮೂಲಕ ವೀಕ್ಷಕರ ಗಮನ ಸೆಳೆಯಲು ನೌಕ್‌ಔಟ್ ಚಿತ್ರತಂಡ ಮುಂದಾಗಿದೆ.
ಹೌದು! ಜುಲೈ 19ರಂದು ನಾಕ್‌ಔಟ್ ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಿನಿಮಾ ತಂಡ ಹೊಸ ಪ್ಲ್ಯಾನ್ ಮಾಡಿದೆ. ಅದುವೇ ಅರ್ಥ ಸಿನಿಮಾ ಉಚಿತವಾಗಿ ನೋಡಿ, ಇನ್ನರ್ಧ ಬೇಕಿದ್ರೆ ಟಿಕೆಟ್ ಖರೀದಿಸಿ ಎಂದು. ಇದರ ಅರ್ಥ ಏನೆಂದರೆ ಟಿಕೆಟ್ ಖರೀದಿಸಿ ಸಿನಿಮಾ ಚೆನ್ನಾಗಿಲ್ಲ ಅಂತ ಹೊರ ಬಂದು ಬೇಸರ ಮಾಡಿಕೊಳ್ಳುವ ಬದಲು...ಫಸ್ಟ್ ಹಾಫ್ ಸಿನಿಮಾ ನೋಡಿದ ಮೇಲೆ ಏನೋ ಇಂಟ್ರೆಸ್ಟಿಂಗ್ ಆಗಿದೆ ಅಂತ ಎರಡನೇ ಭಾಗ ನೋಡಲು ಮುಂದಾಗುವವರು ಟಿಕೆಟ್ ಖರೀದಿಸಬೇಕಾಗುತ್ತದೆ.
ಪಬ್‌ನಲ್ಲಿ ಮ್ಯಾಕ್ಸಿ ಮಿನಿ, ಊರಲ್ಲಿ ಗೌರಮ್ಮನ ಸೀರೆ; ಜೈ ಜಗದೀಶ್ ಪುತ್ರಿ ಮತ್ತೆ ಹಿಗ್ಗಾಮುಗ್ಗಾ ಟ್ರೋಲ್
'ಚಿತ್ರ ಗುಣಮಟ್ಟವನ್ನು ಮೊದಲರ್ಧ ಸಿನಿಮಾದಲ್ಲಿ ನಿರ್ಧರಿಸುವ ಪ್ರೇಕ್ಷಕರು ಉಚಿತವಾಗಿ ಸಿನಿಮಾ ನೋಡಬಹುದು. ನಂತರ ಸೆಕೆಂಡ್ ಹಾಫ್ ಸಿನಿಮಾ ನೋಡಬೇಕು ಅನಿಸಿದರೆ ಮಾತ್ರ ಟಿಕೆಟ್ ಕೊಂಡು ನೋಡಬಹುದು. ಪ್ರಮುಖ ಚಿತ್ರಮಂದಿರಗಳಲ್ಲಿ ಮಾತ್ರ ಈ ವ್ಯವಸ್ಥೆ ಸೀಮಿತ' ಎಂದು ನಿರ್ದೇಶಕ ಅಂಬರೀಶ್ ಹೇಳಿದ್ದಾರೆ.
ನಾಕ್‌ಔಟ್ ಚಿತ್ರಕ್ಕೆ ಅಂಬರೀಶ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಪೃಥ್ವಿ ಹಾಗೂ ರಚನಾ ಇಂದರ್ ನಟಿಸಿದ್ದಾರೆ. ಈ ಚಿತ್ರಕ್ಕೆ ವಿ.ರವಿಕುಮಾರ್ ಹಾಗೂ ಶಂಶುದ್ದೀನ್ ಎ ಬಂಡವಾಳ ಹಾಕಿದ್ದಾರೆ. ಇದೊಂದು ಹ್ಯೂಮರ್ ಡಾರ್ಕ್ ಕಾಮಿಡಿ ಜಾನರ್‌ನ ಚಿತ್ರವಾಗಿದ್ದು ನಾಯಕ ಆಂಬ್ಯುಲೆನ್ಸ್ ಚಾಲಕನಾಗಿ ನಟಿಸಿದ್ದಾರೆ. ಈ ಚಿತ್ರವನ್ನು ಪ್ರತಿಯೊಬ್ಬ ಆಂಬ್ಯುಲೆನ್ಸ್ ಚಾಲಕರಿಗೆ ಅರ್ಪಿಸುತ್ತಿದ್ದಾರೆ.

