ಅನಿವಾರ್ಯವಾಗಿ ಲಾಕ್‌ಡೌನ್‌ ತೆರವನ್ನೇ ಕಾದು ಕುಳಿತಿರುವ ಈ ಚಿತ್ರತಂಡಗಳು ಮೇ ಅಥವಾ ಜೂನ್‌ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಆಲೋಚನೆಯಲ್ಲಿವೆ. ಹಾಗೊಂದು ವೇಳೆ ಆ ಹೊತ್ತಿಗೆ ಲಾಕ್‌ಡೌನ್‌ ಮುಗಿದು ಸಿನಿಮಾ ರಿಲೀಸ್‌ಗೆ ಕೊರೋನಾ ಸಂಕಷ್ಟದಿಂದ ತತ್ತರಿಸಿದ ಮಂದಿ ಚಿತ್ರಮಂದಿರಕ್ಕೆ ಬರಲು ಧೈರ್ಯ ಮಾಡುತ್ತಾರೆಯೇ ಎನ್ನುವ ಪ್ರಶ್ನೆಯೂ ಕಾಡುತ್ತಿದೆ.

ಈ ಕುರಿತಂತೆ ಸಲಗ ಚಿತ್ರಗ ನಿರ್ಮಾಪಕ ಕೆಪಿ ಶ್ರೀಕಾಂತ್‌ ಹೇಳುವುದಿಷ್ಟು-

‘ಲಾಕ್‌ಡೌನ್‌ ಸದ್ಯಕ್ಕೆ ತೆರವಾಗುವುದು ಅಷ್ಟುಸುಲಭ ಇಲ್ಲ. ಎರಡ್ಮೂರು ದಿನಗಳ ಬೆಳವಣಿಗೆ ನೋಡಿದರೆ ಇದು ಇನ್ನಷ್ಟುದಿನಕ್ಕೆ ಹೋಗುವ ಸಾಧ್ಯತೆಗಳು ಕಾಣುತ್ತಿವೆ. ಇದೆಲ್ಲ ತಿಳಿಯಾಗಬೇಕಾದರೆ ಕನಿಷ್ಟಜೂನ್‌ ತಿಂಗಳಾದರೂ ಕಳೆಯಬೇಕೇನೋ ಎಂದೆನಿಸುತ್ತಿದೆ. ಆ ಹೊತ್ತಿಗಾದರೂ ಚಿತ್ರಮಂದಿರಗಳು ಓಪನ್‌ ಆಗಿ, ಜನ ನಿರ್ಭೀತಿಯಿಂದ ಚಿತ್ರಮಂದಿರಕ್ಕೆ ಬರುತ್ತಾರೆನ್ನುವುದೇ ಖಾಯಂ ಇಲ್ಲ. ಒಂದು ಹಂತದಲ್ಲಿ ನಮಗೂ ಕಾನ್ಫಿಡೆನ್ಸ್‌ ಬಂದ ನಂತರವೇ ಸಿನಿಮಾ ರಿಲೀಸ್‌ ಮಾಡಿದರೆ ಒಳ್ಳೆಯದು ಅಂತ ಯೋಚಿಸುತ್ತಿದ್ದೇವೆ’.

ಸಂಜನಾ ಆನಂದ್‌ಗೆ 5 ಪ್ರಶ್ನೆಗಳು;ಸಲಗ ಚಿತ್ರದ ನಾಯಕಿ ಜತೆ ಮಾತುಕತೆ!

ಇನ್ನು ದರ್ಶನ್‌ ನಟನೆಯ ರಾಬರ್ಟ್‌ ಸಿನಿಮಾದೂ ಅದೇ ಕತೆ.

‘ಲಾಕ್‌ಡೌನ್‌ ನಿಗಧಿತ ಅವಧಿಗೆ ಕೊನೆ ಆಗುತ್ತೋ ಅಥವಾ ಇನ್ನು ಮೂರು ತಿಂಗಳಿಗೆ ವಿಸ್ತರಣೆಗೆ ಮುಂದುವರೆಯುತ್ತೋ ಅದೆಲ್ಲ ಮುಗಿದ ನಂತರವೇ ಚಿತ್ರವನ್ನು ತೆರೆಗೆ ತರುವ ಆಲೋಚನೆ ನಮ್ಮದು. ಈಗ ಯಾವುದೂ ನಮ್ಮ ಕೈಯಲ್ಲಿ ಇಲ್ಲ. ಇಡೀ ಜಗತ್ತೇ ಕೊರೋನಾ ಭೀತಿಯಲ್ಲಿದೆ. ಪರಿಸ್ಥಿತಿ ಒಂದು ಹಂತಕ್ಕೆ ಬಂದು, ಜನರು ಚಿತ್ರಮಂದಿರಕ್ಕೆ ಬರುವ ಹೊತ್ತಿಗೆ ನಾವು ಚಿತ್ರಮಂದಿರಕ್ಕೆ ಬರುತ್ತೇವೆ. ಅಲ್ಲಿಯ ತನಕ ಸ್ಟೇ ಹೋಮ್‌ ಸ್ಟೇ ಸೇಫ್‌’ ಎನ್ನುತ್ತಾರೆ ‘ರಾಬರ್ಟ್‌’ ನಿರ್ಮಾಪಕ ಉಮಾಪತಿ.

ದರ್ಶನ್‌ ಅಂದ್ರೆ ಪರ್ಫೆಕ್ಟ್ ಕೋ ಸ್ಟಾರ್‌: ಆಶಾ ಭಟ್‌

ಯುವರತ್ನ ಚಿತ್ರಕ್ಕೆ ಇನ್ನು ಎರಡು ಹಾಡುಗಳ ಚಿತ್ರೀಕರಣ ಬಾಕಿಯಿದೆ. ಲಾಕ್‌ಡೌನ್‌ ಮುಗಿದ ಮೇಲೆಯೇ ಚಿತ್ರೀಕರಣ ನಡೆಯಲಿದೆ. ಅಲ್ಲಿಗೆ ಜುಲೈ ತಿಂಗಳಿಗೆ ಯುವರತ್ನ ತೆರೆ ಕಾಣಬಹುದು. ಉಳಿದಂತೆ ಹೊಸಬರ ಸಿನಿಮಾಗಳು, ಕಡಿಮೆ ಬಜೆಟ್‌ ಪರಿಸ್ಥಿತಿ ನೋಡಿಕೊಂಡು ತೆರೆಗೆ ಬರಲಿವೆ. ಆದರೆ ಅವರ ಪರಿಸ್ಥಿತಿಯೂ ಕಷ್ಟದಲ್ಲಿದೆ.