Asianet Suvarna News Asianet Suvarna News

ಗುಮ್ಮೋ ಟೈಮಲ್ಲಿ ಸರಿಯಾಗಿ ಗುಮ್ಮಿದ್ದೀನಿ, ತಾಕತ್ತಿದ್ದರೆ ತೋರಿಸಲಿ: ಉಮಾಪತಿ ಶ್ರೀನಿವಾಸ್

ಕಾಟೇರ ಟೈಟಲ್ ಕೊಟ್ಟಿದ್ದು ಯಾರು? ಉಮಾಪತಿ ಶ್ರೀನಿವಾಸ್‌ ಬಗ್ಗೆ ವೇದಿಕೆ ಮೇಲೆ ಮಾತನಾಡಿದ ದರ್ಶನ್‌ಗೆ ಕೊಟ್ಟ ಪ್ರತಿಕ್ರಿಯೆ ಇದು.... 

Kannada Producer Umapathy Srinivas reacts about controversy around Kaatera title vcs
Author
First Published Feb 21, 2024, 11:28 AM IST

ನಟ ದರ್ಶನ್ ಮತ್ತು ಆರಾಧನಾ ರಾಮ್ ನಟಿಸಿರುವ ಕಾಟೇರ ಸಿನಿಮಾ ಬ್ಲಾಕ್‌ ಬಸ್ಟರ್‌ ಕಲೆಕ್ಷನ್ ಮಾಡಿದೆ. ರಾಕ್‌ಲೈನ್‌ ವೆಂಕಟೇಶ್ ಬಂಡವಾಳ ಹಾಕಿರುವ ಈ ಚಿತ್ರಕ್ಕೆ ತರುಣ್ ಸುಧೀರ್ ಆಕ್ಷನ್ ಹೇಳಿದ್ದಾರೆ. ಪ್ರಸನ್ನ ಚಿತ್ರಮಂದಿರದಲ್ಲಿ 50ನೇ ದಿನದ ಸಂಭ್ರಮ ಕಾರ್ಯಕ್ರಮ ನಡೆದಿದೆ. ಈ ವೇಳೆ ದರ್ಶನ್ ಕಾಟೇರ್ ಟೈಟಲ್‌ ಸಿಕ್ಕಿದ್ದು ಹೇಗೆ? ಯಾರು ಆಯ್ಕೆ ಮಾಡಿದ್ದು? ಯಾರು ಕಥೆ ಮಾಡಿದ್ದು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಈ ಸಮಯದಲ್ಲಿ ಉಪಾಮತಿ ಶ್ರೀನಿವಾಸ್‌ಗೆ ಟಾಂಗ್‌ ಕೂಡ ಕೊಟ್ಟಿದ್ದಾರೆ. 

'ಯಾರು ಏನ್ ಬೇಕಿದ್ದರೂ ಮಾತನಾಡಲಿ. ಇವತ್ತು ಹೊಟ್ಟೆ ತುಂಬಿದೆ ಮಾತನಾಡಲಿ. ವಯಸ್ಸಿನಲ್ಲಿ ದೊಡ್ಡವರಿದ್ದಾರೆ ಅವ್ರು ಮಾತನಾಡಿದ್ದಾರೆ ಅಂತ ನಾನು ತಿರುಗಿಸಿ ಮಾತನಾಡಲು ಆಗಲ್ಲ. ಒಂದು ಅರ್ಥ ಮಾಡಿಕೊಳ್ಳಿ ನನಗೆ ತಾಕತ್ತು ಇರುವುದಕ್ಕೆ ಇಲ್ಲಿ ನಿಂತಿರುವುದು. ಯಾವನಿಗೂ ನಾನು ಭಯ ಪಡುವ ಅವಶ್ಯಕತೆ ಇಲ್ಲ. ಪದ ಬಳಕೆ ಮಾಡುವ ಸಮಯದಲ್ಲಿ ಜವಾಬ್ದಾರಿಯಿಂದ ಬಳಸಬೇಕಾಗುತ್ತದೆ. ನಾವು ಕೈಯಲ್ಲಿ ಆಗದೇ ಇರುವ ವ್ಯಕ್ತಿ ಅಲ್ಲ ಸರಿಯಾದ ಸಮಯಕ್ಕೆ ಯಾವ ರೀತಿ ಉತ್ತರ ಕೊಡಬೇಕು ಹಾಗೆ ಕೊಡುತ್ತೀನಿ. ಗುಮ್ಮೋ ಟೈಂನಲ್ಲಿ ನಾನು ಗುಮ್ಮಿದ್ದೀನಿ ಅವರಿಗೂ ಗೊತ್ತಿದೆ ನಾನು ಹೇಗೆ ಗುಮ್ಮಿದ್ದೀನಿ ಅಂತ. ಬಾಯಿ ಮಾತಲ್ಲಿ ಹೇಳಿನೂ ಪದ ಬಳಕೆ ಬಗ್ಗೆ ಗೊತ್ತಾಗಲ್ಲ ಅಂದ್ರೆ ಯಾವತ್ತು ಕಲಿಯುತ್ತಾರೆ? ವೇದಿಕೆ ಸಿಕ್ಕಿದೆ ಅಂತ ಏನು ಬೇಕದ್ದರೂ ಮಾತನಾಡಬಹುದಾ? ತಾಕತ್ತು ಇದ್ರೆ ಮಾಡಿ ತೋರಿಸಿ ನೋಡೋ ಬಿಡೋಣ. ಇಂಡಸ್ಟ್ರಿ ಅಂತ ಬಂದಾತ ಎಲ್ಲರೂ ತಗ್ಗಿ ಬಗ್ಗಿ ನಡೆಸಿಕೊಂಡ್ರೆ ಒಂದು ಒಳ್ಳೆ ಸಿನಿಮಾ ಆಗುತ್ತದೆ. ನಾನು ಉಪಾಧ್ಯಕ್ಷ ಸಿನಿಮಾ ಮಾಡಿದ್ದೀನಿ...ಚಿಕ್ಕಣ್ಣ ರೈಸಿಂಗ್ ಸ್ಟಾರ್ ಆಗಿದ್ದಾರೆ. ಆ ಖುಷಿ ನನಗೆ ಇದೆ' ಎಂದು ದರ್ಶನ್‌ ಟಾಂಗ್‌ಗೆ ಉಮಾಪತಿ ಶ್ರೀನಿವಾಸ್ ಖಾಸಗಿ ಟಿವಿಯಲ್ಲಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.  

ಅಯ್ಯೋ ತಗಡೇ...ಯಾಕೆ ಬಂದು ಬಂದು ಗುಮ್ಮಿಸಿಕೊಳ್ಳುತ್ತೀಯಾ?; ಉಮಾಪತಿ ಶ್ರೀನಿವಾಸ್‌ಗೆ ಟಾಂಗ್ ಕೊಟ್ಟ ದರ್ಶನ್

'ನನಗೂ ದರ್ಶನ್‌ಗೂ 11/12 ವರ್ಷ ವ್ಯತ್ಯಾಸ ಇದೆ ಆದರೆ ನೋಡಿ ಮಾಡಿ ಮಾತನಾಡಬೇಕು. ನನ್ನ ಬಗ್ಗೆ ಅಂತಾದರೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಬಗ್ಗೆ ಕೇವಲವಾಗಿ ಮಾತನಾಡಿದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಮತ್ತೊಬ್ಬರು ಕೊಡುವ ಸೀಲ್‌ನಲ್ಲಿ ನಾನು ಬದುಕುತ್ತಿಲ್ಲ. ಧೂಳ್ ಇತ್ತು ನಾನು ವದರಿಸಿದೆ ಹೋಯ್ತು. ನನ್ನ ತಪ್ಪು ಇಲ್ಲ ಅಂದ್ರು ಇದೆ ಅಂದ್ರು ನಾನು ಮೊದಲು ಸಾರಿ ಕೇಳುತ್ತೀನಿ. ಸಾರಿ ಕೇಳಿ ಮಾತನಾಡುವುದರಲ್ಲಿ ತಪ್ಪಿಲ್ಲ' ಎಂದು ಉಮಾಪತಿ ಶ್ರೀನಿವಾಸ್ ಹೇಳಿದ್ದಾರೆ. 

Follow Us:
Download App:
  • android
  • ios