ನಿಖಿಲ್ ಕುಮಾರಸ್ವಾಮಿ -ರೇವತಿ candid ವಿಡಿಯೋ; ನಾಚಿ ಬೆರೆಗಾದ ಜೋಡಿ!
ಪತ್ನಿ ರೇವತಿ ಜೊತೆ ಕ್ಯಾಂಡಿಡ್ ವಿಡಿಯೋ ಶೇರ್ ಮಾಡಿಕೊಂಡ ನಿಖಿಲ್. ಇಬ್ಬರನ್ನು ಸಾಂಪ್ರದಾಯಿಕೆ ಉಡುಗೆಯಲ್ಲಿ ಕಂಡು ಕೊಂಡಾಡಿದ ಅಭಿಮಾನಿಗಳು.
ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಕಾರಣ ಏನೇ ಅಪ್ಲೋಡ್ ಮಾಡಿದ್ದರೂ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಅದರಲ್ಲೂ ಪತ್ನಿ ರೇವತಿ ಜೊತೆಗಿದ್ದರಂತೂ ಟ್ರೆಂಡಿಂಗ್ ಸುದ್ದಿಯಾಗುತ್ತದೆ.
ಚಿತ್ರರಂಗದ ನಾಯಕತ್ವ ಕೊರತೆ ನೀಗಿಸಿದ ಶಿವಣ್ಣ: ನಿಖಿಲ್ ಕುಮಾರ್
ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ನವ ಜೋಡಿಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳ್ಳಿಸುತ್ತಿರುವ ಕ್ಯಾಂಡಿಡ್ ವಿಡಿಯೋ ಶೇರ್ ಮಾಡಿದ್ದಾರೆ. ಹಸಿರು ರೇಶ್ಮೆ ಸೀರೆಯಲ್ಲಿ ರೇವತಿ ಹಾಗೂ ಕ್ರೀಮ್ ಕಲರ್ ಶರ್ಟ್‌ನಲ್ಲಿ ನಿಖಿಲ್ ಮಿಂಚುತ್ತಿದ್ದಾರೆ.
'ಸರ್ ನೀವು ಮೇಡಂ ಜೊತೆ ಸಿನಿಮಾ ಮಾಡಿ. ಯಾವ ಬಾಲಿವುಡ್ ಜೋಡಿಗೂ ಕಮ್ಮಿ ಇಲ್ಲ' ಎಂದು ಹಾಗೂ 'ಹೆಣ್ಣು ಅಂದ್ರೆ ಹೀಗಿರಬೇಕು. ಇವತ್ತಿನ ತರ್ಬೋಕಿ ಶೋಕಿ ಮಾಡುವ ಹುಡುಗೀರು ಇವರನ್ನು ನೋಡಿ ಕಲಿಯಬೇಕು' ಎಂದು ಕಾಮೆಂಟ್ ಮಾಡಿದ್ದಾರೆ.
ಪತ್ನಿ ಕೈ ರುಚಿ ಸವಿದಿಲ್ಲ ಎಂದ ನಿಖಿಲ್ ಕುಮಾರಸ್ವಾಮಿಗೆ ರೇವತಿ ಮಾಡಿಕೊಟ್ಟೇಬಿಟ್ರು ಚಿಕನ್?
ಕೆಲ ದಿನಗಳ ಹಿಂದೆ ನಿಖಿಲ್ ತಮ್ಮ ಮುಂದಿನ ಚಿತ್ರದ ಹೆಸರು ಹಾಗೂ ಪೋಸ್ಟರ್ ಲುಕ್ ರಿವೀಲ್ ಮಾಡಿದ್ದಾರೆ. ಕೇವಲ 35 ದಿನಗಳ ಶೂಟಿಂಗ್ ಬಾಕಿ ಉಳಿದಿದ್ದು ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭ ಮಾಡಲಿದ್ದಾರೆ ಎನ್ನಲಾಗಿದೆ.