ಏಕೋ ಕನ್ನಡ Rapper, ಸಂಗೀತ ನಿರ್ದೇಶಕ ಹಾಗೂ ಗಾಯಕ ಚಂದನ್ ಶೆಟ್ಟಿ ಜೀವನದಲ್ಲಿ ಎಲ್ಲವೂ ಸರಿ ಹೋಗುತ್ತಿದೆ, ಅದೃಷ್ಟ ಖುಲಾಯಿಸುತ್ತಿದೆ ಎನ್ನುತ್ತಿರುವಾಗಲೇ ಒಂದೊಂದೇ ತಗಾದೆ ಆರಂಭವಾಗಿದೆ. ದೊಡ್ಡ ಮೊತ್ತದ ಪ್ರೊಜೆಕ್ಟ್ ಆನಂದ್ ವೀಡಿಯೋಸ್‌ಗಾಗಿ ತಯಾರಿಸಿದ ಜಾನಪದ ಗೀತೆ ಕೋಲುಮಂಡೆ ಜಂಗಮ ದೇವ ಹಾಡು ವಿವಾದಕ್ಕೆ ಸಿಲುಕಿ, ಪೋಸ್ಟ್ ಮಾಡಿದ ಮೂರೇ ದಿನದಲ್ಲಿ ಯೂಟ್ಯೂಬಿನಿಂದ ತೆಗೆಯಬೇಕಾಯಿತು. ಇದೀಗ ಚಂದನ್ ಶೆಟ್ಟಿ ಫೇಸ್‌ಬುಕ್‌ ಖಾತೆ ಹ್ಯಾಕ್‌ ಆಗಿದೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಇದ್ದಕ್ಕಿದ್ದಂತೆ 30 ನಿಮಿಷಗಳ ಕಾಲ ವಿದೇಶಿಯರ (ಚೀನಿಯರ) ವಿಡಿಯೋ ಪ್ಲೇ ಆಗಿರುವುದು.  

"

ಚಂದನ್ ಶೆಟ್ಟಿ ತ್ರಿಬಲ್ ಧಮಾಕ; ಹೇಗಿದೆ 'ಕೋಲುಮಂಡೆ' ಸಾಂಗ್?

ಫೇಸ್‌ಬುಕ್‌ ಅಥವಾ ಇನ್‌ಸ್ಟಾಗ್ರಾಂ ಲೈವ್ ಮೂಲಕ ಅಭಿಮಾನಿಗಳ ಜೊತೆ ಮಾತನಾಡುವ ಚಂದನ್‌ ಶೆಟ್ಟಿ ಲೈವ್ ಬರುವ ಮುನ್ನ ಕನಿಷ್ಠ 1 ದಿನ ಮುಂಚೆಯೇ ತಿಳಿಸುತ್ತಾರೆ. ಆದರೆ ಇದ್ದಕ್ಕಿದ್ದಂತೆ ಲೈವ್‌ ಪ್ರಸಾರವಾಗಲು ಶುರುವಾದಾಗ ಅಭಿಮಾನಿಗಳು ಓಪನ್ ಮಾಡಿ ನೋಡಿದ್ದಾರೆ. ಯಾರಿಗೂ ತಿಳಿಯದ ವಿದೇಶಿ ಹುಡುಗ (ಚೀನಿ) ವಿಚಿತ್ರ ವೇಷ ಭೂಷಣಗಳ ಗ್ರಾಫಿಕ್ಸ್‌ ಬಳಸಿ ಸುಮಾರು 30 ನಿಮಿಷಗಳ ಕಾಲ ಲೈವ್‌ ಬಂದಿದ್ದಾರೆ ಎನ್ನಲಾಗಿದೆ. ಅದರ ಸ್ಟ್ರೀನ್‌ ಶಾಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಹ್ಯಾಕ್‌ ಮಾಡಿರುವ ಪುಂಡರು ಯಾರದ್ದೂ ಲೈವ್‌ ಹಾಕಿರುವುದಲ್ಲದೆ ಒಂದು ಫೋಟೋ ಕೂಡ ಶೇರ್ ಮಾಡಿದ್ದಾರೆ. ಫೋಟೋದಲ್ಲಿ ಹಣ ಸಹಾಯ ಮಾಡುವ ಬೇಡಿಕೆಯೂ ಇಟ್ಟಿದ್ದಾರೆ. 

ಕೋಲುಮಂಡೆ ಕಾರಣವೇ?
ಗಣೇಶ ಹಬ್ಬದ ಪ್ರಯುಕ್ತ ಆನಂದ್ ಆಡಿಯೋ ಯುಟ್ಯೂಬ್‌ ಚಾನೆಲ್‌ನಲ್ಲಿ ಚಂದನ್‌ ಶೆಟ್ಟಿ ತಮ್ಮ ಹೊಸ rap ಸಾಂಗ್ ಬಿಡುಗಡೆ ಮಾಡಿದ್ದರು. ಜಾನಪದ ಶೈಲಿಯ 'ಕೋಲುಮಂಡೆ ಜಂಗಮ ದೇವರು' ಹಾಡಿನಲ್ಲಿ ಬರುವ ಶಿವಶರಣೆ ಸಂಕ್ವವನನ್ನು ಅಶ್ಲೀಲವಾಗಿ ಚಿತ್ರೀಕರಿಸಲಾಗಿದೆ, ಎಂದು ಚಾಮರಾಜನಗರ ಮಲೆ ಮಹದೇಶ್ವರ ಭಕ್ತರು ಕಿಡಿ ಕಾರಿದ್ದರು. ಅಚಾತುರ್ಯವಾಗಿದೆ ಎಂಬುವುದು ಅರಿವಿಗೆ ಬರುತ್ತಲೇ ಚಂದನ್ ಶೆಟ್ಟಿ ಮಾಧ್ಯಮದ ಮೂಲಕ, ಮಾದಪ್ಪನ ಭಕ್ತರ ಕ್ಷಮೆಯಾಚಿಸಿದ್ದರು. ಅಲ್ಲದೇ ಆನಂದ್ ವೀಡಿಯೋ ಈ ಹಾಡನ್ನು ತಕ್ಷಣವೇ ಯೂಟ್ಯೂಬಿನಿಂದಲೂ ಡಿಲೀಟ್ ಮಾಡಿದೆ. ಅಪ್ಲೋಡ್ ಮಾಡಿದ ಮೂರೇ ದಿನದಲ್ಲಿ ಬಹುತೇಕ 4 ಮಿಲಿಯನ್ ಪಡೆದ ಹಾಡೊಂದನ್ನು ವಿವಾದಗಳ ಕಾರಣ ಡಿಲೀಟ್ ಮಾಡಬೇಕಾಯಿತು. 

ಕೋಲುಮಂಡೆ ಹಾಡಿನ ಗ್ಲಾಮರ್ ಗುಟ್ಟು ಬಿಚ್ಚಿಟ್ಟ ಸಂಕಮ್ಮ ನಂದಿನಿ

ಒಟ್ಟಿನಲ್ಲಿ ಟೈಮ್ ಚಂದನ್‌ಗೆ ವಿರುದ್ಧವಾಗಿದೆ. ಮತ್ತೆ ಅದೇ ಹಾಡನ್ನು ಮರು ಚಿತ್ರೀಕರಿಸುತ್ತಾರೋ, ಅಥವಾ ಹೊಸ ಹಾಡು ಪೋಸ್ಟ್ ಮಾಡಲಾಗುತ್ತದೋ ಗೊತ್ತಿಲ್ಲ. ಈದೀಗ ಸೋಷಿಯಲ್ ಮೀಡಿಯಾ ಅಕೌಂಟ್ ಹ್ಯಾಕ್ ಆದಂತೆ ತೋರುತ್ತಿದ್ದು, ಚಂದನ್‌ ಏಳ್ಗೆ ಸಹಿಸದವರು ಅಕೌಂಟ್ ಹ್ಯಾಕ್‌ ಮಾಡಿದ್ದರೂ, ಮಾಡಿರಬಹುದು ಎನ್ನಲಾಗುತ್ತಿದೆ.