ಈ ಹಿಂದೆ ಬಿಡುಗಡೆಯಾಗಿ ಸೂಪರ್ ಹಿಟ್ ಎನಿಸಿಕೊಂಡಿದ್ದ ಚಿತ್ರಗಳು, ಈಗ ಹೊಸ ತಲೆಮಾರಿನ ಪ್ರೇಕ್ಷಕರಿಗೆ ಪರಿಚಯವಾಗುತ್ತಿವೆ. ಅಲ್ಲದೆ, ಹಳೆಯ ನೆನಪುಗಳನ್ನು ಮೆಲುಕು ಹಾಕಲು ಹಿರಿಯ ಪ್ರೇಕ್ಷಕರಿಗೆ ಇದು ಸುವರ್ಣಾವಕಾಶ. ಇದರಿಂದಾಗಿ..
ಇದೀಗ ಭಾರತೀಯ ಚಿತ್ರರಂಗದಲ್ಲಿ ಮರು ಬಿಡುಗಡೆಯ ಭರಾಟೆ! ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿರುವ ಹಳೆಯ ಚಿತ್ರಗಳು! ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಬಾಲಿವುಡ್ ಚಿತ್ರಗಳು ಮರು ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿವೆ. ಹಳೆಯ ಜನಪ್ರಿಯ ಚಿತ್ರಗಳನ್ನು ಮತ್ತೆ ತೆರೆಗೆ ತರುವ ಟ್ರೆಂಡ್ ಹೆಚ್ಚಾಗುತ್ತಿದ್ದು, ಇದು ನಿರ್ಮಾಪಕರಿಗೆ ಲಾಭದಾಯಕವಾಗಿದೆ.
ಈ ಹಿಂದೆ ಬಿಡುಗಡೆಯಾಗಿ ಸೂಪರ್ ಹಿಟ್ ಎನಿಸಿಕೊಂಡಿದ್ದ ಚಿತ್ರಗಳು, ಈಗ ಹೊಸ ತಲೆಮಾರಿನ ಪ್ರೇಕ್ಷಕರಿಗೆ ಪರಿಚಯವಾಗುತ್ತಿವೆ. ಅಲ್ಲದೆ, ಹಳೆಯ ನೆನಪುಗಳನ್ನು ಮೆಲುಕು ಹಾಕಲು ಹಿರಿಯ ಪ್ರೇಕ್ಷಕರಿಗೆ ಇದು ಸುವರ್ಣಾವಕಾಶ. ಇದರಿಂದಾಗಿ ಚಿತ್ರಮಂದಿರಗಳು ಮತ್ತೆ ಗಿಜಿಗುಡುತ್ತಿವೆ. ಈ ಟ್ರೆಂಡ್ ಈಗ ಕನ್ನಡದಲ್ಲಿ ಕೂಡ ಶುರುವಾಗುವ ಎಲ್ಲಾ ಲಕ್ಷಣಗಳೂ ಇವೆ. ಹಾಗಿದ್ದರೆ ಅದೇನು ಅಂತ ನೋಡಿ..
ಬಾಲಿವುಡ್ ಓಲ್ಡ್ ಸಿನಿಮಾಗಳು ಮತ್ತೆ ತೆರೆಗೆ ಬರುತ್ತಿವೆ, ಸೂಪರ್ ಹಿಟ್ ಆಗ್ತಿವೆ! ಕಾರಣವೇನು..?!
ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಈ ಮರು ಬಿಡುಗಡೆಯ ಹಿಂದಿನ ಮುಖ್ಯ ಕಾರಣವೆಂದರೆ, ಪ್ರೇಕ್ಷಕರು ಹಳೆಯ ಕ್ಲಾಸಿಕ್ ಚಿತ್ರಗಳನ್ನು ದೊಡ್ಡ ಪರದೆಯ ಮೇಲೆ ನೋಡಲು ಬಯಸುವುದು. ಅಲ್ಲದೆ, ಚಿತ್ರಮಂದಿರಗಳಲ್ಲಿ ಉತ್ತಮ ಗುಣಮಟ್ಟದ ಪ್ರದರ್ಶನ ಲಭ್ಯವಿರುವುದರಿಂದ ಪ್ರೇಕ್ಷಕರು ಆಕರ್ಷಿತರಾಗುತ್ತಿದ್ದಾರೆ. ಸದ್ಯಕ್ಕೆ ಈ ಟ್ರೆಂಡ್ ಬಾಲಿವುಡ್‌ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಚಿತ್ರಗಳು ಮರು ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದು ಚಿತ್ರರಂಗಕ್ಕೆ ಹೊಸ ಹುರುಪು ನೀಡಿದೆ.
ಸದ್ಯ ಈ ಟ್ರೆಂಡ್ ಕೇವಲ ಬಾಲಿವುಡ್‌ಗೆ ಸೀಮಿತ ಎಂದು ಹೇಳುವುದು ಅಪರಾಧ ಎನ್ನಬಹುದು. ಏಕೆಂದರೆ, ಕನ್ನಡದಲ್ಲಿ ಕೂಡ ಹಳೆಯ ಚಿತ್ರಗಳು ಆಗಾಗ ಬಿಡುಗಡೆ ಆಗುತ್ತಿವೆ. ಅದರಲ್ಲೂ ಮುಖ್ಯವಾಗಿ ಉಪೇಂದ್ರ ನಿರ್ದೇಶನ, ಶಿವರಾಜ್‌ಕುಮಾರ್ ನಟನೆ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣದ 'ಓಂ' ಚಿತ್ರ ಇದಕ್ಕೆ ಕನ್ನಡದಲ್ಲಿ ಅತ್ಯುತ್ತಮ ಉದಾಹರಣೆ ಎನ್ನಬಹುದು. 1995 ರಲ್ಲಿ ಮೊದಲು ಬಿಡುಗಡೆಯಾಗಿದ್ದ ಈ ಚಿತ್ರವು ಬಹಳಷ್ಟು ಮರುಬಿಡುಗಡೆ ಕಂಡಿದೆ. ಜೊತೆಗೆ, ಯಶಸ್ವಿ ಕೂಡ ಆಗಿದೆ.
ಅಲ್ಲು ಅರ್ಜುನ್ ನಟನೆಯಲ್ಲಿ 'ಪುಷ್ಪಾ 3' ಬರೋದು ಕನ್ಫರ್ಮ್, ಜೊತೆಯಲ್ಲಿ ರಶ್ಮಿಕಾ ಇರ್ತಾರಾ?
ಅಷ್ಟೇ ಅಲ್ಲ, ನಟ ದರ್ಶನ್ ಅವರ ನವಗ್ರಹ ಹಾಗೂ ಕರಿಯ ಹಾಗೂ 'ನನ್ನ ಪ್ರೀತಿಯ ರಾಮು' ಚಿತ್ರಗಳು ಮತ್ತೆ ಬಿಡುಗಡೆ ಆಗಿ ಭಾರೀ ಕಲೆಕ್ಷನ್ ಮಾಡಿವೆ. ಜೊತೆಗೆ ಇದೀಗ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ 'ಅಪ್ಪು' ಚಿತ್ರವು ರೀರಿಲೀಸ್ ಆಗಿದೆ. ಪುನೀತ್ ಅವರ 50ನೇ ಹುಟ್ಟುಹಬ್ಬದ ಪ್ರಯುಕ್ತ ಈ ಚಿತ್ರವು ಮಾರ್ಚ್ 14ರಂದು ಮತ್ತೆ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
