ಕಿರುತೆರೆ ನಟಿ ಚೇತನಾ ರಾಜ್‌ ಸಾವಿಗೆ ನಟಿ ಪ್ರಿಯಾಂಕಾ ಉಪೇಂದ್ರ ಮತ್ತು ಮೋಹಕ ತಾರೆ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ.

‘ಸಿನಿಮಾ, ಸೀರಿಯಲ್‌ ಮಾಡುವವರು ಹೊಸದಾಗಿ ಬರುವ ನಟಿಯರ ದೇಹದ ಬಗ್ಗೆ ಕಮೆಂಟ್‌ ಮಾಡೋದು ಒಳ್ಳೆಯದಲ್ಲ. ಮನರಂಜನಾ ಕ್ಷೇತ್ರಕ್ಕೆ ಬರುವ ಹೊಸಬರೂ ಎಲ್ಲಕ್ಕಿಂತ ಬದುಕು ತುಂಬಾ ಮುಖ್ಯ ಅನ್ನೋದನ್ನು ಅರಿಯಬೇಕು’ ಎಂದು ನಟಿ ಪ್ರಿಯಾಂಕಾ ಉಪೇಂದ್ರ ಹೇಳಿದ್ದಾರೆ.

ಬೊಜ್ಜು ಕರಗಿಸುವ ಸರ್ಜರಿಗೊಳಗಾಗಿ ಸಾವನ್ನಪ್ಪಿರುವ ಕಿರುತೆರೆ ನಟಿ ಚೇತನಾ ರಾಜ್‌ ನಿಧನದ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದರು.

‘ಚೇತನಾ ನಿಧನದ ಸುದ್ದಿ ನನಗೂ ಶಾಕಿಂಗ್‌ ಆಗಿತ್ತು. ನಟಿಯರ ದೇಹದ ಬಗ್ಗೆ ಸೋಷಿಯಲ್‌ ಮೀಡಿಯಾಗಳಲ್ಲೂ ಮನಸ್ಸಿಗೆ ಬಂದಂತೆ ಕಮೆಂಟ್‌ ಮಾಡುತ್ತಾರೆ. ಇದು ನಟಿಯರ ಆತ್ಮವಿಶ್ವಾಸ ತಗ್ಗಿಸುತ್ತದೆ. ನನ್ನ ದೇಹ ಚೆನ್ನಾಗಿಲ್ಲ. ಸರ್ಜರಿ ಮಾಡಿಸ್ಕೊಳ್ಳಬೇಕು ಎಂಬಂಥಾ ಯೋಚನೆ ಬರುತ್ತವೆ. ಚಿಕ್ಕ ವಯಸ್ಸಿನ ನಟಿಯರು ಈ ಚಿಕಿತ್ಸೆ, ಸರ್ಜರಿಗಳ ಸೈಡ್‌ ಎಫೆಕ್ಟ್ಗಳ ಬಗ್ಗೆ ಯೋಚಿಸದೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದು ಕೆಲವೊಮ್ಮೆ ಅವರ ಪ್ರಾಣಕ್ಕೇ ಅಪಾಯ ತರುತ್ತದೆ. ಈ ಹಿಂದೆ ಬೆಂಗಾಲಿ ನಟಿಯೊಬ್ಬರೂ ಇದೇ ಥರ ಸಾವನ್ನಪ್ಪಿದ್ದರು. ಎಲ್ಲ ನಟಿಯರಲ್ಲಿ ನಾನು ಹೇಳೋದು, ದಯಮಾಡಿ ಸೋಷಿಯಲ್‌ ಮೀಡಿಯಾ ಕಮೆಂಟ್ಸ್‌, ನಿಮ್ಮ ದೇಹದ ಬಗ್ಗೆ ಇತರರು ಮಾಡುವ ಕಮೆಂಟ್ಸ್‌ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಪ್ರತಿಭೆಯ ಮೂಲಕ ಮುಂದೆ ಬನ್ನಿ’ ಎಂದು ಪ್ರಿಯಾಂಕಾ ಹೇಳಿದ್ದಾರೆ.

ಬ್ಯೂಟಿ ಸ್ಟಾಂಡರ್ಡ್‌ ಹೇರಿಕೆ ಬಗ್ಗೆ ರಮ್ಯಾ ಆಕ್ರೋಶ

‘ಚಿತ್ರರಂಗದಲ್ಲಿ ನಟಿಯರಿಗೆ ಅವಾಸ್ತವಿಕ ಬ್ಯೂಟಿ ಸ್ಟಾಂಡರ್ಡ್‌ ವಿಧಿಸಲಾಗಿದೆ. ನಟಿಯರು ಹೀಗಿದ್ರೇ ಚಂದ ಅನ್ನೋ ಮಾನದಂಡವನ್ನು ಹೇರಲಾಗುತ್ತಿದೆ. ಪಾದದಲ್ಲಿದ್ದ ಗಡ್ಡೆ ತೆಗೆಸಿದ ಬಳಿಕ ನಾನೂ ತೂಕ ಇಳಿಸಲು ಒದ್ದಾಡುತ್ತಿದ್ದೇನೆ. ಆದರೆ ಸರಿಯಾದ ಕ್ರಮದಲ್ಲಿ, ಆರೋಗ್ಯದ ದೃಷ್ಟಿಯಿಂದ ತೂಕ ಇಳಿಸುತ್ತಿದ್ದೇನೆ. ಈ ಮಾನದಂಡ ನಟರಿಗೆ ಅನ್ವಯ ಆಗೋದಿಲ್ಲ. ಅವರು 65 ವರ್ಷ ದಾಟಿದರೂ ಕೂದಲುದುರಿದ ತಲೆಗೆ ವಿಗ್‌ ಧರಿಸಿ ಹೀರೋ ಆಗಿಯೇ ನಟಿಸಬಹುದು. ಮಹಿಳೆಯರು ಕೊಂಚ ದಪ್ಪ ಆದರೂ ಅಜ್ಜಿ, ಆಂಟಿ ಅಂತೆಲ್ಲ ಕರೆಯುತ್ತಾರೆ. ಈ ಪಕ್ಷಪಾತದ ವಿರುದ್ಧ ಮಹಿಳೆಯರು ದನಿ ಎತ್ತಬೇಕು. ಮಹಿಳೆಯರು ನಾವು ನಾವಾಗಿಯೇ ಇರಬೇಕು. ನೀನು ಹೀಗಿರಬೇಕು, ಹಾಗಿರಬಾರದು ಅನ್ನೋದನ್ನು ಜಗತ್ತು ನಮಗೆ ನಿರ್ದೇಶಿಸಲು ಅವಕಾಶ ನೀಡಬಾರದು. ಈ ನಿಯಮಗಳನ್ನು ಬದಲಿಸುವ ಸಮಯ ಬಂದಿದೆ’ ಎಂದು ನಟಿ ರಮ್ಯಾ ಗುಡುಗಿದ್ದಾರೆ.

RIP chetana raj ಈ ರೀತಿಯ ಸರ್ಜರಿ ಯಾರೂ ಮಾಡಿಸಿಕೊಳ್ಳಬೇಡಿ, ಸಾವಿಗೀಡಾದ ಚೇತನಾ ಸ್ನೇಹಿತನ ಮನವಿ!

ಎಕ್ಸರ್‌ಸೈಜ್‌ ಮೂಲಕವೇ 25 ಕೆಜಿ ತೂಕ ಇಳಿಸಿದ ಗೀತಾ ಭಟ್

ಇತ್ತೀಚೆಗೆ ಕೆಲವು ತಿಂಗಳಿಂದ ಗೀತಾ ಜಿಮ್‌ನಲ್ಲಿ ಬೆವರಳಿಸ್ತಿದ್ದಾರೆ. ಇವರ ಕೆಎಸ್‌ಎಫ್‌ ಟ್ರಾನ್ಸ್‌ಫರ್‌ಮೇಶನ್‌ ಸ್ಟುಡಿಯೋದ(Ksf Transformation Studio) ಕಿರಣ್ ಸಾಗರ್ (Kiran Sagar)ಇವರ ಫಿಟ್‌ನೆಸ್‌ ಟ್ರೈನರ್‌. ಕಳೆದ ಕೆಲವು ತಿಂಗಳಿಂದ ಇವರು ಗೀತಾ ಅವರ ತೂಕ ಇಳಿಸಲು ಸಹಕರಿಸುತ್ತಿದ್ದಾರೆ. ಆರಂಭದ ಕೆಲವೇ ತಿಂಗಳಲ್ಲಿ ಹದಿನೇಳು ಕೆಜಿ ಇಳಿಸಿದಕೊಂಡ ಇವರ ವೈಟ್‌ಲಾಸ್‌ ಜರ್ನಿ ಆಮೇಲೆ ಅಷ್ಟು ಸುಲಭ ಆಗಿರಲಿಲ್ಲ. ಆರಂಭದಲ್ಲಿ ಬೇಗ ಬೇಗ ತೂಕ ಇಳಿಯಿತು, ಆಮೇಲಾಮೇಲೆ ಇಷ್ಟು ಎಕ್ಸರ್‌ಸೈಸ್ ಮಾಡಿದ್ರೂ ತೂಕ ಅಂದುಕೊಂಡಷ್ಟು ಇಳಿಯುತ್ತಿರಲಿಲ್ಲ. ಇದೀಗ ಹತ್ತಿರ ಹತ್ತಿರ 25 ಕೆಜಿ ತೂಕ ಇಳಿಸಿದ್ದಾರೆ ಗೀತಾ. ಹೆಚ್ಚು ಕಡಿಮೆ ಇನ್ನೂ ಇಷ್ಟೇ ತೂಕ ಇವರು ಇಳಿಸಬೇಕಾಗಿದೆ.

"