ವೆಡ್ಡಿಂಗ್ ಗಿಫ್ಟ್‌ ಸಿನಿಮಾ ಬಗ್ಗೆ ಮೊದಲ ಬಾರಿ ನಟಿ ಪ್ರೇಮಾ ಮಾತನಾಡಿದ್ದಾರೆ. 

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆಯರಾದ ನಟಿ ಪ್ರೇಮಾ ಮತ್ತು ಸೋನು ಗೌಡ 'ವೆಡ್ಡಿಂಗ್ ಗಿಫ್ಟ್‌' ಚಿತ್ರದಲ್ಲಿ ನಟಿಸಿದ್ದಾರೆ. ಎರಡೇ ಹಾಡುಗಳಿರುವ ಚಿತ್ರ ಇದಾಗಿದ್ದು ವಕೀಲೆಯಾಗಿ ಪ್ರೇಮಾ ಕಾಣಿಸಿಕೊಳ್ಳಲಿದ್ದಾರೆ. ವಿಭಿನ್ನವಾಗಿರುವ ಸೆಟ್‌ನಲ್ಲಿ ಹಿರಿಯ ನಟ ಅಚ್ಯುತ್ ಕುಮಾರ್‌ ಜೊತೆಗಿನ ಸಂಭಾಷಣೆ ಚೆನ್ನಾಗಿದೆ, ಎಂಬ ಸಣ್ಣ ಸುಳಿವನ್ನೂ ನೀಡಿದ್ದಾರೆ. ವಿಕ್ರಮ್ ಪ್ರಭು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಪ್ರೇಮಾ ಮಾತು:
'ಈ ಸಿನಿಮಾ ಕಥೆ ಹೇಳಿದ್ದಾಗ ತುಂಬಾನೇ ವಿಭಿನ್ನ ಅನಿಸಿತ್ತು. ಏಕೆಂದರೆ ಸಿನಿಮಾದಲ್ಲಿ ಒಳ್ಳೆಯ ಮೆಸೇಜ್‌ ಇದೆ. ಇದರಿಂದ ನಾನು ತುಂಬಾನೇ ಖುಷಿ ಆದೆ. ವರ್ಕ್‌ ಕೂಡ ಯಾವುದೇ ಪ್ರೆಷರ್‌ ಇರಲಿಲ್ಲ. ತುಂಬಾನೇ ನೀಟ್ ಆಗಿ ಮಾಡಿದ್ದೀವಿ. ನಿರ್ದೇಶಕರ ಜೊತೆ ಕೆಲಸ ಮಾಡಿ ಖುಷಿ ಅಗಿದೆ. ಮೊದಲನೇ ಸಲ ಈ ತರ ಕ್ಯಾರೆಕ್ಟರ್‌ ಅನ್ನು ನಾನು ಮಾಡ್ತಾ ಇದ್ದೀನಿ. ಪಾತ್ರ ಡಿಫರೆಂಟ್ ಆಗಿದೆ. ನಿರ್ದೇಶಕರಿಗೆ ಧನ್ಯವಾಗಳನ್ನು ಹೇಳಬೇಕು. ಸಿನಿಮಾವನ್ನು ನಾನು ಎಂಜಾಯ್ ಮಾಡಿದೆ,' ಎಂದು ಪ್ರೇಮಾ ಪಾತ್ರದ ಬಗ್ಗೆ ಪ್ರೆಸ್‌ಮೀಟ್‌ನಲ್ಲಿ ಮಾತನಾಡಿದ್ದಾರೆ. 

'ನನ್ನ ಪಾತ್ರಕ್ಕೆ 15 ದಿನಗಳ ಚಿತ್ರೀಕರಣವಿತ್ತು. ಕೋರ್ಟ್‌ ಹಾಲ್‌ನ ಮೊದಲ ಸಲ ಈ ರೀತಿ ನೋಡಿದ್ದು. ನಿರ್ದೇಶಕರು ನನಗೆ ಟೈಮ್‌ ಕೊಟ್ಟರು .ಇದೇ ರೀತಿ ಪಾತ್ರ ಬೇಕು ಅಂತ. ಮೊದಲು ಭಯ ಆಯ್ತು. ಆಮೇಲೆ ಎಲ್ಲಾ ರೀತಿ ಪ್ರಿಪೇರ್ ಆದೆ. ಬೇರೆ ಯಾವ ಸಿನಿಮಾವನ್ನೂ ನೋಡಿ ಪ್ರಿಫರೆನ್ಸ್‌ ತೆಗೆದುಕೊಳ್ಳುವುದಿಲ್ಲ. ನನ್ನ ಸ್ಟೈಲ್‌ನಲ್ಲಿ ಸಿನಿಮಾಗೆ ಯಾವ ತರ ಬೇಕು ಹಾಗೆಯೇ ಮಾಡಿದ್ದೀನಿ. ನಾನು ಈ ರೀತಿ ಮಾಡುತ್ತಿರುವುದು ಮೊದಲ ಸಲ. ನಿಮಗೆ ಗೊತ್ತೇ ಇದೆ ನನ್ನ ಟೇಸ್ಟ್‌ ಆ ತರ ಕ್ರಿಯೇಟಿವಿಟಿ ಆಗಿಯೇ ಇರಬೇಕು. ಇಲ್ಲ ಅಂದ್ರೆ ನಾನು ಮಾಡೋಕೆ ಹೋಗಲ್ಲ. ಪ್ರೇಮಾ ಅವರೇ ಬೇಕು ಅಂತ ಬಂದಾಗ ನಿರ್ದೇಶಕರಿಗೆ ಗೊತ್ತಿರುತ್ತದೆ. ಆಮೇಲೆ ಪ್ರೋಗ್ರಾಂ ಕೂಡ ಹಾಗೇ ಇತ್ತು. ಈ ಡೇಟ್‌ನಲ್ಲಿ ಹೀಗೆ ಇರುತ್ತೆ ಅಂತ. ಹಾಗೇ ಮಾಡಿ ಮುಗಿಸಿದ್ದರು. ಸಿನಿಮಾದಲ್ಲಿ ಸಸ್ಪೆನ್ಸ್‌ ಇದೆ. ಒಂದು ಲೈನ್ ಬಿಟ್ಟುಕೊಟ್ರೆ ಇಡೀ ಸಿನಿಮಾ ಗೊತ್ತಾಗುತ್ತದೆ. ಚಿತ್ರದಲ್ಲಿ ಎರಡೇ ಹಾಡು ಇರುವುದು. ಆಮೇಲೆ ಬ್ಯಾಗ್ರೌಂಡ್ ಸಂಗೀತ ಇದೆ. ಅದು ಸಂಗೀತ ನಿರ್ದೇಶಕರ ಮೇಲೆ ಬಿಟ್ಟಿದೆ. ಸುಮ್ಮನೆ ಸಿನಿಮಾ ಮಾಡೋದು ಅಲ್ಲ. ಸಿನಿಮಾದಲ್ಲಿ ಮೆಸೇಜ್‌ ಕೂಡ ಇದೆ,' ಎಂದು ಪ್ರೇಮಾ ಹೇಳಿದ್ದಾರೆ.

Wedding Gift: ಲಾಯರ್ ಪಾತ್ರಕ್ಕೆ ಬಣ್ಣ ಹಚ್ಚಿದ ನಟಿ ಪ್ರೇಮಾ

'ನಾನು ಒಂದು ಟೇಕ್‌ ತೆಗೆದುಕೊಳ್ಳುವ ಮುನ್ನ ನಿರ್ದೇಶಕರ ಜೊತೆ ಮಾತನಾಡಿ discuss ಮಾಡುತ್ತೀನಿ. ಅವರು ಹೀಗೆ ಇರಬೇಕು ಅಂತ ವಿವರಿಸುತ್ತಾರೆ. ನಾನು ಮೊದಲು ಮಾನಿಟರ್ ಮಾಡ್ಕೊಳ್ತಿನಿ. ಕಾನ್ಫಿಡೆನ್ಸ್ ಹೆಚ್ಚಾಗಿದೆ. ತಕ್ಷಣ ಟೇಕ್‌ ತೆಗೆದುಕೊಳ್ಳುವೆ. ಶಾಟ್ ಆದ ಮೇಲೆ ನಾನು ಒಂದು ಕಡೆ ಕುಳಿತುಕೊಂಡು ನೆಕ್ಸ್ಟ್ ಡೈಲಾಗ್ ಏನು ಅಂತ ಪ್ರಿಪೇರ್ ಮಾಡಿಕೊಳ್ಳುತ್ತಿದ್ದೆ. ಟೋಣಿ ಅವರು ತುಂಬಾನೇ ಸಹಾಯ ಮಾಡಿದ್ದಾರೆ,' ಎಂದಿದ್ದಾರೆ. 

'ಜನ ಇನ್ನೂ ನನ್ನ ಮರ್ತಿಲ್ಲ. ಎಷ್ಟೋ ಮದ್ಯಮ ವಯಸ್ಸಿನವರು ನನ್ನ ಸಿನಿಮಾಗಳನ್ನು ನೆನಪಿಸಿಕೊಳ್ಳುತ್ತಾರೆ. ಚಂದ್ರಮುಖಿ, ಆಪ್ತಮಿತ್ರ ಯಜಮಾನ ಎಲ್ಲವೂ ಒಳ್ಳೆಯ ಸಿನಿಮಾಗಳ ಬಗ್ಗೆಯೇ ಮಾತನಾಡುತ್ತಾರೆ. ನಾನು ಯಾವ ಕ್ಲಾಸ್‌ಗೂ ಹೋಗಿ ಕಲಿತಿಲ್ಲ. ಡೈರೆಕ್ಟರ್‌ಗಳು ನನ್ನ ಕಲೆಯನ್ನು ಹೊರ ಹಾಕಿದ್ದಾರೆ. ಈ ನಿರ್ದೇಶಕರು ನನ್ನನ್ನು ಭೇಟಿ ಮಾಡಿ, ಈ ರೀತಿ ಪ್ರೋಗ್ರಾಂ ಲಿಸ್ಟ್‌ ತೋರಿಸಿದ್ದರು. ಯಾರೂ ನನಗೆ ಈ ರೀತಿ ಅಪ್ರೋಚ್ ಮಾಡಿಲ್ಲ. ಎರಡು ಕ್ಯಾಮೆರಾ ಇಟ್ಟು, ನನ್ನ ದೃಶ್ಯ ಬೇಗ ಮುಗಿಸಿದ್ದರು. ತುಂಬಾನೇ ಚೆನ್ನಾಗಿ ಪ್ಲ್ಯಾನ್ ಮಾಡಿದ್ದರು. ಅವರಲ್ಲಿದ್ದ ಕಾನ್ಫಿಡೆನ್ಸ್‌ ನಮಗೂ ಬಂತು,' ಎಂದು ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.