ಅದೃಷ್ಟನೋ ದುರಾದೃಷ್ಟನೋ ಅಪ್ಪು ಸರ್ ಕೊನೆ ಸಿನಿಮಾದಲ್ಲಿ ನಟಿಸಿದ್ದೀನಿ: All Ok

ಕನ್ನಡ ರ್ಯಾಪರ್ ಅಲೋಕ್‌ ಹೊಸ ಆಲ್ಬಂ ಮತ್ತು ಅಪ್ಪು ಜೊತೆ ಜೇಮ್ಸ್ ಸಿನಿಮಾದಲ್ಲಿ ನಟಿಸಿರುವ ಅನುಭವ ಬಗ್ಗೆ ಮಾತನಾಡಿದ್ದಾರೆ. 

Kannada Rapper Allok share special bond with Puneet Rajkumar vcs

ಕನ್ನಡ ಜನಪ್ರಿಯ Rapper ಅಲೋಕ್‌ (Allok) ಕೆಲವು ದಿನಗಳ ಹಿಂದೆ ರೈತರಿಗಾಗಿ (Farmers) ಒಂದು ಹಾಡನ್ನು ಡೆಡಿಕೇಟ್ ಮಾಡಿದ್ದಾರೆ. ಈ ಹಾಡಿನಲ್ಲಿ ಅಲೋಕ್‌, ನಟಿ ಸೋನು ಗೌಡ (Sonu Gowda) ಮಾತ್ರವಲ್ಲದೆ ಸಾರ್ವಜನಿಕರು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಕಾಣಿಸಿಕೊಂಡಿದ್ದಾರೆ. ಯುಟ್ಯೂಬ್‌ನಲ್ಲಿ ಈ ವಿಡಿಯೋ ಟ್ರೆಂಡ್ ಆಗುತ್ತಿದೆ. ಇದರ ಜೊತೆ ಅಲೋಕ್‌ ಜೇಮ್ಸ್‌ ಸಿನಿಮಾದಲ್ಲಿ ನಟಿಸಿರುವುದರ ಬಗ್ಗೆ ರಿವೀಲ್ ಮಾಡಿದ್ದಾರೆ. 

ರೈತರ ಹಾಡು:

'ಒಂದು ಬಾವಿ ಆಳ ತಿಳಿದುಕೊಳ್ಳಬೇಕು ಅಂದ್ರೆ ನಾವೇ ಧುಮುಕ ಬೇಕು ಅಂತಿಲ್ಲ ಯಾರೋ ಧುಮುಕಿ ಈಜಿ ಬಂದಿರುವ ಉದಾಹರಣೆನೂ ತೆಗೆದುಕೊಳ್ಳಬಹುದು. ನಮ್ಮ ಸ್ನೇಹಿತರು ಮತ್ತು ಸಂಬಂಧಿಕರ ಜೀವನಗಳಲ್ಲಿ ಆಗಿರುವಂತ ಉದಾಹರಣೆಗಳು ಸಾಕಷ್ಟಿದೆ. ನಾನು ಒಂದು ನಂಬುತ್ತೇನೆ, ಇಂಡಸ್ಟ್ರಿಯಲ್ಲಿ ಮಾತು ಬಿಟ್ಟು ಹೋಗುವುದು ತುಂಬಾನೇ ಮುಖ್ಯವಾಗುತ್ತದೆ. ನಾವು ಎಂಥ ಕೆಲಸ ಮಾಡಿದ್ವಿ ಅಂತ ಹೇಳಬೇಕು. ಉದಾಹರಣೆ ಅಪ್ಪು ಸರ್ (Puneeth Rajkumar).  ಅವರ ಕೆಲಸಗಳು ನಮಗೆ ದಾರಿ ದೀಪವಾಗಿದೆ. ನನ್ನಂತ ಲಕ್ಷಾಂತರ ಜನ ಆರ್ಟಿಸ್ಟ್‌ಗಳು ಅದನ್ನ ನಂಬಿಕೊಂಡು ಆ ದಾರಿಯಲ್ಲಿ ನಡೆಯುತ್ತಿದ್ದೇವೆ. ಏನ್‌  ಏನೋ ಕಾರಣಗಳಿಂದ ನಾವು ಜನಪ್ರಿಯತೆ ಪಡೆಯುವುದು ತುಂಬಾ ಸುಲಭ ಪಾಪ್ಯುಲಾರಿಟಿ ಇವತ್ತು ಎಲ್ಲರಿಗೂ ಸಿಗುತ್ತೆ ಆದರೆ ಯಾವ ತರ ಪಾಪ್ಯುಲರ್‌ ಆಗ್ತೀವಿ ಅನ್ನೋದು ಮುಖ್ಯವಾಗುತ್ತದೆ' ಎಂದು ಗಾಯಕ್ ಕಮ್ ನಟ ಅಲೋಕ್ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

' ಒಂದು ಹಾಡು ಮಾಡಬೇಕಿದ್ದರೆ ಒಂದು ಉದ್ದೇಶ ಇಟ್ಕೊಂಡು ಮಾಡಬೇಕು ಅದು ಚಿನ್ನ ಇದ್ದಂಗೆ. ಒಂದು ಕಡೆ ಇನ್ವೆಸ್ಟ್ ಮಾಡ್ತೀವಿ ಅಂದ್ರೆ ಅದರ ಬೆಲೆ ಹೆಚ್ಚಾಗುತ್ತಿರಬೇಕು. ಕಾಗಿ ಬಂಗಾರ ಕಾನ್ಸೆಪ್ಟ್‌' ಎಂದು ಅಲೋಕ್ ಹೇಳಿದ್ದಾರೆ.

ನ್ಯೂ ಇಯರ್‌ಗೆ 'ಕ್ರೇಜಿ' ಸಾಂಗ್; ಸರ್ಪ್ರೈಸ್‌ ಗೆಸ್ಟ್‌ ಯಾರು ನೋಡಿ!

ಅಪ್ಪು ಜೊತೆಗಿನ ಓಡನಾಟ:

'ನನ್ನ ಎರಡನೇ ಆಲ್ಬಂ ಹಾಡು ಲಾಂಚ್ ಮಾಡಿದ್ದು ಅಪ್ಪು ಸರ್. ಯುವಕರು ಏನಾದರೂ ಹೊಸದಾಗಿ ಮಾಡ್ತಿದ್ದಾರೆ ಅಂದ್ರೆ ತುಂಬಾನೇ ಸಪೋರ್ಟ್ ಮಾಡೋರು. ನನ್ನ ಅದೃಷ್ಟನೋ ದುರಾದೃಷ್ಟನೋ ಗೊತ್ತಿಲ್ಲ ಅವರ ಕೊನೆ ಸಿನಿಮಾ 'ಜೇಮ್ಸ್‌' ನಲ್ಲಿ (James) ನಾನು ನಟಿಸಿದ್ದೀನಿ. ನನ್ನ ಮೊದಲ ಆಲ್ಬಂ ಅವರು ಲಾಂಚ್ ಮಾಡಿದ್ದರು ಅವರ ಕೊನೆ ಸಿನಿಮಾದಲ್ಲಿ ನಾನು ಆಕ್ಟ್‌ ಮಾಡಿರುವೆ.'ಎಂದಿದ್ದಾರೆ ಅಲೋಕ್.

ರೈತ ಗೀತೆ ಬಿಡುಗಡೆ ಮಾಡಿದ Rapper All Ok, ವಿಡಿಯೋ ವೈರಲ್!

'ಅಪ್ಪು ಸರ್ ಹೊರಡುವ ಸಮಯದಲ್ಲಿ, ನೋಡಿ ಅವರು ಯಾವತ್ತೂ ಸೋಲ್ಜರ್ (Soldier) ಪಾತ್ರ ಮಾಡಿರಲಿಲ್ಲ. ಪರಶುರಾಮದಲ್ಲಿ ಅಣ್ಣಾವ್ರು ಮಾಡಿದ್ರೂ ಅವರ ಮಗನಾಗಿ ಇವ್ರು ನಟಿಸಿದ್ದರು. ಮೊನ್ನೆ ಸೀಲ್ಟ್‌ ರಿಲೀಸ್ ಮಾಡಿದ್ದರು ನೋಡೋಕೆ ಒಂದು ರೀತಿ ಸಂತೋಷ ಮತ್ತು ದುಖಃ. ಅವರು ನನಗೆ ತುಂಬಾನೇ ದೊಡ್ಡ ಸ್ಫೂರ್ತಿ. ನನ್ನ ಎಲ್ಲಾ ಹಾಡುಗಳನ್ನು ಅವರಿಗೆ ಕಳುಹಿಸುತ್ತಿದ್ದೆ. ಫಸ್ಟ್‌ ಕೇಳಿ ಚೆನ್ನಾಗಿದೆಯಾ, ಇಲ್ವಾ ಎಂದು ಹೇಳುತ್ತಿದ್ದರು. ತುಂಬಾ ರ್ಯಾಪ್ ಸಾಂಗ್ ಮಾಡಿದ್ದರೆ ಅವರಿಗೆ ಇಷ್ಟ ಆಗುತ್ತಿರಲಿಲ್ಲ. ಏನಿದು ತುಂಬಾ ಕನ್ಫ್ಯೂಶನ್‌ನಲ್ಲಿ ಇದೆ ಸ್ವಲ್ಪ ಜನರಿಗೆ ಅರ್ಥ ಆಗುವ ರೀತಿಯಲ್ಲಿ ಮಾಡು ಅಂತಿದ್ದರು.  ತುಂಬಾ ಸಲ ಬೈದಿದ್ದಾರೆ. ನೀವು ಗಲೀಜು ಗಲೀಜಾಗಿ ರ್ಯಾಪ್‌ ಸಾಂಗ್ ಮಾಡಬೇಡ ಜನರಿಗೆ ಅರ್ಥ ಆಗಬೇಕು ನೀನು ಹೇಳೋ ಸಂದೇಶ ಚೆನ್ನಾಗಿರಬೇಕು ಕ್ಲೀನ್ ಆಗಿರಬೇಕು. ಮಾತು ಮುತ್ತಿನಂತೆ ಇರಬೇಕು ಅನ್ನುತ್ತಿದ್ದರು. ಎರಡು ಮೂರು ಹಾಡುಗಳಿಗೆ ಅವರೇ ನನಗೆ ಸಲಹೆ ನೀಡಿದ್ದರು' ಎಂದು ಅಲೋಕ್ ಮಾತನಾಡಿದ್ದಾರೆ.

Latest Videos
Follow Us:
Download App:
  • android
  • ios