Asianet Suvarna News Asianet Suvarna News

Rider Trailer: ಡಿಸೆಂಬರ್ 16ರಂದು ಟ್ರೇಲರ್‌ನಲ್ಲಿ ದರ್ಶನ ನೀಡಲು ನಿಖಿಲ್‌ ಕುಮಾರ್‌ ರೆಡಿ

ಯುವರಾಜ, ರಾಜಕಾರಣಿ ನಿಖಿಲ್‌ ಕುಮಾರ್‌ ಅಭಿನಯದ ಬಹು ನಿರೀಕ್ಷಿತ 'ರೈಡರ್‌' ಚಿತ್ರ ಡಿಸೆಂಬರ್ 24ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಈ ಮಧ್ಯೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ  ಘೋಷಿಸಿದೆ.

Kannada Movie Rider Trailer Date Announced Starrer Nikhil Kumar gvd
Author
Bangalore, First Published Dec 9, 2021, 7:45 PM IST
  • Facebook
  • Twitter
  • Whatsapp

ಯುವರಾಜ, ರಾಜಕಾರಣಿ ನಿಖಿಲ್‌ ಕುಮಾರ್‌ (Nikhil Kumar) ಅಭಿನಯದ ಬಹು ನಿರೀಕ್ಷಿತ 'ರೈಡರ್‌' (Rider) ಚಿತ್ರದ ಫಸ್ಟ್‌ಲುಕ್, ಟೀಸರ್ ಮತ್ತು ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಜನ ಮನ್ನಣೆ ಪಡೆದುಕೊಂಡಿದೆ. ಡಿಸೆಂಬರ್ 24ಕ್ಕೆ 250ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ 'ರೈಡರ್' ಚಿತ್ರ ಬಿಡುಗಡೆಯಾಗಲಿದ್ದು, ಸದ್ಯ ಚಿತ್ರತಂಡ ಚಿತ್ರದ ಪ್ರಚಾರ ಕಾರ್ಯಗಳನ್ನು ನಡೆಸುತ್ತಿದೆ. ಈ ನಡುವೆ ಚಿತ್ರದ ಟ್ರೇಲರ್ (Trailer) ಬಿಡುಗಡೆ ಮಾಡುವುದಾಗಿ ಚಿತ್ರತಂಡ  ಘೋಷಿಸಿದೆ. ಈ ಬಗ್ಗೆ ನಿಖಿಲ್‌ ಕುಮಾರ್‌ ತಮ್ಮ ಇನ್‌ಸ್ಟಾಗ್ರಾಮ್‌ (Instagram) ಖಾತೆಯಲ್ಲಿ ರೈಡರ್ ಚಿತ್ರದ ಟ್ರೇಲರ್ ಇದೇ ಡಿಸೆಂಬರ್ 16ರಂದು ಸಂಜೆ 6:54ಕ್ಕೆ ಲಹರಿ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಪೋಸ್ಟ್‌ ಮಾಡಿದ್ದಾರೆ.

'ಸೀತಾರಾಮ ಕಲ್ಯಾಣ' (Seetharama Kalyana) ಚಿತ್ರದ ಮೂಲಕ ಲವರ್ ಬಾಯ್​ (Lover Boy) ಆಗಿ ಸ್ಯಾಂಡಲ್​ವುಡ್​ ಪ್ರೇಕ್ಷಕರನ್ನು ರಂಜಿಸಿದ್ದ ನಿಖಿಲ್ ಕುಮಾರಸ್ವಾಮಿ  'ರೈಡರ್' ಚಿತ್ರದಲ್ಲಿ ಬಾಸ್ಕೆಟ್ ಬಾಲ್ ಪ್ಲೇಯರ್ (Basketball Player) ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಿಖಿಲ್‌ಗೆ ನಾಯಕಿಯಾಗಿ ಯುವ ನಟಿ ಕಾಶ್ಮೀರಿ ಪರ್ದೇಸಿ (Kashmira Pardeshi) ನಟಿಸಿದ್ದು, ಮತ್ತೊಬ್ಬ ನಾಯಕಿಯಾಗಿ ಅನುಷಾ ರೈ (Anusha Rai) ಅಭಿನಯಿಸಿದ್ದಾರೆ. 'ರೈಡರ್'​ ಆ್ಯಕ್ಷನ್​ ಚಿತ್ರವಾಗಿದ್ದು, ಈಗಾಗಲೇ ಚಿತ್ರದ ಟೀಸರ್ (Teaser)​ ಮತ್ತು ಹಾಡುಗಳು (Songs) ಧೂಳೆಬ್ಬಿಸಿವೆ. ಭರ್ಜರಿ ಆ್ಯಕ್ಷನ್​ ದೃಶ್ಯಗಳಲ್ಲಿ ನಿಖಿಲ್​ ನಟಿಸಿದ್ದು, ಈ ಚಿತ್ರದ ಮೇಲೆ ಅವರ ಅಭಿಮಾನಿಗಳು ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Rider Song Release: ಕಾಶ್ಮೀರಿ ಪರ್ದೇಸಿ ಜೊತೆ 'ಮೆಲ್ಲನೆ' ಬಂದ ನಿಖಿಲ್ ಕುಮಾರ್

ವಿಜಯ್​ ಕುಮಾರ್​ ಕೊಂಡ (Vijay Kumar Konda) ಅವರು 'ರೈಡರ್​' ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದು, ನಿಖಿಲ್‌ ಕುಮಾರ್‌ ಆಪ್ತ ಸುನೀಲ್‌ ಗೌಡ (Sunil Gowda) ಈ ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ. ಲಹರಿ ಫಿಲ್ಮ್ಸ್ (Lahari Films)​​ ಕೂಡ ನಿರ್ಮಾಣದಲ್ಲಿ ಪಾಲುದಾರಿಕೆ ಹಂಚಿಕೊಂಡಿದೆ. 'ರೈಡರ್' ಬಿಡುಗಡೆ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ (Pressmeet) ನಿಖಿಲ್‌, ಪುನೀತ್‌ (Puneeth Rajkumar) ಅವರ ಗುಣಗಾನ ಮಾಡಿದರು. ರೈಡರ್‌ ಎಲ್ಲಾ ವರ್ಗದವರಿಗೂ ರೀಚ್‌ ಆಗುವ ಚಿತ್ರ. ಪ್ರೀತಿಯಲ್ಲಿರಬೇಕಾದ ಪ್ರಾಮಾಣಿಕತೆ, ಅನಿರೀಕ್ಷಿತಗಳನ್ನ ಸಿನಿಮಾ ಹೇಳುತ್ತೆ. ಟೀನೇಜ್‌ ಹುಡುಗರಿಗೂ ಮೆಸೇಜ್‌ ಇದೆ. ಆದರೂ ಯಾವ ನಿರ್ದೇಶಕರೂ ನನ್ನ ಕೈಲಿ ಯಾಕೆ ಮಚ್ಚು ಹಿಡಿಸಿಲ್ಲ, ಉದ್ದೂದ್ದ ಡೈಲಾಗ್‌ ಕೊಡಲ್ಲ ಅಂತ ನಿಜಕ್ಕೂ ಗೊತ್ತಾಗ್ತಿಲ್ಲ ಎಂದು ನಿಖಿಲ್ ಹೇಳಿದರು. 

Rider;ಕಲಾವಿದನಾಗಿ ಗುರುತಿಸಿಕೊಳ್ಳುವುದೇ ನನಗಿಷ್ಟ: ನಿಖಿಲ್‌ ಕುಮಾರ್‌

ಇನ್ನು ವಿಜಯ್‌ ಕುಮಾರ್‌ ಕೊಂಡ ಅದ್ಭುತ ಕತೆಯನ್ನು ಈ ಚಿತ್ರದ ಮೂಲಕ ಹೇಳಿದ್ದಾರೆ. ನಾನು ಮುಂದಿನ ದಿನಗಳಲ್ಲಿ ಹೊಸಬರಿಗೆ ಸಿನಿಮಾ ನಿರ್ಮಿಸುತ್ತಿದ್ದೇನೆ. ಈ ನಿಟ್ಟಿನಲ್ಲಿ ಎನ್‌ಕೆ ಬ್ಯಾನರ್‌ (NK Banner) ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಆರಂಭಿಸುತ್ತಿದ್ದೇನೆ  ಎಂದರು ನಿಖಿಲ್‌. 'ಈ ಚಿತ್ರದ ಮೂಲಕ ನನ್ನ ನಿರ್ಮಾಪಕನನ್ನಾಗಿ ಮಾಡಿದ ನಿಖಿಲ್‌ ಕುಮಾರ್‌ ಸೇರಿದಂತೆ ಪ್ರತಿಯೊಬ್ಬರಿಗೂ ಧನ್ಯವಾದಗಳು' ಎಂದರು ಸುನೀಲ್‌ ಗೌಡ. 'ರೈಡರ್‌' ಚಿತ್ರಕ್ಕೆ ಕೆ.ಎಮ್.ಪ್ರಕಾಶ್ ಸಂಕಲನ, ಶ್ರೀಶ ಕುದುವಳ್ಳಿ ಕ್ಯಾಮೆರಾ ಕೈ ಚಳಕ, ಶರತ್ ಚಕ್ರವರ್ತಿ ಸಂಭಾಷಣೆ, ಭೂಷನ್ ಕೋರಿಯೊಗ್ರಾಫಿ, ಡಾ.ರವಿವರ್ಮ ಸಾಹಸ ಚಿತ್ರಕ್ಕಿದೆ. ದತ್ತಣ್ಣ, ಗರುಡ ರಾಮ್, ಚಿಕ್ಕಣ್ಣ, ಶೋಭರಾಜ್, ರಾಜೇಶ್ ನಟರಂಗ, ಶಿವರಾಜ್.ಕೆ.ಆರ್.ಪೇಟೆ, ಬಿಗ್​ ಬಾಸ್​ ವಿನ್ನರ್​ ಮಂಜು ಪಾವಗಡ, ಸಂಪದ ಹುಲಿವಾನ, ನಿಹಾರಿಕ ಸೇರಿದಂತೆ ದೊಡ್ಡ ತಾರಬಳಗ ಚಿತ್ರದಲ್ಲಿದೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ (Arjun Janya) ಸಂಗಿತ ಸಂಯೋಜನೆ ಈ ಚಿತ್ರಕ್ಕಿದೆ.
 

Follow Us:
Download App:
  • android
  • ios