Asianet Suvarna News Asianet Suvarna News

ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ ರಚಿತಾ ರಾಮ್ ಅಕ್ಕ!

ವಿದೇಶದಿಂದ ತವರು ಮನೆಗೆ ಆಗಮಿಸಿ ಹಾಲಿಡೆ ಎಂಜಾಯ್ ಮಾಡುತ್ತಿರುವ ನಿತ್ಯಾ ರಾಮ್.....

Kannada Nithya Ram visits Shri Ghati Subrahmanya Temple vcs
Author
Bangalore, First Published Oct 25, 2021, 4:20 PM IST
  • Facebook
  • Twitter
  • Whatsapp

ಕನ್ನಡ ಚಿತ್ರರಂಗದಲ್ಲಿರುವ (Sandalwood) ಪ್ರತಿಭಾನ್ವಿತ ನಟಿಯರು, ಸಹೋದರಿಯರು ಅಂದ್ರೆ ನಿತ್ಯಾ ರಾಮ್ (Nithya Ram)- ರಚಿತಾ ರಾಮ್ (Rachita Ram). ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ವಿದೇಶದಲ್ಲಿ ನೆಲೆಸಿರುವ ನಿತ್ಯಾ ರಾಮ್ ಇದೀಗ ಬೆಂಗಳೂರಿನಲ್ಲಿರುವ (Bengaluru) ತವರು ಮನೆಗೆ ಬಂದಿದ್ದಾರೆ. ಸಹೋದರಿ, ಫ್ಯಾಮಿಲಿ (Family) ಮತ್ತು ಸ್ನೇಹಿತರು (friends) ಎಂದು ಸಮಯ ಕಳೆಯುತ್ತಿದ್ದಾರೆ. ಈ ನಡುವೆ ತಾವು ಮಿಸ್ ಮಾಡಿಕೊಂಡ ಸ್ಪೆಷಲ್ ಜಾಗಗಳಿಗೆ ಭೇಟಿ ನೀಡುತ್ತಿದ್ದಾರೆ. 

ಅಭಿಮಾನಿಗಳು ಬೇಡಿದರೂ ವಿದೇಶದಲ್ಲಿರುವ ರಚಿತಾ ರಾಮ್‌ ಸಹೋದರಿ ನಿತ್ಯಾ ರಾಮ್ ಪ್ರತಿಕ್ರಿಯಿಸುತ್ತಿಲ್ಲ ಯಾಕೆ?

ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿರುವ ಘಾಟಿ ಸುಭ್ರಹ್ಮಣ ಕ್ಷೇತ್ರಕ್ಕೆ (Shri Ghati Subrahmanya Temple) ನಿತ್ಯಾ ರಾಮ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇಗುಲದಲ್ಲಿ ಸಮಯ ಕೆಳದ ನಿತ್ಯ ಹೊರಗೆ ಬಂದು ಸಣ್ಣ ಇನ್‌ಸ್ಟಾಗ್ರಾಂ ರೀಲ್ (Instagram Reel) ಕೂಡ ಮಾಡಿದ್ದಾರೆ. ಡಲ್ ಪಿಂಕ್ ಆ್ಯಂಡ್ ಬ್ಲಾಕ್ ಬಣ್ಣದ ಮೈಸೂರು ಸಿಲ್ಕ್ ಸೀರೆ (Saree) ಧರಿಸಿ ಮೆಟ್ಟಿಲಿನಿಂದ ಇಳಿದು ಬರುತ್ತಿರುವ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. 

Kannada Nithya Ram visits Shri Ghati Subrahmanya Temple vcs

'Temples are an expression of god’s love. ಇಂದು ಘಾಟಿ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ ನೀಡಿದೆ,' ಎಂದು ಬರೆದು ಕೊಂಡಿದ್ದಾರೆ. ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ (Rajvardhan) ಹಾರ್ಟ್ ಸಿಂಬಲ್‌ನ ಕಾಮೆಂಟ್ ಮಾಡಿದ್ದಾರೆ. ಹಲವು ತಿಂಗಳ ನಂತರ ನಿತ್ಯಾರನ್ನು ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿರುವುದಕ್ಕೆ ಫಾಲೋವರ್ಸ್ ಸಂಭ್ರಮ ವ್ಯಕ್ತ ಪಡಿಸಿದ್ದಾರೆ. 

ಸೆಪ್ಟೆಂಬರ್‌ (September) ತಿಂಗಳಿನಲ್ಲಿ ನಿತ್ಯಾ ರಾಮ್ ಬೆಂಗಳೂರಿಗೆ ಆಗಮಿಸಿರುವ ವಿಚಾರವನ್ನು ತಂಗಿ ರಚಿತಾ ರಾಮ್ ಸ್ಪೆಷಲ್ ಆಗಿ ರಿವೀಲ್ ಮಾಡಿದ್ದರು. ಧನುಷ್ (Danush) ಅಭಿನಯದ ಕೋಲಾವೆರೆಡಿ ಡಿ ಹಾಡಿಗೆ ಅಕ್ಕನ ಜೊತೆಗಿರುವ ವಿಡಿಯೋ ಹಂಚಿಕೊಂಡಿದ್ದರು. 'ಸೂಪರ್ ಮಾಮಾ ರೆಡಿ  1...2...3..' ಎಂದು ಹಾಡು ಬರುತ್ತಿದ್ದಂತೆ ನಿತ್ಯಾ ಕ್ಯಾಮೆರಾ ಮುಂದೆ ಬಂದಿದ್ದಾರೆ. 

ಡಿಂಪಲ್ ಕ್ವೀನ್ ರಚಿತಾ ರಾಮ್ ಸಹೋದರಿ ಈ ಕಿರುತೆರೆ ನಟಿ!

ನಿತ್ಯಾ ಕೊನೆಯದಾಗಿ ನಟಿಸಿದ ಧಾರಾವಾಹಿ ನಂದಿನಿ (Nandini). ಜನನಿ ಪಾತ್ರದ ಮೂಲಕ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದರು. ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಉದ್ಯಮಿ ಗೌತಮ್ (Gautham) ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಲೈಮ್‌ಲೈಟಿನಿಂದ ದೂರ ಉಳಿದಿದ್ದಾರೆ. ಆದರೆ ಸೋಷಿಯಲ್ ಮೀಡಿಯಾದ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ.

Follow Us:
Download App:
  • android
  • ios