30ಕ್ಕೂ ಹೆಚ್ಚು ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ಮಿಂಚಿರುವ ನಟ ರಾಜ್ ದೀಪಕ್ ಶೆಟ್ಟ ಹಾಗೂ ಬಹುದಿನಗಳಿಂದ ಪ್ರೀತಿಸುತ್ತಿದ್ದ ಗೆಳತಿ ಸೋನಿಯಾ ಆಪ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ದಾಂಪತ್ಯ ಜೀವನಕ್ಕೆ ಕಾಲಿಡಲು ಸನ್ನದ್ಧರಾಗುತ್ತಿದ್ದಾರೆ. 

 ರಾಜ್ ದೀಪಕ್ ಹಾಗೂ ಸೋನಿಯಾ ತಮ್ಮ ಮಂಗಳೂರಿನ  ನಿವಾಸದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸೋನಿಯಾ ವೃತ್ತಿಯಲ್ಲಿ ಇವೆಂಟ್‌ ಆರ್ಗನೈಸರ್. ಇಬ್ಬರೂ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಹಿರಿಯರ ಒಪ್ಪಿಗೆ ಪಡೆದು, ಮುಂದಿನ ಹೆಜ್ಜೆ ಇಡಲು ಮುಂದಾಗಿದ್ದಾರೆ.

ಮೇ 17 ರಾಜ್‌ ದೀಪಕ್ ಹುಟ್ಟು ಹಬ್ಬ. ಆ ದಿನವೇ ಮದುವೆಯಾಗಬೇಕಿತ್ತು ಆದರೆ ಕೋವಿಡ್‌-19 ಹೆಚ್ಚಾಗುತ್ತಿರುವ ಕಾರಣ ಅದನ್ನು ಮುಂದೂಡಲಾಗಿತ್ತು. ಸದ್ಯಕ್ಕೆ ನಿಶ್ಚಿತಾರ್ಥ ಮಾಡಿಕೊಂಡು, ಅಕ್ಟೋಬರ್ 18ಕ್ಕೆ ಮದುವೆ ದಿನಾಂಕ ಫಿಕ್ಸ್‌ ಮಾಡಲಾಗಿದೆ.  ಸೋನಿಯಾ ರಾಡ್ರಿಗೋಸ್ ಫ್ಯಾಷನ್ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ, ಮಂಗಳೂರಿನಲ್ಲಿ ನಡೆಯುವ ಫ್ಯಾಷನ್ ವೀಕ್‌ ಮಾಲಕಿಯಾಗಿ ಅನೇಕ ಫ್ಯಾಷನ್ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. 

ಬಹುಭಾಷಾ ನಟ ರಾಜ ದೀಪಕ್:
ಬಹುಭಾಷಾ ನಟ ರಾಜ ದೀಪಕ್‌ ಸದ್ಯಕ್ಕೆ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ' ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ಕನ್ನಡ ಸಿನಿಮಾಗಳಾದ 'ಭರಾಟೆ', 'ಭರ್ಜರಿ', 'ಪಂಚತಂತ್ರ' ಹಾಗೂ 'ಟೈಗರ್‌' ಸಿನಿಮಾದಲ್ಲಿಯೂ ಮಿಂಚಿದ್ದಾರೆ. ಇನ್ನು ದೀಪಕ್ ಶೆಟ್ಟಿ ಬೆಳ್ಳಿ ತೆರೆ ಮಾತ್ರವಲ್ಲ ಕಿರುತೆರೆಯಲ್ಲಿ ಅಭಿನಯಿಸಿದ್ದಾರೆ. 'ಲವಲವಿಕೆ' ಧಾರಾವಾಹಿಯಲ್ಲಿ ಹೀರೋ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ.

ಕೊರೋನಾದಿಂದ ಮುಂದೂಡಿದೆ ಸ್ಯಾಂಡಲ್‌ವುಡ್‌ ಖ್ಯಾತ ಖಳನಟನ ಅದ್ಧೂರಿ ಮದುವೆ! 

ಒಟ್ಟಿನಲ್ಲಿ 2020 ಕ್ರೇಜಿ ನಂಬರ್ ಆಗಿರುವ ಕಾರಣ ಅನೇಕ ನಟ-ನಟಿಯರು ತಮ್ಮ ಮದುವೆ ದಿನಾಂಕವನ್ನು ಫಿಕ್ಸ್ ಮಾಡಿಕೊಂಡಿದ್ದರು. ಆದರೆ ಯಾರಿಗೂ ತಿಳಿಯದಂತೆ ಕೊರೋನಾ ವೈರಸ್‌ ಮಹಾಮಾರಿ ಭಾರತವನ್ನೂ ಸೇರಿ ಇಡೀ ವಿಶ್ವವನ್ನೇ ಆಕ್ರಮಿಸಿಕೊಂಡಿದ್ದು, ಯಾವುದೂ ಅಂದುಕೊಂಡತೆ ನೆರವೇರಲು ಬಿಡುತ್ತಿಲ್ಲ . ಈ ಹಿನ್ನಲೆಯಲ್ಲಿ ಭಾರತ ಸರ್ಕಾರ ಜಾರಿಗೊಳಿಸಿರುವ ನಿಯಮಗಳ ಪ್ರಕಾರ ಸ್ವಚ್ಛತೆ ಕಾಪಾಡಿಕೊಂಡು, ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್ ವಿತ್ ಸೋಷಿಯಲ್ ಡಿಸ್ಟೆನ್ಸ್ ಫಾಲೋ ಮಾಡುವುದು ಅನಿವಾರ್ಯ. ಮದುವೆ ಕಾರ್ಯಕ್ರಮಗಳಿಗೂ ಕೇವಲ ಕೆಲವೇ ಕೆಲವು ಜನರ ಸಮ್ಮುಖದಲ್ಲಿ, ಮಾರ್ಗಸೂಚಿಗಳನ್ನು ಫಾಲೋ ಮಾಡಬೇಕಿದೆ. 50 ಜನರ ಸಮ್ಮುಖದಲ್ಲಿ, ಅಗತ್ಯ ಸಾಮಾಜಿಕ ಅಂತರ ಕಾಯ್ದುಕೊಂಡು, ಜಿಲ್ಲಾಡಳಿತದ ಅನುಮತಿಯೊಂದಿಗೆ ಮದುವೆ ಮಾಡಿಕೊಳ್ಳುವುದು ಇದೀಗ ಅನಿವಾರ್ಯ.