ಆರ್‌ ಕೇಶವಮೂರ್ತಿ

ಚಿತ್ರರಂಗಕ್ಕೆ ನಟ ಶಿವರಾಜ್‌ಕುಮಾರ್‌ ಅವರು ನಾಯಕತ್ವ ಬಗ್ಗೆ ಏನು ಹೇಳುತ್ತೀರಿ?

ಕನ್ನಡ ಚಿತ್ರರಂಗಕ್ಕೆ ಶಿವಣ್ಣ ಅವರ ಕೊಡುಗೆ ದೊಡ್ಡದು. ನಾನು ಅವರನ್ನು ‘ಓಂ’ ಚಿತ್ರದಿಂದ ನೋಡಿದ್ದೇನೆ. ನಮ್ಮ ತಂದೆ ಕೂಡ ಶಿವಣ್ಣ ಅವರ ಜತೆ ಎರಡು ಚಿತ್ರಗಳನ್ನು ನಿರ್ಮಿಸಿದ್ದಾರೆ. ಶಿವಣ್ಣ, ಪುನೀತ್‌ರಾಜ್‌ಕುಮಾರ್‌ ಅಂದರೆ ನಮಗೂ ಪ್ರೀತಿ. ಈಗ ಶಿವಣ್ಣ ಕನ್ನಡ ಚಿತ್ರರಂಗಕ್ಕೆ ಸಾರಥಿ ಆಗುತ್ತಿದ್ದಾರೆ. ಅವರ ನಾಯಕತ್ವ ನನಗೆ ಖುಷಿ ಕೊಟ್ಟಿದೆ. ಶಿವಣ್ಣ ಇಡೀ ಚಿತ್ರರಂಗವನ್ನು ಜತೆ ಮಾಡಿಕೊಂಡಿದ್ದಾರೆ. ಶಿವಣ್ಣ ಕೇವಲ ತೋರಿಕೆಯ ಲೀಡರ್‌ ಅಲ್ಲ. ಅವರು ಹೇಳಿದ್ದನ್ನು ಮಾಡುತ್ತಾರೆ. ಚಿತ್ರರಂಗದ ಯಾವುದೇ ಒಳ್ಳೆಯ ಕೆಲಸಗಳಿಗೆ ಶಿವಣ್ಣನ ಜತೆ ನಾನೂ ಕೂಡ ಇರುವೆ.

ಸ್ಯಾಂಡಲ್‌ವುಡ್‌ ರೈಡರ್‌ ಆಗುತ್ತಿದ್ದೀರಾ?

ಹಾಗೇನು ಇಲ್ಲ. ಅದು ಸಿನಿಮಾ ಹೆಸರು. ಕ್ರೀಡೆ, ಆ್ಯಕ್ಷನ್‌ ಹಾಗೂ ಫ್ಯಾಮಿಲಿ ಸೆಂಟ್‌ಮೆಂಟ್‌ ಇರುವ ಈಗಿನ ಯಂಗ್‌ ಜನರೇಷನ್‌ ಕತೆ ಎಂಬುದು ಪೋಸ್ಟರ್‌ ಹಾಗೂ ಟೈಟಲ್‌ ನೋಡಿದರೆ ನಿಮಗೆ ಗೊತ್ತಾಗುತ್ತದೆ.

ಪತ್ನಿ ಕೈ ರುಚಿ ಸವಿದಿಲ್ಲ ಎಂದ ನಿಖಿಲ್‌ ಕುಮಾರಸ್ವಾಮಿಗೆ ರೇವತಿ ಮಾಡಿಕೊಟ್ಟೇಬಿಟ್ರು ಚಿಕನ್‌? 

ಇಲ್ಲಿ ನಿಮ್ಮ ಪಾತ್ರ ಹೇಗಿರುತ್ತದೆ, ಯಾವ ರೀತಿಯ ಕತೆ?

ಒಂದು ಯಂಗ್‌ ಜನರೇಷನ್‌ ರೋಲ್‌. ಚುನಾವಣೆಗಿಂತ ಮೊದಲು ಒಪ್ಪಿಕೊಂಡ ಕತೆ ಇದು. ಆದರೆ, ಚುನಾವಣೆ ನಂತರ ಸೆಟ್ಟೇರಿದ್ದರಿಂದ ಕೊಂಚ ಬದಲಾವಣೆ ಮಾಡಿಕೊಂಡಿದ್ದೇವೆ.

ಎಷ್ಟುಚಿತ್ರೀಕರಣ ಆಗಿದೆ, ಮತ್ತೆ ಶೂಟಿಂಗ್‌ ಯಾವಾಗ?

ಶೇ.60 ಭಾಗ ಚಿತ್ರೀಕರಣ ಮುಗಿಸಿದ ನಂತರ ಲಾಕ್‌ಡೌನ್‌ ಶುರುವಾಯಿತು. 40 ದಿನ ಶೂಟಿಂಗ್‌ ಬಾಕಿ ಇದೆ. ಮುಂದಿನ ತಿಂಗಳು ಮೊದಲ ವಾರದಿಂದ ಚಿತ್ರೀಕರಣಕ್ಕೆ ಹೋಗಲಿದ್ದೇವೆ.

"

ಇದ್ದಕ್ಕಿದ್ದಂತೆ ಚಿತ್ರದ ಟೈಟಲ್‌ ರಿವೀಲ್‌ ಮಾಡಿದ ಉದ್ದೇಶ?

ಮತ್ತೆ ಶೂಟಿಂಗ್‌ ಮೈದಾನಕ್ಕಿಳಿಯುವ ವೇಳೆ ಉತ್ಸಾಹ ತುಂಬುವ ನಿಟ್ಟಿನಲ್ಲಿ ಚಿತ್ರದ ಟೈಟಲ್‌ ಹಾಗೂ ಮೋಷನ್‌ ಪೋಸ್ಟರ್‌ ಬಿಡುಗಡೆ ಮಾಡಿದ್ದೇವೆ.

ಈ ಬಾರಿಯೂ ಬಹುಭಾಷೆಯಲ್ಲಿ ಬರುತ್ತಿದ್ದೀರಾ?

ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದೆ. ನಿರ್ದೇಶಕ ವಿಜಯ್‌ ಕುಮಾರ್‌ ಕೊಂಡ ಯೂನಿವರ್ಸಲ್‌ ಕತೆ ಮಾಡಿಕೊಂಡಿದ್ದಾರೆ. ಎಲ್ಲ ಭಾಷಿಕರಿಗೂ ಇದು ಕನೆಕ್ಟ್ ಆಗುತ್ತದೆಂಬ ಭರವಸೆ ಇದೆ. ಲಹರಿ ಆಡಿಯೋ ದೊಡ್ಡ ಹೆಸರು ಇರುವ ಸಂಸ್ಥೆ. ಹೀಗಾಗಿ ತುಂಬಾ ಭರವಸೆ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ.

ನಿಖಿಲ್ ಕುಮಾರಸ್ವಾಮಿ ರೈಡರ್ ಮೋಷನ್ ಪೋಸ್ಟರ್ ರಿಲೀಸ್..! 

ಬೇರೆ ಸಿನಿಮಾ ಕತೆ ಕೇಳಿದ್ದೀರಾ, ಯಾವಾಗ ಶುರುವಾಗುತ್ತದೆ?

‘ರೈಡರ್‌’ ಚಿತ್ರ ಜನವರಿ ಹೊತ್ತಿಗೆ ಮುಗಿಸುತ್ತೇವೆ. ಫೆಬ್ರವರಿಯಿಂದ ಮತ್ತೊಂದು ಚಿತ್ರ ಸೆಟ್ಟೇರಲಿದೆ. ಹೊಸ ಚಿತ್ರದ ಕತೆ ನಾಲ್ಕೈದು ತಿಂಗಳಿನಿಂದ ನಡೆಯುತ್ತಿದೆ. ವಿಭಿನ್ನವಾಗಿರುತ್ತದೆ. ಪೆಪ್ಪರ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತೇನೆ.

ಮುಂದೆ ಚಿತ್ರಗಳ ಆಯ್ಕೆಯಲ್ಲಿ ಪತ್ನಿ ರೇವತಿ ಪಾತ್ರವೂ ಇರುತ್ತದೆಯೇ?

ಖಂಡಿತ ಇರಲ್ಲ. ಅವರಿಗೆ ಸಿನಿಮಾ ನೋಡುವುದು ಮಾತ್ರ ಗೊತ್ತು. ಸಿನಿಮಾಗಳನ್ನು ನೋಡಿ ಸಣ್ಣಪುಟ್ಟಅಭಿಪ್ರಾಯಗಳನ್ನು ಹೇಳಬಹುದು ಅಷ್ಟೆ. ನಾನು ಮಾಡುವ ಸಿನಿಮಾ, ಕತೆಗಳ ಆಯ್ಕೆಯಲ್ಲಿ ನನ್ನದೇ ನಿರ್ಧಾರ. ಹೀಗಾಗಿ ನನ್ನ ಮನೆಯವರು ಸಿನಿಮಾ ವಿಚಾರದಲ್ಲಿ ಹೆಚ್ಚು ಇನ್‌ವಾಲ್ವಾ ಆಗಲ್ಲ. ಆದರೆ, ತೆರೆ ಮೇಲೆ ನಾನು ಹೇಗೆ ಕಾಣಿಸಿಕೊಳ್ಳಹುದು ಅಂತ ಅಭಿಪ್ರಾಯ ಹೇಳುತ್ತಾರೆ ಅಷ್ಟೆ.

ಈ ಸಂಕಷ್ಟದಿನಗಳನ್ನು ನೀವು ಹೇಗೆ ನೋಡುತ್ತೀರಿ?

ಪ್ರತಿಯೊಬ್ಬರ ಜೀವನಕ್ಕೂ ಒಂದು ಕ್ವಶ್ಚನ್‌ ಮಾರ್ಕ್ ಇಟ್ಟಿದೆ. ನಾವು ಉತ್ತರ ಕಂಡುಕೊಳ್ಳುವಂತೆ ಸಾಗಬೇಕಿದೆ. ಇಂಥ ಸಂಕಷ್ಟಗಳು ಮತ್ತೆ ಬರಲ್ಲ ಎನ್ನುವ ಗ್ಯಾರಂಟಿ ಇಲ್ಲ. ಇದನ್ನ ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕಿದೆ.

ಲಾಡ್‌ಡೌನ್‌ ಸಮಯದಲ್ಲಿ ಸಿನಿಮಾ ಕಾರ್ಮಿಕರಿಗೆ ಆರ್ಥಿಕ ನೆರವು ನೀಡಿದ್ರರಲ್ಲ?

ಅದನ್ನು ನೆರವು ಅಂತ ಹೇಳಬೇಡಿ. ಅದು ನನ್ನ ಕರ್ತವ್ಯ. ಕಾರ್ಮಿಕರ ಕಷ್ಟಗಳನ್ನು ನಾನು ಕಣ್ಣಾರೆ ಕಂಡವನು. ಅವರಿಗೆ ಯಾವುದೇ ತೊಂದರೆ ಇಲ್ಲದೆ ನೇರವಾಗಿ ತಲುಪಬೇಕು ಎನ್ನುವ ಕಾರಣಕ್ಕೆ ನಾನೇ ಮುಂದೆ ನಿಂತು ಅವರ ಅಕೌಂಟ್‌ಗಳಿಗೆ ನನ್ನಿಂದ ಸಾಧ್ಯವಾದಷ್ಟುಕೊಟ್ಟೆ. ಇದರಿಂದ ಅವರಿಗೇನೋ ದೊಡ್ಡ ಸಹಾಯ ಮಾಡಿದ್ದೇನೆ ಎಂದುಕೊಳ್ಳುವುದು ತಪ್ಪು.

ಮೈಸೂರಿನ 'ಅರ್ಜುನ' ಹಾಗೂ 'ದುರ್ಗಾಪರಮೇಶ್ವರಿ'ಯೊಂದಿಗೆ ನಿಖಿಲ್ ಕುಮಾರಸ್ವಾಮಿ ದಂಪತಿ!

ನೀವು ನೋಡಿದ ಸಿನಿಮಾ ಕಾರ್ಮಿಕರು, ತಂತ್ರಜ್ಞರ ಸ್ಥಿತಿ ಹೇಗಿದೆ?

ಶೂಟಿಂಗ್‌ ಸೆಟ್‌ಗೆ ಕಾರ್ಮಿಕರು, ತಂತ್ರಜ್ಞರು ನಮಗಿಂತ ಮೊದಲು ಬರುತ್ತಾರೆ. ಸಂಜೆ ಮನೆಗೆ ನಮಗಿಂತ ತಡವಾಗಿ ಹೋಗುತ್ತಾರೆ. ಹಳ್ಳಿ ಪ್ರದೇಶಗಳಿಂದ ಬಂದ ಹುಡುಗರೇ ಜಾಸ್ತಿ ಇದ್ದಾರೆ. ಅವರ ಜೀವನಕ್ಕೆ ಏನಾದರೆ ಮಾಡಬೇಕು ಎಂಬುದು ಆಸೆ. ತೆರೆ ಮೇಲೆ ಹೆಸರೇ ಹಾಕಿಸಿಕೊಳ್ಳದೆ ಕೆಲಸ ಮಾಡುವ ಸಾವಿರಾರು ಮಂದಿ ಇದ್ದಾರೆ. ಇವರು ಉಳಿದರೇ ನಮ್ಮ ಚಿತ್ರರಂಗ ಉಳಿಯುತ್ತದೆ.