ಮೆಡಿಕಲ್‌ ಕ್ಷೇತ್ರದಲ್ಲಿರುವ ಗಣಪತಿ ಪಾಟೀಲ್‌ ಬೆಳಗಾವಿ ಪ್ರಸ್ತುತ ನ್ಯೂಜಿಲೆಂಡ್‌ನಲ್ಲಿ ವಾಸವಾಗಿದ್ದಾರೆ. ತುಂಬಾ ವರ್ಷಗಳಿಂದಲೂ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕು ಎಂದೆನಿಸಿದಾಗ ‘ಮುಖವಾಡ ಇಲ್ಲದವನು 84’ ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ.

Act 1978 ಟ್ರೈಲರ್ ಬಿಡುಗಡೆ ಮಾಡಿದ ಅಪ್ಪು, ಇಲ್ಲಿ ನೋಡಿ ವಿಡಿಯೋ 

‘ಎರಡು ವರ್ಷದ ಹಿಂದೆ ಶಿವಕುಮಾರ್‌ ಪರಿಚಯ ಆಯಿತು. ಸಿನಿಮಾ ಮಾಡುವ ಬಗ್ಗೆ ನಿರ್ಧಾರ ಅಂತಿಮವಾಗುತ್ತಿದ್ದಂತೆ, ಒಂದೇ ವಾರದಲ್ಲಿ ಶೂಟಿಂಗ್‌ಗೆ ತಯಾರಿ ನಡೆಸಿ 40 ದಿನದಲ್ಲಿ ಚಿತ್ರೀಕರಣವನ್ನೂ ಮುಗಿಸಿದೆವು. ವಿಭಿನ್ನ ಶೈಲಿಯ ಸಿನಿಮಾ ಇದು. ಡೈಲಾಗ್‌ಗಳಲ್ಲಿ ತುಂಬಾ ಅರ್ಥವಿದೆ’ ಎಂದರು ಗಣಪತಿ ಪಾಟೀಲ್‌ ಬೆಳಗಾವಿ.

 

ನಿರ್ದೇಶನದ ಜತೆಗೆ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ ಶಿವಕುಮಾರ್‌ ಕಡೂರು. ‘ಡ್ರೆಸ್‌ ಕೋಡ್‌’ ನಂತರ ಅವರು ಕೈಗೆತ್ತಿಕೊಂಡಿರುವ ಸಿನಿಮಾ ಇದು. ‘ನಾಲ್ಕು ವರ್ಷಗಳ ಕಾಲ ಸಾಧುಗಳ ಸಂಗ ಮಾಡಿ ಅಧ್ಯಾತ್ಮ, ವೈರಾಗ್ಯದ ಮೊರೆ ಹೋಗಿದ್ದೆ. ಆ ವೇಳೆಯಲ್ಲಿ ‘ಮುಖವಾಡ ಇಲ್ಲದವನು’ ಎಂಬ ಪುಸ್ತಕವನ್ನೂ ಬರೆದಿದ್ದೆ. ಸಾಧು ಸಂತರಿಂದ ಕಲಿತದ್ದನ್ನೇ ಇದೀಗ ಸಿನಿಮಾ ಮಾಡಿದ್ದೇನೆ’ ಎಂಬುದು ನಿರ್ದೇಶಕರ ಮಾತು.

ಪ್ರಭಾಸ್ 'ರಾಧೆ ಶ್ಯಾಮ್' ಟೀಸರ್ ರಿಲೀಸ್‌; ಬೆಚ್ಚಿಬೆರಗಾದ ನೆಟ್ಟಿಗರು!

ಕಾವ್ಯಾ ಗೌಡ, ರಚನಾ, ಸೊನಾಲಿ ರಾಯ… ಹಾಗೂ ಹರೀಶ್‌ ಸಾರಾ ಚಿತ್ರದ ಇತರೆ ಪಾತ್ರಧಾರಿಗಳು. ದುರ್ಗಾ ಪ್ರಸಾದ್‌ ಸಂಗೀತ, ಡಾ. ಮಹಾರಾಜಾ ಹಿನ್ನೆಲೆ ಸಂಗೀತ, ಮಧು ಆರ್ಯ ಕ್ಯಾಮರಾ ಜವಾಬ್ದಾರಿ ನಿಭಾಯಿಸಿದರೆ. ಡಿಸೆಂಬರ್‌ ತಿಂಗಳಲ್ಲಿ ಈ ಸಿನಿಮಾ ತೆರೆಗೆ ಬರುವ ಸಾಧ್ಯತೆಗಳಿವೆ.