ಕನ್ನಡ ಚಿತ್ರರಂಗ ಪರ ಹೋರಾಟಗಾರ, ನಿರ್ಮಾಪ ಹಾಗೂ ಕನ್ನಡ ಚಿತ್ರ ಮಂಡಳಿ ಮಾಜಿ  ಅಧ್ಯಕ್ಷ ಸಾರಾ ಗೋವಿಂದು ಪುತ್ರ ಅನೂಪ್‌ ಹಾಗೂ ಮೇಘನಾ ದಂಪತಿ ಗಂಡು ಮಗುವಿನೆ ಜನ್ಮ ನೀಡಿದ್ದಾರೆ.

 

'ನಾನು ಮತ್ತೆ ತಾತನಾದೆ. ನಮ್ಮ ಮನೆಗೆ ಇಂದು ಗಂಡು ಮಗುವನ್ನು ಬರ ಮಾಡಿಕೊಂಡಿದ್ದೇವೆ. ನನ್ನ ಮಗ ಅನೂಪ್ ಹಾಗೂ ಮೇಘನಾ ಇಂದು ಅಪ್ಪ ಅಮ್ಮನ ಜವಾಬ್ದಾರಿ ಹೊತ್ತು ಸುಖ ಸಂಸಾರಕ್ಕೆ ಮೆರಗು ತಂದಿದ್ದಾರೆ. ನಿಮ್ಮ ಜೀವನ ಸುಖವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ,' ಎಂದು ಸಾರಾ ಹೇಳಿದ್ದಾರೆ.

ಕ್ರಿಕೆಟಿಗ ಸ್ಟುವರ್ಟ್‌ -ಮಯಾಂತಿ ದಂಪತಿಗೆ ಗಂಡು ಮಗು! 

2018ರಲ್ಲಿ ಅನೂಪ್ ಹಾಗೂ ಮೇಘನಾ ತಿರುಪತಿ ಶೈಲಿಯ ಮಂಟಪದಲ್ಲಿ ಅದ್ಧೂರಿ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.  'ಕೊನೆಗೂ ನಿಮಗೆ ಹೇಳಲು ಒಂದು ನ್ಯೂಸ್ ಇದೆ. ಪುಟ್ಟ ಹೆಜ್ಜೆಗಳ ಕನಸು ನನಸಾಗಿದೆ. ಗಂಡು ಮಗುವನ್ನು ಬರ ಮಾಡಿಕೊಂಡಿದ್ದೇವೆ,' ಎಂದು ನಟ ಅನೂಪ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.