ಸುದೀಪ್‌ ಪಾತ್ರದ ಚಿತ್ರೀಕರಣ ಕಾಡಿನಲ್ಲೂ ನಡೆಯುವುದರಿಂದ ಕಾಡಿನ ಸೆಟ್‌ ನಿರ್ಮಾಣ ಮಾಡಲಾಗುತ್ತಿದೆ.

‘ನಮ್ಮ ನಿರೀಕ್ಷೆಗೆ ತಕ್ಕಂತೆ ಸೆಟ್‌ ನಿರ್ಮಾಣ ಆಗಿದೆ. ಎಲ್ಲಾ ರೀತಿಯ ಸುರಕ್ಷತೆಗಳನ್ನು ತೆಗೆದುಕೊಂಡೇ ಸೆಟ್‌ನಲ್ಲಿ ಕೆಲಸ ಮಾಡಲು ಕಾರ್ಮಿಕರು ಹಾಗೂ ತಂತ್ರಜ್ಞರು ಹಾಜರಿ ಹಾಕುತ್ತಿದ್ದಾರೆ. ಯಾರಿಗೂ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಕಂಡುಬಂದಿಲ್ಲ. ಅಷ್ಟರ ಮಟ್ಟಿಗೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿತ್ತು. ಇನ್ನೆರಡು ದಿನದಲ್ಲಿ ಸೆಟ್‌ ಕೆಲಸ ಸಂಪೂರ್ಣವಾಗಿ ಮುಕ್ತಾಯವಾಗಲಿದೆ. ಕೇವಲ ಕಾಡಿನ ಸೆಟ್‌ ಫೋಟೋಗಳನ್ನು ಮಾತ್ರ ಬಹಿರಂಗ ಮಾಡುತ್ತಿದ್ದೇವೆ. ಒಳಾಂಗಣದಲ್ಲಿ ನಿರ್ಮಿಸಿರುವ ಕಲರ್‌ಫುಲ್‌ ಸೆಟ್‌ಗಳು ಬೇರೆ ಇವೆ’ ಎಂಬುದು ಚಿತ್ರದ ನಿರ್ಮಾಪಕ ಜಾಕ್‌ ಮಂಜು ವಿವರಣೆ.

ಅನೂಪ್‌ ಭಂಡಾರಿ ನಿರ್ದೇಶಿಸಿ, ಸುದೀಪ್‌ ನಾಯಕನಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ಯಾವಾಗ ಶೂಟಿಂಗ್‌ ಎಂಬುದು ಚಿತ್ರತಂಡಕ್ಕೆ ಸ್ಪಷ್ಟತೆ ಇಲ್ಲ. ಯಾಕೆಂದರೆ ಮತ್ತೆ ಲಾಕ್‌ಡೌನ್‌ ಮಾಡುವ ಸಾಧ್ಯತೆಗಳು ಕೇಳಿ ಬರುತ್ತಿರುವುದೇ ಈ ಅನುಮಾನಕ್ಕೆ ಕಾರಣ.

 

‘ನಿರ್ಮಾಪಕನಾಗಿ ಶೂಟಿಂಗ್‌ಗೆ ಬೇಕಾದ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿದ್ದೇನೆ. ನಿರ್ದೇಶಕರ ತಂಡ ಕೂಡ ರೆಡಿ ಇದೆ. ಆದರೆ, ಮತ್ತೊಮ್ಮೆ ಲಾಕ್‌ಡೌನ್‌ ಆಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಹಾಗೊಂದು ವೇಳೆ ಮತ್ತೆ ಲಾಕ್‌ಡೌನ್‌ ಆದರೆ, ಶೂಟಿಂಗ್‌ ಮಾಡಲು ಕಷ್ಟವಾಗುತ್ತದೆ. ಹೀಗಾಗಿ ಯಾವಾಗ ಶೂಟಿಂಗ್‌ ಆರಂಭವಾಗುತ್ತದೆ ಎಂಬುದು ನಾಲ್ಕೈದು ದಿನಗಳಲ್ಲಿ ಗೊತ್ತಾಗಲಿದೆ’ ಎನ್ನುತ್ತಾರೆ ಜಾಕ್‌ ಮಂಜು. ಈ ನಡುವೆ ಚಿತ್ರಕ್ಕೆ ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌ ಜತೆಯಾಗಿದ್ದಾರೆ.