ಸಿಂಪಲ್‌ ಸುನಿ ನಿರ್ದೇಶನದ ದುಶ್ಯಂತ ನಾಯಕನಾಗಿರುವ ಹೊಸ ಸಿನಿಮಾ ‘ರಾಬಿನ್‌ ಹುಡ್‌’ ಪೋಸ್ಟರ್‌ ಬಿಡುಗಡೆಯಾಗಿದೆ. ನಾಯಕ ದುಶ್ಯಂತ ಅವರ ಬರ್ತ್‌ಡೇ ದಿನ ಈ ಪೋಸ್ಟರ್‌ಅನ್ನು ಲಾಂಚ್‌ ಮಾಡಲಾಗಿದೆ.

ಪುಷ್ಕರ್‌ ಫಿಲ್ಮ್ಸ್‌ ಬ್ಯಾನರ್‌ನಲ್ಲಿ ಪುಷ್ಕರ್‌ ಮಲ್ಲಿಕಾರ್ಜುನಯ್ಯ ಹಾಗೂ ದೀಪಕ್‌ ತಿಮ್ಮಪ್ಪ ಈ ಚಿತ್ರದ ನಿರ್ಮಿಸುತ್ತಿದ್ದಾರೆ. ಯುದ್ಧ, ಬಾಣಗಳ ಹಿನ್ನೆಲೆಯಲ್ಲಿ ಆಧುನಿಕ ರಾಬಿನ್‌ಹುಡ್‌ ಆಗಿ ಬಿಲ್ಲೆತ್ತಿ ಹಿಡಿದಿರುವ ದುಶ್ಯಂತ್‌ ಪೋಸ್ಟರ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪ್ರೇಮಿಗಳಿಗೆ ಬುದ್ಧಿ ಹೇಳ್ತಾರೆ ಲವ್ ಬಾಬಾ..!

ರೋಮ್ಯಾಂಟಿಕ್ ಮತ್ತು ಹಾಸ್ಯ ಚಿತ್ರಗಳಿಗೆ ಹೆಸರುವಾಸಿಯಾದ ಸುನಿ, ಈ ಪೋಸ್ಟರ್ ಕಾಣುವ ರೀತಿಯಲ್ಲಿ ಹೊಸ ಪ್ರಕಾರವನ್ನು ಅನ್ವೇಷಿಸಿದ್ದಾರೆ.
ಸಿನಿಮಾ ಎನೌನ್ಸ್ ಮಾಡಿದಾಗ ಚಿತ್ರದ ಶೀರ್ಷಿಕೆಗಿಂತ ಹೆಚ್ಚಿನದನ್ನು ಏನನ್ನೂ ಹೇಳದ ತಂಡವು ಈ ಚಿತ್ರದ ಸುತ್ತ ಕುತೂಹಲ ಉಳಿಸಿಕೊಂಡಿತ್ತು.ಈ ಸಿನಿಮಾದಲ್ಲಿ ಹೆಚ್ಚಾಗಿ ಹೊಸಬರು ಇರಲಿದ್ದಾರೆ ಎನ್ನಲಾಗಿತ್ತು.