ಸೀಡಿ ಲೇಡಿ.... ಕಳೆದ ನಾಲ್ಕೈದು ವಾರಗಳಿಂದ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಹೆಸರು ಇದು. ಇದೇ ಹೆಸರು ಈಗ ಸಿನಿಮಾವೊಂದಕ್ಕೆ ಟೈಟಲ್‌ ಆಗುತ್ತಿದೆ.

 ಈಗಾಗಲೇ ಈ ಹೆಸರನ್ನು ನಿರ್ಮಾಪಕ ಸಂದೇಶ್‌ ನಾಗರಾಜ್‌ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಣಿ ಮಾಡಿಸಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಸಂಚಲನ ಮೂಡಿಸಿದ ವಿಷಯವೊಂದಕ್ಕೆ ಸಿನಿಮಾ ರೂಪ ಕೊಡಲು ಹೊರಟಿದ್ದಾರೆ ನಿರ್ಮಾಪಕ ಸಂದೇಶ್‌ ನಾಗರಾಜ್‌ ಅವರು. ಚಿತ್ರದ ನಿರ್ದೇಶಕರು ಯಾರು, ಯಾವಾಗ ಸಿನಿಮಾ ಸೆಟ್ಟೇರುತ್ತದೆ ಎಂಬುದು ಇನ್ನೂ ಪಕ್ಕಾ ಆಗಿಲ್ಲ. ಆದರೆ, ಹೆಸರು ಮಾತ್ರ ಸಂದೇಶ್‌ ಬ್ಯಾನರ್‌ನಲ್ಲಿ ರಿಜಿಸ್ಟರ್‌ ಆಗಿದೆ.

5 ಮಿಲಿಯನ್‌ ದಾಟಿದ 'ಯುವರತ್ನ' ಟ್ರೇಲರ್‌; ಪವರ್‌ ಪ್ಯಾಕ್‌ ಡೈಲಾಗ್‌, ಪುನೀತ್‌ ಖದರ್‌! 

‘ಹೌದು ನನ್ನ ಬ್ಯಾನರ್‌ನಲ್ಲಿ ಸೀಡಿ ಲೇಡಿ ಹೆಸರು ನೋಂದಣಿ ಮಾಡಿಸಿದ್ದೇನೆ. ಯಾವಾಗ ಸಿನಿಮಾ ಸೆಟ್ಟೇರುತ್ತದೆ ಎಂಬುದನ್ನು ಸದ್ಯದಲ್ಲೇ ಹೇಳುತ್ತೇನೆ. ಹೆಸರು ರಿಜಿಸ್ಟರ್‌ ಮಾಡಿದ ಮೇಲೆ ಕತೆ ಮಾಡಿಸುತ್ತಿದ್ದೇನೆ. ಹ್ಯೂಮರ್‌ ಹಾಗೂ ಒಂದಿಷ್ಟುಜನಕ್ಕೆ ಬುದ್ಧಿ ಹೇಳುವ ರೀತಿಯಲ್ಲಿ ಸಿನಿಮಾ ಇರುತ್ತದೆ.

ಸುಮಂತ್‌ ಜೊತೆಗೆ ನಟಿಸೋದೇ ಅದೃಷ್ಟ: ಮಾನ್ವಿತಾ ಕಾಮತ್‌ 

ನಾವು ಡೀಸೆಂಟಾಗಿಯೇ ಸಿನಿಮಾ ಮಾಡುತ್ತೇವೆ. ಸುಮ್ಮನೆ ಪ್ರಚಾರಕ್ಕಾಗಿ ಈ ಹೆಸರು ನೋಂದಣಿ ಮಾಡಿಸಿಲ್ಲ. ಇತ್ತೀಚೆಗೆ ಸಂಚಲನ ಮೂಡಿಸಿದ ವಿಷಯ ಇದು ಎಂಬುದು ಹೌದು. ಆದರೆ, ಇಂಥ ಕೆಲಸಗಳನ್ನು ಮಾಡಿ ದುಡ್ಡು ಮಾಡುವವರ ಬಗ್ಗೆ ಎಚ್ಚರಿಸುವ ಸಿನಿಮಾ ಇದು. 300 ಸೀಡಿ ಇದೆ ಎನ್ನುವವರಿಗೂ ಇದೊಂದು ಪಾಠ ಎಂದುಕೊಂಡೇ ಸಿನಿಮಾ ಮಾಡಿಸುತ್ತಿದ್ದೇನೆ’ ಎನ್ನುತ್ತಾರೆ ನಿರ್ಮಾಪಕ ಸಂದೇಶ್‌ ನಾಗರಾಜ್‌.