ಪ್ರಿಯಾ ಕೆರ್ವಾಶೆ

ತೆಲುಗಿನಲ್ಲಿ ನಿಮ್ಮ ಮೊದಲ ಸಿನಿಮಾ, ಹೇಗಿದೆ ಫೀಲಿಂಗ್‌?

ತುಂಬ ಖುಷಿ ಇದೆ. ತುಂಬ ಒಳ್ಳೆಯ ಟೀಮ್‌ ಸಿಕ್ಕಿದೆ. ‘ಮಲ್ಲಿರಾವ’ದಂಥ ಹಿಟ್‌ ಚಿತ್ರಗಳ ಹೀರೋ, ನಾಗಾರ್ಜುನ ಅವರ ಅಳಿಯ ಸುಮಂತ್‌ ಅಕ್ಕಿನೇನಿ ಜೊತೆಗೆ ನನ್ನ ಮೊದಲ ಸಿನಿಮಾ ಮಾಡ್ತಿರೋದಕ್ಕೂ ಅದೃಷ್ಟಬೇಕಲ್ವಾ?

ಅವರ ಜೊತೆಗೆ ತೆರೆ ಹಂಚಿಕೊಂಡ ನಟಿಯರೆಲ್ಲ ಸಕ್ಸಸ್‌ ಆಗ್ತಾರೆ ಅನ್ನೋ ಮಾತಿದೆಯಲ್ಲಾ?

ನಿಜ. ಅನುಷ್ಕಾ, ಕಾಜಲ್‌ ಅಗರವಾಲ್‌, ಕೃತಿ ಕರಬಂಧ ಸೇರಿದಂತೆ ಇವರ ಜೊತೆಗೆ ನಟಿಸಿದ ನಾಯಕಿಯರು ಸಖತ್‌ ಫೇಮಸ್‌ ಆಗಿದ್ದಾರೆ. ನನಗೂ ಅಂಥಾ ಸಕ್ಸಸ್‌ ಸಿಗಲಿ ಅನ್ನೋ ಆಸೆಯಂತೂ ಇದ್ದೇ ಇದೆ.

ತಂದೆ ಜೊತೆ ಒಂದು ಫೋಟೋ ಇಲ್ಲ; ಕಣ್ಣೀರಿಟ್ಟ ಮಾನ್ವಿತಾಗೆ ಸಿಗ್ತು ಬಿಗ್ ಸರ್ಪ್ರೈಸ್!

ಇದರಲ್ಲಿ ಯಾವ ಪಾತ್ರ ನಿಮ್ಮದು?

ಇದು ರೊಮ್ಯಾಂಟಿಕ್‌ ಕಾಮಿಡಿ ಜಾನರ್‌ನ ಸಿನಿಮಾ. ಇಲ್ಲೀವರೆಗೂ ನಾನು ಮಾಡಿರೋದೆಲ್ಲ ರಿಯಲ್‌ನಲ್ಲಿ ನಾನಲ್ಲದೇ ಇರೋ ಪಾತ್ರ. ಇಲ್ಲಿ ಮಾತ್ರ ನಾನು ರಿಯಲ್‌ ಆಗಿ ಹೇಗಿದ್ದೀನೋ, ಸಿನಿಮಾದಲ್ಲೂ ಹಾಗೇ ಇರ್ತೀನಿ. ಬಹಳ ನೇರ ನಡೆನುಡಿಯ, ಮೊದಲ ಸಲವೇ ಏನನ್ನೂ ಜಡ್ಜ್‌ ಮಾಡದ, ಮೆಚ್ಯೂರ್‌್ಡ ಪಾತ್ರವಿದು. ಹೀಗಾಗಿ ಪಾತ್ರ ಮಾಡೋದೂ ಸುಲಭ. ನನಗೆ ಬಹಳ ಕನೆಕ್ಟ್ ಆಯ್ತು. ನಾನು ಫುಡಿ, ಅದಕ್ಕೂ ಕನೆಕ್ಟ್ ಆಗಿದೆ. ಇತ್ತೀಚೆಗೆ ಡಿವೋರ್ಸ್‌ ಹೆಚ್ಚಾಗ್ತಿದೆ. ಯೋಚನೆ ಮಾಡದೇ ಮದುವೆ ಆಗಿ ಬೇಡ ಅಂತ ಬಿಟ್ಟು ಹೋಗೋ ರಿಲೇಶನ್‌ಶಿಪ್‌ಗಳೇ ಇತ್ತೀಚೆಗೆ ಹೆಚ್ಚಾಗ್ತಿದೆ. ಅಂಥವ್ರಿಗೂ ಮನಸ್ಸಿಗೆ ಹತ್ತಿರ ಆಗೋ ಸಿನಿಮಾ.

'ಟಗರು ಪುಟ್ಟಿ' ಮಾನ್ವಿತಾ ಫೋನ್‌ ನೋಡ್ರಿ, ಸೀಕ್ರೆಟ್‌ ಮಾತ್ರವಲ್ಲ ವೆಯ್ಟ್ ಗೊತ್ತಾಗುತ್ತೆ! 

ನಿಮ್‌ ಟೀಮ್‌ ಹೇಗಿದೆ?

ಕೀರ್ತಿ ಕುಮಾರ್‌ ಅಂತ ನಿರ್ದೇಶಕರು. ಒಂದು ತಮಿಳು ಸಿನಿಮಾ ಮಾಡಿ ಆಮೇಲೆ ಬ್ರೇಕ್‌ ತಗೊಂಡು ಈಗ ಮತ್ತೆ ‘ಮಲ್ಲಿ ಮೊದಲೈಂದಿ’ ಚಿತ್ರ ಮಾಡುತ್ತಿದ್ದಾರೆ. ಅವರದೂ ತೆಲುಗಿನಲ್ಲಿ ಮೊದಲ ಪ್ರಯತ್ನ. ಸಿನಿಮಾ ಬಗ್ಗೆ ತಿಳ್ಕೊಂಡಿರೋ ಯಂಗ್‌ ಡೈರೆಕ್ಟರ್‌. ಈ ತಿಂಗಳು 27 ನಿಂದ ಸಿನಿಮಾ ಶೂಟಿಂಗ್‌ ಶುರು. ತೇಜ್‌ ಚರಣ್‌ ಅಂತ ನಿರ್ಮಾಪಕರು. ಮೊದಲು ಯುಎಸ್‌ನಲ್ಲಿ ಸಿನಿಮಾ ಪ್ರೊಡ್ಯೂಸ್‌ ಮಾಡುತ್ತಿದ್ದರು.